ಗ್ಯಾರಂಟಿ 0ೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಚೇರಿ ಉದ್ಘಾಟಾನೆ
ಗದಗ 15: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಮಾನವ ಮೂಲಭೂತ ಹಕ್ಕುಗಳನ್ನಾಗಿ ಮಾಡುವ ಧ್ವನಿಯು ದೇಶದಲ್ಲೆಡೆ ಹರಡಬೇಕಾಗಿದೆ. ಗ್ರಾಮದ ಕಟ್ಟಕಡೆಯ ವ್ಯಕ್ತಿಯನ್ನು ಆರ್ಥಿಕ ಸಬಲರನ್ನಾಗಿ ಮಾಡಿಸಿ ಸ್ವಾವಲಂಬಿ ಹಾಗೂ ಸುಧಾರಿತ ಜೀವನ ನಡೆಸುವಂತೆ ಮಾಡುವುದು ಪಂಚ ಗ್ಯಾರಂಟಿ ಯೋಜನೆಯ ಉದ್ದೇಶವಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ತಿಳಿಸಿದರು.
ನಗರದ ಮುಳಗುಂದ ನಾಕಾ ಸಮೀಪದ ಕೆಎಸ್ಆರ್ಟಿಸಿ ಡಿಪೋ ಎದುರಿನ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಗದಗ ಜಿಲ್ಲಾ ಗ್ಯಾರಂಟಿ 0ೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಹಾಗೂ ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ ಅವರ ನೂತನ ಕಚೇರಿ0ುನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಯ ಸೌಲಭ್ಯಗಳ ಸದುಪಯೋಗವಾಗುವುದರೊಂದಿಗೆ ಬಡಜನರ ಬದುಕಿನಲ್ಲಿ ಸಂತಸ, ಸಮಾಧಾನ ತಂದಿದೆ. ಬಡಜನರ ಜೀವನಮಟ್ಟ ಎತ್ತರಕ್ಕೆ ಕೊಂಡೊಯ್ಯುವುದಕ್ಕೆ ಗ್ಯಾರಂಟಿ ಹಣವು ವಿನಿಯೋಗವಾಗಬೇಕು. ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯನ್ನು ಹೊಂದುವುದು ಗ್ಯಾರಂಟಿ ಯೋಜನೆಯಿಂದ ಸಾದಿಸಬಹುದಾಗಿದೆ. ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕನಸಾದ ಗರೀಬಿ ಹಠಾವೋ ಬಡತನ ಬಡತನ ನಿರ್ಮೂಲನೆ ಮಾಡುವುದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸರ್ಕಾರವು ನನಸು ಮಾಡಿದೆ. ದೇಶದ ಅಭಿವೃದ್ಧಿಯೆಂದರೆ ಬಡಜನರ, ರೈತರ, ಶ್ರಮಿಕ ವರ್ಗದವರು ಶಿಸ್ತಿನ ಜೀವನ ನಡೆಸುವುದಾಗಿದೆ. ಪಂಚಗ್ಯಾರಂಟಿ ಯೋಜನೆಯ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವುದು ಕಾರ್ಯಕರ್ತರ ಹಾಗೂ ಸರ್ಕಾರದ ಕರ್ತವ್ಯವಾಗಿದೆ. ಬಡವರ ಬದುಕಿನಲ್ಲಿ ಗ್ಯಾರಂಟಿ ಯೋಜನೆ ನಗೆ ಮೂಡಿಸಿದೆ ಎಂದರು.
ರಾಜ್ಯದಲ್ಲಿ ಅನುಷ್ಠಾನಗೊಂಡಿರುವ ಪಂಚಗ್ಯಾರಂಟಿ 0ೋಜನೆಗಳಿಂದ ಬಡವರ, ಶ್ರಮಿಕರ, ಕೂಲಿಕಾರ್ಮಿಕರ ಬದುಕು ಸುಧಾರಿಸಿದೆ. ಸ್ವಾತಂತ್ರ-್ಯದ ನಂತರ ಬಡತನವನ್ನು ಬೇರು ಸಹಿತ ಕಿತ್ತೊಗೆ0ುಲು ಬಂದ ಮೊಟ್ಟಮೊದಲ ಕಾ0ುರ್ಕ್ರಮ ರಾಜ್ಯದ ಪಂಚ ಗ್ಯಾರಂಟಿ 0ೋಜನೆ ಎನ್ನುವುದರಲ್ಲಿ ಸಂದೇಹವಿಲ್ಲ ಎಂದರು.
ಜಿಲ್ಲೆ0ುಲ್ಲಿ ಶೇ. 97.96ರಷ್ಟು ಗೃಹಲಕ್ಷಿ-್ಮ 0ೋಜನೆ ತಲುಪಿದೆ. ಮರಣ ಹೊಂದಿದ ಹಾಗೂ ಜಿಎಸ್ಟಿ ಹೊಂದಿದ ಮಹಿಳೆ0ುರಿಗೆ 0ೋಜನೆ ತಲುಪಿಸಲು ಸಾಧ್ಯವಾಗಿಲ್ಲ. ಮರಣ ಹೊಂದಿದ ಮಹಿಳೆ0ು ವಾರಸುದಾರರಿಗೆ 0ೋಜನೆ ತಲುಪಿಸುವ ಕಾ0ುರ್ ನಿರಂತರವಾಗಿ ನಡೆ0ುುತ್ತಿದೆ ಎಂದು ಹೇಳಿದರು.
ಗೃಹಲಕ್ಷಿ-್ಮ 0ೋಜನೆ0ುಡಿ ಬಂದ ಹಣದಿಂದ ಮಹಿಳೆ0ುರು ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಬಟ್ಟೆ ಖರೀದಿ ಮಾಡಿ, ಆಟಿಕೆ ಸಾಮಾನು ಖರೀದಿ ಮಾಡಿ. ಬದುಕಲ್ಲಿ ಬದಲಾವಣೆಗಾಗಿ, ಎತ್ತರಿಸಲು ಉಪ0ೋಗ ಮಾಡಿಕೊಂಡು ಸುಧಾರಣೆ0ಾಗಬೇಕು. ಬದುಕು ಸಂತಸದ, ಸಮಾಧಾನ ಬದುಕಾಗಬೇಕು ಎಂಬುದೇ ಪಂಚ ಗ್ಯಾರಂಟಿ 0ೋಜನೆಗಳ ಮೂಲ ಉದ್ದೇಶವಾಗಿದೆ ಎಂದರು.
ಕರ್ನಾಟಕ ರಾಜ್ಯ ಗ್ಯಾರಂಟಿ 0ೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ರಾಜ್ಯದಲ್ಲಿ ಹಾಗೂ ಬೆಳಗಾವಿ ವಿಭಾಗದಲ್ಲಿ ಅತ್ಯಂತ 0ುಶಸ್ವಿ0ಾಗಿ ಪಂಚ ಗ್ಯಾರಂಟಿ 0ೋಜನೆಗಳು ಸಾಕಾರಗೊಂಡಿದೆ. 52 ಸಾವಿರ ಕೋಟಿ ಹಣವನ್ನು ಗ್ಯಾರಂಟಿ 0ೋಜನೆಗಳ ಫಲಾನುಭವಿಗಳಿಗೆ 0ಾವುದೇ ಮಧ್ಯವರ್ತಿಯಿಲ್ಲದೇ ಫಲಾನುಭವಿಗಳಿಗೆ ನೇರವಾಗಿ ತಲುಪಿಸಿದ ಕೀರ್ತಿ ದೇಶದಲ್ಲೇ ಮೊದಲು ಎಂದು ಹೇಳಿದರು.
ದೇಶ ಸುತ್ತು ಕೋಶ ಓದು ಎಂಬ ನಾಣ್ಣುಡಿಯಂತೆ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಶಕ್ತಿ ಬಂದಂತಾಗಿದೆ. ಶಕ್ತಿ ಯೋಜನೆಯಿಂದ ಗ್ರಾಮದ ಜನರು ತಮ್ಮ ನಗರಗಳಿಗೆ ಆಗಮಿಸಿ ವ್ಯಾಪಾರ ವಹಿವಾಟು ನಡೆಸಲು ಅನುಕೂಲವಾಗಿದೆ ಎಂದರು.
ಗ್ಯಾರಂಟಿ 0ೋಜನೆ0ು ಹಣದ ಮೂಲಕ ಬೋರವೆಲ್ ಕೊರೆಸುವುದು, ಬಳೆ ಅಂಗಡಿ, ಸ್ಟೇಷನರಿ ಅಂಗಡಿ, ಗ್ರಂಥಾಲ0ು, ಬಂಗಾರದ ಒಡವೆ ಖರೀದಿ ಸೇರಿ ಇನ್ನೂ ಹಲವಾರು ಕೆಲಸಗಳಿಗೆ ಗೃಹಲಕ್ಷಿ-್ಮ 0ೋಜನೆ0ು ಹಣ ಸದುಪ0ೋಗವಾಗಿರುವುದು ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ 0ೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ಜಿಲ್ಲೆ0ೊಳಗೆ ಮನೆಮನೆಗೆ ಹೋಗಿ ನಿಜವಾದ ಬಡವರನ್ನು ಗುರುತಿಸಿ ನಮ್ಮ ಪಕ್ಷದ ಕಾ0ುರ್ಕರ್ತರು ಅರ್ಜಿ0ುನ್ನು ತುಂಬಿಸಿ ಅರ್ಹ ಫಲಾನುಭವಿಗಳಿಗೆ ಪಂಚ ಗ್ಯಾರಂಟಿ 0ೋಜನೆ0ುನ್ನು ತಲುಪಿಸಿದ್ದಾರೆ. 0ಾವುದೇ ಫಲಾನುಭವಿ ಗ್ಯಾರಂಟಿ 0ೋಜನೆಯಿಂದ ವಂಚಿತರಾಗದಂತೆ ಪ್ರತಿ ತಿಂಗಳು ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ತಾಲೂಕು ಗ್ಯಾರಂಟಿ 0ೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಮಾತನಾಡಿ, ಗದಗ ವಿಧಾನಸಭಾ ಕ್ಷೇತ್ರ ಹಾಗೂ ಗದಗ ತಾಲೂಕಿನಲ್ಲಿ ಪಂಚ ಗ್ಯಾರಂಟಿ 0ೋಜನೆಗಳು ಅರ್ಹ ಫಲಾನುಭವಿಗಳಿಗೆ 100ಕ್ಕೆ 100ರಷ್ಟು ತಲುಪಿಸಲು ಪ್ರಾಮಾಣಿಕ ಪ್ರ0ುತ್ನ ಮಾಡಲಾಗುತ್ತದೆ ಎಂದು ಹೇಳಿದರು.
ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ 0ೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ನೀಲಮ್ಮ ಬೋಳನವರ, ಹೇಮಂತಗೌಡ ಪಾಟೀಲ, ಶರಣಪ್ಪ ಬೆಟಗೇರಿ, ಪಿ.ಬಿ. ಅಳಗವಾಡಿ, ದೀಪಕ ಲಮಾಣಿ, ಸದಸ್ಯರಾದ, ರೂಪಾ ಅಂಗಡಿ, ಶಿವನಗೌಡ ಪಾಟೀಲ. ಶರೀಫ್ ಬಿಳಿಯಲಿ, ಬಸವರಾಜ ಬೆಳದಡಿ, ವಿವೇಕ ಯಾವಗಲ್, ದೇವಪ್ಪ ಮೋರನಾಳ, ಪುಲಕೇಶಗೌಡ ಪಾಟೀಲ, ವಿರುಪಾಕ್ಷಪ್ಪ ಯಾರಸಿ, ಈಶಣ್ಣ ಹುಣಸಿಕಟ್ಟಿ, ರಾಜೀವ ಗೊಡಚಪ್ಪ ಕುಂಬ, ಗೀತಾ ಸುರೇಶ ಬೀರಣ್ಣವರ, ವೀರಯ್ಯ ಮಠಪತಿ, ಫಕ್ರುಸಾಬ ಚಿಕ್ಕಮಣ್ಣೂರ, ಆರ್ ಆರ್ ಗಡ್ಡದ್ದೇವರಮಠ , ಗದಗ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಸಮಿತಿಯ ಸದಸ್ಯರುಗಳಾದ ಕೃಷ್ಣಗೌಡ ಎಚ್ ಪಾಟೀಲ, ಮೀನಾಕ್ಷಿ ಬೆನಕಣ್ಣವರ, ದೇವರಡ್ಡಿ ತಿರ್ಲಾಪುರ, ಶಂಭು ಎಸ್ ಕಾಳೆ, ರಮೇಶ ಹೊನ್ನಿನಾಯ್ಕರ್ , ಭಾಷಾಸಾಬ ಮಲ್ಲಸಮುದ್ರ , ದಯಾನಂದ ಪವಾರ, ನಿಂಗಪ್ಪ ದೇಸಾಯಿ, ಸಂಗಮೇಶ ಕೆರಕಲಮಟ್ಟಿ, ಸಂಗಮೇಶ ಎಂ ಹಾದಿಮನಿ, ಮಲ್ಲಪ್ಪ ದಂಡಿನ, ಗಣೇಶ ಸಿಂಗ್ ಮಿಟಾಡ, ಮಲ್ಲಪ್ಪ ಎಚ್ ಬಾರಕೇರ, ಸಾವಿತ್ರಿ ಹೂಗಾರ ಸೇರಿದಂತೆ ಗದಗ ಜಿಲ್ಲಾ ಹಾಗೂ ತಾಲೂಕು ಪ್ರಾಧಿಕಾರದ ಸದಸ್ಯರು ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪಂಚಾ0ುತ್ ಮುಖ್ಯ ಕಾ0ುರ್ನಿರ್ವಾಹಕ ಅಧಿಕಾರಿ ಭರತ್ ಎಸ್. ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಗಣ್ಯರು, ಹಿರಿಯರು, ಗ್ಯಾರಂಟಿ ಯೋಜನೆಯ ಸಂಬಂಧಿತ ಇಲಾಖಾ ಅಧಿಕಾರಿಗಳು, ಫಲಾನುಭವಿಗಳು ಸಮಾರಂಭದಲ್ಲಿ ಹಾಜರಿದ್ದರು.
ವೆಂಕಟೇಶ ಅಲ್ಕೋಡ ನಾಡಗೀತೆ ಪ್ರಸ್ತುತಪಡಿಸಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಲ್ಲಯ್ಯ ಕೊರವನವರ ವಂದಿಸಿದರು. ಆನಂದಯ್ಯ ವಿರಕ್ತಿಮಠ ಕಾರ್ಯಕ್ರಮ ನಿರೂಪಿಸಿದರು.