ವಿಶಾಖಪಟ್ಟಣಂ, ಅ 3: ಇಲ್ಲಿನ ಡಾ. ವೈ.ಎಸ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಗುರುವಾರ ರೋಹಿತ್ ಶರ್ಮಾ ಹಾಗೂ ಮಯಾಂಕ್ ಅಗರ್ವಾಲ್ ಜೋಡಿ ಮುರಿಯದ ಮೋದಲನೇ ವಿಕೆಟ್ಗೆ 317 ರನ್ ಗಳಿಸಿರುವ ಮೂಲಕ ಐದು ದಾಖಲೆಗಳನ್ನು ಹಿಂದಿಕ್ಕಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ತಲಾ ಶತಕ ಸಿಡಿಸಿದ ವಿಶ್ವದ ಮೋದಲನೇ ಆರಂಭಿಕ ಜೋಡಿ ಎಂಬ ಸಾಧನೆಯನ್ನು ಮಯಾಂಕ್ ಹಾಗೂ ರೋಹಿತ್ ಶರ್ಮಾ ಜೋಡಿ ಮಾಡಿತು. ಜತೆಗೆ, ಆಫ್ರಿಕಾ ವಿರುದ್ಧ ಮುರಿಯದ ಮೊದಲನೇ ವಿಕೆಟ್ಗೆ ಅತಿ ಹೆಚ್ಚು ರನ್ ಜತೆಯಾಟ ವಾಡಿದ ವಿಶ್ವದ ಮೊದಲನೇ ಜೋಡಿ ಎಂಬ ಸಾಧನೆ ಮಾಡುವ ಮೂಲಕ 1996/97ರಲ್ಲಿ 236 ರನ್ ಸಿಡಿಸಿದ್ದ ಗ್ಯಾರಿ ಕ್ರಿಸ್ಟನ್ ಹಾಗೂ ಆ್ಯಂಡ್ರಿ ಹಡ್ಸನ್ ಆಸ್ಟ್ರೇಲಿಯಾ ಜೋಡಿಯ ದಾಖಲೆಯನ್ನು ಹಿಂದಿಕ್ಕಿತು. ರೋಹಿತ್ ಶರ್ಮಾ ಹಾಗೂ ಮಯಾಂಕ್ ಅಗರ್ವಾಲ್ ಜೋಡಿ ಮೊದಲನೇ ವಿಕೆಟ್ಗೆ 317 ರನ್ ದಾಖಲಿಸಿತು. ದಕ್ಷಿಣ ಆಫ್ರಿಕಾ ವಿರುದ್ಧ 300ಕ್ಕೂ ಹೆಚ್ಚು ಅತಿ ಹೆಚ್ಚು ರನ್ ಗಳಿಸಿದ ಭಾರತದ ಮೊದಲನೇ ಆರಂಭಿಕ ಜೋಡಿ ಎಂಬ ಸಾಧನೆ ಮಾಡಿತು. ಜತೆಗೆ. ಟೆಸ್ಟ್ ಇನಿಂಗ್ಸ್ನಲ್ಲಿ 300ಕ್ಕೂ ಅತಿ ಹೆಚ್ಚು ರನ್ ಗಳಿಸಿದೆ ಮೂರನೇ ಆರಂಭಿಕ ಜೋಡಿ ಎಂದ ದಾಖಲೆಯನ್ನು ಮಯಾಂಕ್ ಹಾಗೂ ರೋಹಿತ್ ತಮ್ಮ ಹೆಸರಿಗೆ ಬರೆದುಕೊಂಡರು. ತವರು ನೆಲದಲ್ಲಿ ಆಡಿದ ಮೊದಲನೇ ಇನಿಂಗ್ಸ್ನಲ್ಲಿಯೇ ಇಬ್ಬರೂ ಆರಂಭಿಕರು ಶತಕ ಸಿಡಿಸಿದ ದಾಖಲೆಗೆ ಈ ಜೋಡಿ ಭಾಜನವಾಯಿತು. ರೋಹಿತ್ ಶರ್ಮಾ 176 ರನ್ ಹಾಗೂ ಮಯಾಂಕ್ ಅಗವರ್ಾಲ್ ಅಜೇಯ 138 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ವಿಕೆಟ್ಗೆ ಅತಿ ಹೆಚ್ಚು ರನ್ ಗಳಿಸಿದ ಭಾರತದ ಮೊದಲನೇ ಆರಂಭಿಕ ಜೋಡಿ ಎಂಬ ಕೀರ್ತಿಗೆ ಅಗರ್ವಾಲ್ ಹಾಗೂ ರೋಹಿತ್ ಶರ್ಮಾ ಜೋಡಿ ಭಾಜನವಾಯಿತು. ಆ ಮೂಲಕ ಗೌತಮ್ ಗಂಭೀರ್ ಹಾಗೂ ವಿರೇಂದ್ರ ಸೆಹ್ವಾಗ್ ಜೋಡಿ 2014ರಲ್ಲಿ 218 ರನ್ ಗಳಿಸಿದ ದಾಖಲೆಯನ್ನು ರೋಹಿತ್ ಮತ್ತು ಅಗರ್ವಾಲ್ ಜೋಡಿ ಮುರಿಯಿತು. ರೋಹಿತ್ ಶರ್ಮಾ 244 ಎಸೆತಗಳಲ್ಲಿ 176 ರನ್ ಗಳಿಸಿ ವಿಕೆಟ್ ಒಪ್ಪಿಿಸಿದರೆ, ಮಯಾಂಕ್ ಅಗರ್ವಾಲ್ ಅವರು 276 ಎಸೆತಗಳಲ್ಲಿ ಅಜೇಯ 142 ರನ್ ಗಳಿಸಿ ವೃತ್ತಿ ಜೀವನದ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದರು. ಒಟ್ಟಾರೆ, ಭಾರತ ತಂಡ ಭೋಜನ ವಿರಾಮದ ವೇಳೆಗೆ 88 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟೆಕ್ಕೆ 324 ರನ್ ಗಳಿಸಿದೆ.