ಜಾನಪದ ಜಾತ್ರೆ- ವಸ್ತುಪ್ರದರ್ಶನ ಮಳಿಗೆಗೆ ಶಾಸಕರಿಂದ ಚಾಲನೆ
ಹಾವೇರಿ13 :ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ಜಾನಪದ ಜಾತ್ರೆ ಅಂಗವಾಗಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ವಸ್ತುಪ್ರದರ್ಶನಕ್ಕೆ ಗುರುವಾರ ಶಾಸಕ ನೆಹರು ಓಲೇಕಾರ ಅವರು ಚಾಲನೆ ನೀಡಿದರು.
ಜಿಲ್ಲೆಯ ವಿವಿಧ ಇಲಾಖೆಗಳ ಏಳು ಮಳಿಗೆಗಳನ್ನು ತೆರೆಯಲಾಗಿದ್ದು, ಆಯಾ ಇಲಾಖೆಗಳ ಯೋಜನೆಗಳು ಹಾಗೂ ಅವುಗಳ ಮಾಹಿತಿಗಳನ್ನೊಂಡ ಮಾದರಿಗಳನ್ನು ಪ್ರದರ್ಶನಗೊಳ್ಳುತ್ತಿವೆ. ರೇಷ್ಮೆ ಇಲಾಖೆಯವತಿಯಿಂದ ವಿವಿಧ ತಳಿಯ ರೇಷ್ಮೆ ಹುಳುಗಳ ಗೂಡು, ಮೂರು ಮಾದರಿಯ ಹುಳು ತಯಾರಿಕೆಯ ಚಂದ್ರಿಕೆ ಹಾಗೂ ರೇಷ್ಮೆಯಿಂದ ತಯಾರಾದ ವಿವಿಧ ವಸ್ತುಗಳನ್ನು ಹಾಗೂ ಕೃಷಿ ಇಲಾಖೆಯಿಂದ ವಿವಿಧ ತಳಿಯ ಸಿರಿಧಾನ್ಯ ಮತ್ತು ಯಾವ ಯಾವ ಬೇೆಯನ್ನು ಯಾವ ಕಾಲದಲ್ಲಿ ಹೇಗೆ ಬೆಳೆಯಬೆಕು, ಅವುಗಳಿಗೆ ಬರುವ ರೋಗಗಳಿಗೆ ಸಿಂಪಡಿಸುವ ಔಷಧಿಗಳ ಮಾಹಿತಿಗಳನ್ನೊಳಗೊಂಡ ಬ್ಯಾನರ್ಗಳು ಪ್ರದರ್ಶನಗೊಳ್ಳುತ್ತಿವೆ.
ಪಶುಸಂಗೋಪನಾ ಇಲಾಖೆ ವತಿಯಿಂದ ದೇಶಿಯ, ವಿದೇಶಿ ತಳಿಯ ಜಾನುವಾರಗಳ ಮಾಹಿತಿ ಹಾಗೂ ಆರೋಗ್ಯ ಇಲಾಖೆ ವಿವಿಧ ಯೋಜನೆಗಳು ಹಾಗೂ ವಿವಿಧ ರೋಗಗಳಿಗಿರುವ ಲಸಿಕಾ ಮಾಹಿತಿ ವಸ್ತುಗಳ ಮಾದರಿಗಳ ಪ್ರದಶರ್ಿಸಲಾಗುತ್ತಿದೆ.
ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿದ ಉತ್ತರ ಕನರ್ಾಟಕದ ಬಹು ಬೇಡಿಕೆಯ ರುಚಿಯಾದ ಖಾದ್ಯಗಳು ಮಹಿಳೆಯರನ್ನು ಸೆಳೆಯುವಲ್ಲಿ ಯಶಸ್ವಿಯಾದವು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 