ಹೂವಿನಹಡಗಲಿ: ವಿದ್ಯಾಂಜಲಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ರಚನೆ ಪ್ರಜಾಪ್ರಭುತ್ವದ ಮೌಲ್ಯಗಳ ಪರಿಕಲ್ಪನೆ ಮಕ್ಕಳಿಗೆ ಅತ್ಯಗತ್ಯ: ಗುರುಬಸವರಾಜ್


ಲೋಕದರ್ಶನ ವರದಿ

ಹೂವಿನಹಡಗಲಿ27: ಅನೈತಿಕ ಹಾಗೂ ಸ್ವಾರ್ಥ ರಾಜಕಾರಣದ ಕಲುಷಿತ ವಾತಾವರಣದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯಂತ ಅಪಾಯಕಾರಿ ಸನ್ನಿವೇಶಕ್ಕೆ ತಲುಪಿದ್ದು, ಈ ಕುರಿತು ಪ್ರಜಾಪ್ರಭುತ್ವದ ಪರಿಕಲ್ಪನೆ ಹಾಗೂ ಮೌಲ್ಯಗಳ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ ಎಂದು ಸ್ವಾಮಿವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ನಿವೃತ್ತ ಪ್ರಾಂಶುಪಾಲ ಎಂ.ಎಂ. ಗುರುಬಸವರಾಜ್ ಅಭಿಪ್ರಾಯಪಟ್ಟರು.

ಪಟ್ಟಣದ ವಿದ್ಯಾಂಜಲಿ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಾಲಾ ಸಂಸತ್ಗೆ ಆಯ್ಕೆಯಾದ ವಿದ್ಯಾಥರ್ಿ ಪ್ರತಿನಿಧಿಗಳಿಗೆ ಅಧಿಕಾರ ಗೌಪ್ಯತೆಯ ಪ್ರಮಾಣವಚನ ಭೋದಿಸಿ ಅವರು ಮಾತನಾಡಿದರು.

ದೇಶ ಅಭಿವೃದ್ಧಿಯತ್ತ ಮುನ್ನೆಡೆಯಬೇಕಾದರೆ ಪ್ರಜಾಪ್ರಭುತ್ವದ ಮೌಲ್ಯಗಳ ಸಂಪೂರ್ಣ ಮಾಹಿತಿ ಪ್ರತಿಯೊಬ್ಬ ನಾಗರಿಕರಲ್ಲಿಯೂ ಇರಬೇಕು. ದುರಂತದ ಸಂಗತಿ ಎಂದರೆ, ಪ್ರಜಾಪ್ರಭುತ್ವದ ಆಧಾರಸ್ತಂಭವಾದ ಚುನಾವಣೆಗಳು ಜಾತಿ, ಹಣ, ಧರ್ಮ ಹಾಗೂ ಸಂಬಂಧಗಳ ಮೇಲೆ ಫಲಿತಾಂಶದ ತೀಪರ್ು ಹೊರಬೀಳುವಂತ ಸಂಕುಚಿತ ಕಾಲಘಟ್ಟಕ್ಕೆ ತಲುಪಿದೆ. ಹೀಗಾಗಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಉದಾಸೀನತೆಯಿಂದ ನೋಡುವಂತಾಗಿದೆ. ಈ ಕಾರಣಗಳಿಗಾಗಿ, ಮಕ್ಕಳಲ್ಲಿ ಪ್ರಜಾಪ್ರಭುತ್ವ, ಅದರ ಮೌಲ್ಯಗಳು, ಚುನಾವಣಾ ವಿಧಾನ, ಸಮರ್ಥ ಅಭ್ಯಥರ್ಿಗಳ ಆಯ್ಕೆ ಹಾಗೂ ಮೂಲಭೂತ ಹಕ್ಕುಗಳು ಸೇರಿದಂತೆ ಎಲ್ಲಾ ಸ್ತರಗಳಿಂದಲೂ ಮಕ್ಕಳಿಗೆ ಸಂಪೂರ್ಣ ಮಾಹಿತಿ ಒದಗಿಸುವ ಕಾರ್ಯ ಜರೂರಾಗಿ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಶಾಲಾ ಸಂಸತ್ ಪ್ರೇರಣೆಯಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಶಾಲಾ ಸಂಸತ್ಗೆ ಆಯ್ಕೆಯಾದ ಪ್ರಧಾನಮಂತ್ರಿ ಹಾಗೂ ಮಂತ್ರಿಮಂಡಲದ ಪ್ರತಿನಿಧಿಗಳಿಗೆ ಗುರುಬಸವರಾಜ್ ಅವರು ಪ್ರಮಾಣವಚನ ಭೋದಿಸಿದರು.

 ಶಿಕ್ಷಣ ಇಲಾಖೆಯ ಪಟ್ಟಣದ ಶಿಕ್ಷಣ ಸಂಯೋಜಕ ಫಕ್ಕೀರ್ಸಾಬ್, ಸಂಸ್ಥೆಯ ಕಾರ್ಯದಶರ್ಿ ಎಸ್.ಎಂ. ಸುನಂದಾ, ಶಾಲಾ ಮುಖ್ಯೋಪಾಧ್ಯಾಯ ಬಿ. ಹನುಮಂತಪ್ಪ ಹಾಗೂ ಸಿಬ್ಬಂದಿ ಹಾಜರಿದ್ದರು.