ನವದೆಹಲಿ,ಫೆ. 1: ಕೇಂದ್ರದ ಬಜೆಟ್ ಅನ್ನು ಶ್ಲಾಘಿಸಿರುವ ಕೇಂದ್ರ ಸಚಿವ ಸದಾನಂದಗೌಡ ಈ ಬಾರಿಯ ಬಜೆಟ್ ಅದ್ಬುತ ಬಜೆಟ್ ಆಗಿದ್ದು, ಮಗುವಿನಿಂದ ಹಿಡಿದು ವೃದ್ಧಾಪ್ಯದವರೆಗೂ ಎಲ್ಲರ ಗಮನದಲ್ಲಿರಿಸಿ ಮಂಡಿಸಿದ ಬಜೆಟ್ ಎಂದಿದ್ದಾರೆ.ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ಕ್ಷೇತ್ರಗಳನ್ನು ಗಮನದಲ್ಲಿ ಇಟ್ಟುಕೊಂಡು ಬಜೆಟ್ ಮಂಡನೆಯಾಗಿದೆ. ಕೃಷಿ, ಗ್ರಾಮೀಣಾಭಿವೃದ್ಧಿ ಒತ್ತು ನೀಡಿ ಬೆಜೆಟ್ ಗಾತ್ರ ಹೆಚ್ಚಾಗಿದೆ. ಪ್ರತಿ ರಾಜ್ಯದಲ್ಲಿಯೂ ಆದ್ಯತೆ ಗುರುತಿಸಲಾಗಿದೆ.ಆರೋಗ್ಯ , ಶುದ್ಧ ಕುಡಿಯುವ ನೀರು, ವಿದ್ಯಾ ಕ್ಷೇತ್ರ ಕ್ಕೆ ಆದ್ಯತೆ ಕೊಡಲಾಗಿದೆ ಎಂದರು.ಪರಿಶಿಷ್ಟ ಜಾತಿ ಪಂಗಡಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಆದ್ಯತೆ ನೀಡಲಾಗಿದೆಇದು ಅತ್ಯಂತ ಸಂತೋಷ್ ತಂದಿದೆ. ಪ್ರಧಾನಿಗಳು, ಹಣಕಾಸು ಸಚಿವರಿಗೆ ಧನ್ಯವಾದಗಳನ್ನು ಅರ್ಪಿಸಿದ ಸದಾನಂದ ಗೌಡ, ಕರಾವಳಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.ಇದು ಸಮಗ್ರ ಅಭಿವೃದ್ಧಿ ಬಜೆಟ್ ಆಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.