ಪಂಚ ಗ್ಯಾರಂಟಿಯಿಂದ ರಾಜ್ಯದ ಖಜಾನೆ ಖಾಲಿ: ಆರೋಪ
ಹೂವಿನಹಡಗಲಿ: ಪಂಚ ಗ್ಯಾರಂಟಿ ಯೋಜನೆಗಳಿಂದರಾಜ್ಯದ ಖಜಾನೆ ಖಾಲಿಯಾಗಿದೆ. 76,509 ಕೋಟಿ ಹಣ ವ್ಯಯಿಸಿದಸಿದ್ದರಾಮಯ್ಯ ಸರ್ಕಾರ ತೆಲಂಗಾಣ ಸರ್ಕಾರದ ರೀತಿಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ ಎಂದು ವಿಜಯನಗರ ಬಿಜೆಪಿ ಪಕ್ಷದ ಮುಖಂಡ ಎಂ.ಬಿ.ಬಸವರಾಜ ಹೇಳಿದರು. ಅವರು ನಮ್ಮ ಪತ್ರಿಕಾ ಪ್ರತಿನಿಧಿಯೊಂದಿಗೆ ಮಾತನಾಡಿ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಿಗೆ ವೇತನ ನೀಡುವುದಾದರೆ ಸರ್ಕಾರಿ ಅಧಿಕಾರಿಗಳು ಯಾಕೆ . ಜನರ ತೆರಿಗೆ ಹಣವನ್ನು ಗ್ಯಾರಂಟಿ ಅನುಷ್ಠಾನ ಸಮಿತಿಗೆ ವ್ಯಯಿಸುವುದು ಸರಿಯಲ್ಲ. ಕರ್ನಾಟಕ ಸರ್ಕಾರ ಜಾರಿ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಜಿಲ್ಲಾವಾರು ಸಮಿತಿಗಳನ್ನು ರಚಿಸಿ ಪ್ರತಿ ತಿಂಗಳು ಸರ್ಕಾರ ಕೋಟಿಗಟ್ಟಲೆ ಗೌರವಧನ ನೀಡುತ್ತಿದೆ. ಇನ್ನೊಂದೆಡೆ ಗ್ಯಾರಂಟಿ ಯೋಜನೆಗಳ ಹಣ ಇತ್ತೀಚೆಗೆ ಸಕಾಲಕ್ಕೆ ಫಲಾನುಭವಿಗಳ ಕೈಸೇರುತ್ತಿಲ್ಲ ಎನ್ನುವ ದೂರಿನ ನಡುವೆ ಈ ಅನುಷ್ಠಾನ ಸಮಿತಿಗೆ ಅನುದಾನ ಬಿಡುಗಡೆ ಮಾಡಿ ಸರ್ಕಾರ ಜನರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ರಚನೆ ಮಾಡಿರುವ ಸಮಿತಿಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.ಜನರ ತೆರಿಗೆ ಹಣ ಅಭಿವೃದ್ಧಿಗೆ ವ್ಯಯ ಮಾಡಬೇಕು ಹೊರತು. ಕುರ್ಚಿ ಆಸೆಗಾಗಿ ರಾಜ್ಯ ವನ್ನೇ ಬಲಿ ಪಡೆಯುವುದು ಸರಿಯಲ್ಲ. ಕೂಡಲೇ ಪಂಚಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡಲಿ ಎಂದು ಆಗ್ರಹಿಸಿದ್ದಾರೆ.