ಲಕ್ನೋ, ಏ ೨೮,ಉತ್ತರ ಪ್ರದೇಶದಲ್ಲಿ ಕಳೆದ ೧೫ ದಿನಗಳಲ್ಲಿ ೧೦೦ ಮಂದಿ ಹತ್ಯೆಗೆ ಗುರಿಯಾಗಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಮಂಗಳವಾರ ಸಂಚಲನಾತ್ಮಕ ಆರೋಪ ಮಾಡಿದ್ದಾರೆ ಈ ಸಂಬಂಧ ತಮ್ಮ ಟ್ವೀಟ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, ’ ಉತ್ತರ ಪ್ರದೇಶದಲ್ಲಿ ಕಳೆದ ೧೫ ದಿನಗಳಲ್ಲಿ ೧೦೦ ಮಂದಿ ಹತ್ಯೆಗೊಳಗಾಗಿದ್ದಾರೆ ಎಂದು ಹೇಳಿದ್ದಾರೆ.ಮೂರು ದಿನಗಳ ಹಿಂದೆ ಪಚೌರಿ ಕುಟುಂಬಕ್ಕೆ ಸೇರಿದ ಐದು ಮೃತದೇಹಗಳನ್ನು ಎಟಾದಲ್ಲಿ ಪೊಲೀಸರು ನಿಗೂಢ ಸನ್ನಿವೇಶದಲ್ಲಿ ಪತ್ತೆಹಚ್ಚಿದ್ದಾರೆ. ಅವರಿಗೆ ಏನಾಗಿತತ್ತು ಎಂಬುದು ಯಾರಿಗೂ ಗೊತ್ತಿಲ್ಲ. ನಿಗೂಢ ಸಾವುಗಳ ಹಿಂದೆ ಯಾರ ಕೈವಾಡ ಇದೆ ಎಂಬುದು ಬಹಿರಂಗವಾಗಬೇಕು. ಹಾಗಾಗಿ ಈ ಘಟನೆಯ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ತನಿಖೆಗೆ ಆದೇಶಿಸಬೇಕು ಎಂದು ಪ್ರಿಯಾಂಕ ಗಾಂಧಿ ಒತ್ತಾಯಿಸಿದ್ದಾರೆ. ಸ್ಥಳೀಯ ಕಾಂಗ್ರೆಸ್ ನಾಯಕರೂ ಸಹ ಈ ನಿಗೂಢ ಸಾವುಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಮತ್ತೊಂದು ಕಡೆ ಈ ಹತ್ಯೆಗಳ ಕುರಿತು ಸರ್ಕಾರ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.