ಲೋಕದರ್ಶನವರದಿ
ಧಾರವಾಡ11 : ಗ್ರಾಮದ ಜನರಿಗೆ, ಮಕ್ಕಳಿಗೆ ತಮ್ಮ ಜೀವನದಲ್ಲಿ ಜಾನಪದದ ಕಲೆಯನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಮನುಷ್ಯ ಚೈತನ್ಯಮಯವಾಗಿರುತ್ತಾನೆ. ಜಾನಪದ ಕಲೆಯು ಆದಿ ಕಾಲದಿಂದಲೂ ಬಾಯಿಂದ ಬಾಯಿಗೆ ಬಂದಂತ ಕಲೆಯಾಗಿದೆ. ಇದು ಯಾವ ಶಾಲೆಯಲ್ಲೂ, ಯಾವ ಪಾಠದಲ್ಲೂ ಇಲ್ಲ. ಜನರಿಗೆ ವಾಸ್ತವವನ್ನು ಹೇಳಬೇಕೆಂದರೆ ಮತ್ತು ಅವರ ತಪ್ಪುಗಳ ಅರಿವು ಮಾಡಿಕೊಡಬೇಕೆಂದರೆ ಜಾನಪದದಿಂದಲೇ ಸಾಧ್ಯ ಎಂದು ತಾಲೂಕಿನ ಕೋಗಿಲಗೆರೆ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಎನ್.ಎಸ್.ಎಸ್. ಶಿಬಿರದಲ್ಲಿ ಕನರ್ಾಟಕ ವಿದ್ಯಾವರ್ಧಕ ಸಂಘದ ಯುವಜನ ಮಂಪಟದ ವತಿಯಿಂದ ಜಾನಪದ ಗಾಯನ ಹಾಗೂ ಜಾನಪದ ಉಪನ್ಯಾಸದಲ್ಲಿ ಖ್ಯಾತ ಜಾನಪದ ಗಾಯಕ ಬಸಲಿಂಗಯ್ಯ ಹಿರೇಮಠ ಮಾತಾನಾಡಿದ್ದರು.
ಹಿರೇಮಠ ಅವರು ಖ್ಯಾತ ರಾಜ್ಯಪ್ರಶಸ್ತಿ ವಿಜೇತ ಗಾಯಕರು, ಇವರು ಶಿಬಿರಾಥರ್ಿಗಳಿಗೆ ಹಾಗೂ ಸ್ವತಃ ನನ್ನ ಹಾಡು ಕೇಳಿ ಎಷ್ಟೋ ಜನರು ತಮ್ಮಲ್ಲಿ ತಾವು ಬದಲಾವಣೆ ಹೊಂದಿದ್ದಾರೆ.
ಉದಾರಣೆಗೆ ತಾಯಿ ಸತ್ತ ಮೇಲೆ ತವರಿಗೆ ಎಂದೂ ಹೋಗಬಾರದವ್ವ ಹಾಡು ಹೇಳಿ ಅದರ ಭಾವನಾತ್ಮಕ ಸಂಬಂಧಗಳ ಕುರಿತು ವಿವರಿಸಿದರು. ಹೀಗೆ ತಮ್ಮ ಕಂಚಿನ ಕಂಠದಿಂದ ಹತ್ತು ಹಲವಾರು ಜಾನಪದ ಹಾಡು ಹೇಳಿ ಸಭೀಕರನ್ನು ಮಂತ್ರಮುಗ್ಧಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ಸಿ. ಎನ್. ಹೊಂಬಾಳಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಾಧ್ಯಾಪಕರಾದ ಕುರಕುರೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗ ಹಾಗೂ ಕೋಗಿಲಗೆರಿಯ ಗ್ರಾಮದ ಗುರುಹಿರಿಯರು ಭಾಗವಹಿಸಿದ್ದರು. ಯುವಜನ ಮಂಟಪದ ಸಂಚಾಲಕ ಸತೀಶ ತುರಮರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.