ಲೋಕದರ್ಶನ ವರದಿ
ಬಳ್ಳಾರಿ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಸಂಸ್ಥೆಯಿಂದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಬುಧವಾರ ಜಿಲ್ಲಾಧಿಕಾರಿ ರಾಮ್ ಪ್ರಸಾದ್ ಮನೋಹರ್ ಅವರು ಧ್ವ್ವಜ ಚೀಟಿ ಬಿಡುಗಡೆ ಮಾಡಿದರು. ಈ ಸರಳ ಸಮಾರಂಭದಲ್ಲಿ ಜಿಲ್ಲಾ ಕಾರ್ಯದಶರ್ಿ ವಿಜಯ ಸಿಂಹ, ಖಜಾಂಚಿ ಪ್ರಭಾಕರ, ಸಹಾಯಕ ರಾಜ್ಯ ಆಯುಕ್ತ ಶಕೀಬ್, ಸಹಾಯಕ ರಾಜ್ಯ ಸಂಘಟನಾ ಆಯುಕ್ತ ಮಲ್ಲೇಶ್ವರಿ ಜುಬಾರೆ, ಜಿಲ್ಲಾ ಸಂಘಟನೆಯ ಆಯುಕ್ತ ಎಂ.ನಾಗರಾಜ, ಗೈಡ್ಸ್ ನಾಯಕರಾದ ಜಾಯಿ ಶಾಂತಲಾ, ಎಂ.ಸ್ಮಜಾತಾ, ನೌಶಿನ್, ಶಿಲ್ಪಾ, ಸುಜಾತ, ಸ್ಕೌಟ್ಸ್ ನಾಯಕರಾದ ನಾಗೇಶ್, ನಾಗೇಶ್ವರಾವ್, ವರಲಕ್ಷ್ಮಿ, ಮತ್ತು ಗೈಡ್ಸ್ ಹಾಗೂ ಶಾಲೆಯ ಮಕ್ಕಳು ಈ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.