ಜಗಜೀವನ್ ರಾಮ್ ಭಾವಚಿತ್ರಕ್ಕೆ ಸಚಿವ ಬಿ.ಸಿ.ಪಾಟೀಲ್ ಅವರಿಂದ ಪುಷ್ಪನಮನ

ಹಾವೇರಿ, ಏ.5, ಬಾಬೂಜಿ ಎಂದೇ ಖ್ಯಾತರಾಗಿದ್ದ ದಲಿತ ನಾಯಕ ಮಾಜಿ ಉಪಪ್ರಧಾನಿ ದಿ.  ಜಗಜೀವನ ರಾಮ್ ಅವರ 113ನೇ ಜನ್ಮದಿನಾಚರಣೆಯನ್ನು ಹಿರೇಕೆರೂರು ತಾಲೂಕು ಕಚೇರಿಯಲ್ಲಿ  ತಾಲೂಕು ಆಡಳಿತ ವತಿಯಿಂದ ಆಚರಿಸಲಾಯಿತು‌.ಸರ್ಕಾರ ಕರೆ ನೀಡಿದಂತೆ ಸರಳವಾಗಿ ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಜ್ಯೋತಿ ಬೆಳಗಿಸುವ ಮೂಲಕ ಆಚರಿಸಲಾಯಿತು.ಕೃಷಿ  ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಬಾಬು ಜಗನ್ ಜೀವನ್ ರಾಮ್‌ ಅವರು ಮಾಜಿ ಪ್ರಧಾನಿ ನೆಹರು ಅವರ  ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಮೊರಾರ್ಜಿ ದೇಸಾಯಿಯವರ ಕಾಲದಲ್ಲಿ ಭಾರತದ ಉಪ  ಪ್ರಧಾನಿಯೂ ಆಗಿದ್ದರು. ಜಗಜೀವನ ರಾಮ್ ರವರು ಅಸ್ಪೃಶ್ಯತಾ ನಿವಾರಣೆಯ ಹೋರಾಟದ ಮಹಾನ್  ದಲಿತ ನಾಯಕರಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದ  ಬಾಬು ಜಗಜೀವನ್ ರಾಮ್ ಅವರ ಜೀವನ ಬದುಕು ಎಲ್ಲರಿಗೂ ಆದರ್ಶವಾಗಿದೆ ಎಂದರು.ಈ ಸಂದರ್ಭದಲ್ಲಿ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ್, ತಹಶೀಲ್ದಾರ್ ಆರ್.ಹೆಚ್.ಭಾಗವಾನ್ ಪಾಲ್ಗೊಂಡಿದ್ದರು.