ಜಾನಪದ ಕಲೆಗಳು ನಮ್ಮ ದೇಶದ ಅಲಿಖಿತ ಸಂವಿಧಾನವಿದ್ದಂತೆ: ಸಂಕಣ್ಣನವರ

ಬ್ಯಾಡಗಿ03: ಜಾನಪದ ಕಲೆಗಳು ನಮ್ಮ ದೇಶದ ಅಲಿಖಿತ ಸಂವಿಧಾನವಿದ್ದಂತೆ, ಜಾನಪದ ಒಂದೊಂದು ಪ್ರಕಾರಗಳ ಮೇಲೆ ನೂರಾರು ಪಿಎಚ್ಡಿಗಳನ್ನು ಮಾಡವಷ್ಟು ಸಮೃದ್ಧವಾದ ಸಾಹಿತ್ಯ ಅದರಲ್ಲಡಗಿದೆ, ಸರ್ಕಾರ  ಒಂದೊಮ್ಮೆ ಜನಪದ ಸಾಹಿತ್ಯವನ್ನು ತಮ್ಮ ಕಂಪ್ಯೂಟರ್ ಸಂಗ್ರಹಿಸಿಟ್ಟಿದ್ದೇ ಆದಲ್ಲಿ ನೂರಾರು ತಲೆಮಾರುಗಳಿಗೆ ಅವಶ್ಯವಿರುವ ಮಾರ್ಗಸೂಚಿ ವಿಷಯ ದೊರೆಯಲಿದೆ ಎಂದು ಚಲನಚಿತ್ರ ನಟಿ ಹಾಗೂ ಹಿರಿಯ ಮಹಿಳಾ ಸಾಹಿತಿ ಸಂಕಮ್ಮ ಸಂಕಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.

 ಗ್ರಾಮದೇವತೆ (ದ್ಯಾಮವ್ವದೇವಿ) ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ಚಾವಡಿ ರಸ್ತೆಯಲ್ಲಿನ ವಾಜಪೇಯಿ ರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ ಜಾನಪದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಾನಪದ ಕಲೆಗಳನ್ನು ಹಗುರವಾಗಿ ಪರಿಗಣಿಸಬಾರದು ಸಾರ್ವಜನಿಕರು ಸೇರಿದಂತೆ ಸಮಾಜ ಸರ್ಕಾರಗಳು ಹೇಗಿರಬೇಕೆಂಬುದನ್ನು ಜಾನಪದದ ವಿವಿಧ ಪ್ರಕಾರಗಳಲ್ಲಿ ಸೂಚಿಸಲಾಗಿದೆ, ಇವೆಲ್ಲವೂ ಸಾಮಾನ್ಯ ಜನರ ಬಾಯಿಂದ ವಗರ್ಾವಣೆಗೊಂಡ ಸಾಹಿತ್ಯವಾಗಿದ್ದರೂ ಸಹ ಸಮಾಜದ ತಿದ್ದುತೀರುವಳಿಗಳನ್ನು ಕಾಲಕಾಲಕ್ಕೆ ತಿಳಿಸಿಕೊಡುವಲ್ಲಿ ಮಹತ್ತರ ಪಾತ್ರವನ್ನು ವಹಿಸಿವೆ ಎಂದರು.

ಸಂಪ್ರದಾಯದ ಮುಂದುವರಿದ ಭಾಗ:ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಗಂಗಾಧರಶಾಸ್ರ್ತಿ ಹಿರೇಮಠ ಮಾತನಾಡಿ, ಜಾನಪದ ಗೀತೆಗಳು ಸೇರಿದಂತೆ ಗೀಗಿಪದ, ತತ್ವಪದ, ಏಕತಾರಿಪದ, ಭಜನೆ, ಡೊಳ್ಳು, ಕೋಲಾಟ, ಲಾವಣಿ ಹಾಡಗಳು ಬಹಳ ಹಿಂದಿ ನಿಂದಲೂ ನಮ್ಮ ದೇಶದ ಸಂಪ್ರದಾಯದ ಮುಂದುವರಿದ ಭಾಗವಾಗಿದೆ, ಜನಪದದಲ್ಲಿನ ನೂರಾರು ಪ್ರಕಾರಗಳು ಇಂದಿಗೂ ಜನರ ಮನಸ್ಸನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಗಂಭೀರ ಚಿಂತನೆ ನಡೆಸುವ ಮೂಲಕ ಜಾನಪದ ಸಂಪತ್ತನ್ನು ಬರುವ ಪೀಳಿಗೆಗೆ ಕೊಂಡೊಯ್ಯುವ ಕಾರ್ಯವಾಗಬೇಕು ಎಂದು 

ನಶಿಸಲು ಸಾಧ್ಯವಿಲ್ಲ: ಜನಪದವು ಮೂಲತಃ ಪರಂಪರಾಗತವಾಗಿ ಬಂದಂತಹ ಜ್ಞಾನವಾಗಿದ್ದು ಹೇಳುತ್ತಾ, ಕೇಳುತ್ತಾ, ಜನರ ಬಾಯಿಂದ ಬಾಯಿಗೆ ವರ್ಗಾಯಿಸುವ ಮೌಖಿಕ ಸಾಹಿತ್ಯವಾಗಿದೆ, ಹೀಗಾಗಿ ಜಾನಪದ ಸಾಹಿತ್ಯವು ಜೀವಂತ ಪಳಿಯುಳಿಕೆ ಆಗಬಲ್ಲದೇ ವಿನಃ ಎಂದಿಗೂ ನಶಿಸಲು ಸಾಧ್ಯವಿಲ್ಲ ಇನ್ನೊಬ್ಬರ ಬಾಯಲ್ಲಿ ಮತ್ತೆ ಗರಿಗೆದರಿ ನಿಲ್ಲುವಂತಹ ಶಕ್ತಿ ಜನಪದ ಹೊಂದಿದೆ ಎಂದರು.

 ವೇದಿಕೆಯಲ್ಲಿ ವೇದಮೂರ್ತಿ  ರಾಚಯ್ಯನವರು ಓದೋಸಿಮಠ, ಚಿಕ್ಕಪ್ಪ ಹಾದಿಮನಿ, ರೇವಣಸಿದ್ಧಯ್ಯ ಹಿರೇಮಠ, ಎಂ.ಬಿ. ಶಿವಾನಂದಪ್ಪ, ಬಾಲಚಂದ್ರಗೌಡ ಪಾಟಿಲ, ಪಾಂಡುರಂಗ ರಾಯ್ಕರ, ಸಿಪಿಐ ಭಾಗ್ಯವತಿ ಬಂತ್ಲಿ, ಚಿಕ್ಕಪ್ಪ ಛತ್ರದ, ರವಿ ಪೂಜಾರ ಟಿ.ಪಿ.ರಾಣೆಬೆನ್ನೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗದಗ ಜಿಲ್ಲೆ ರೋಣ ತಾಲೂಕಿನ ಕೊತಬಾಳ ಗ್ರಾಮದ ಶಂಕ್ರಣ್ಣ ಸಂಕಣ್ಣನವರ ತಂಡ ನಡೆಸಿಕೊಟ್ಟ ಜನಪದ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.