ಐದು ಆಚರಣೆಗಳು ಮುಸಲ್ಮಾನರಿಗೆ ಕಡ್ಡಾಯ: ಮುಫ್ತಿ ಆರಿಫಸಾಹಬ್

ಮಹಾಲಿಂಗಪೂರ : ಇಸ್ಲಾಂ ಧರ್ಮದ ಅನೇಕ ತತ್ವ ಸಿದ್ಧಾಂತಗಳಲ್ಲಿ ಪ್ರಮುಖವಾಗಿ ಈಮಾನ್, ನಮಾಜ್, ರೋಜಾ, ಸದಕಾ, ಹಜ್ಜ ಈ ಐದು ಆಚರಣೆಗಳು ಮುಸಲ್ಮಾನರಿಗೆ ಕಡ್ಡಾಯವಾಗಿವೆ ಎಂದು  ಗದಗ ಮುಫ್ತಿ ಆರಿಫಸಾಹಬ್ ಹೇಳಿದರು.  

           ಸ್ಥಳೀಯ ಕೆಂಗೇರಿಮಡ್ಡಿ ಹತ್ತಿರವಿರುವ ಶಾದಿ ಮಹಲ್ ನಲ್ಲಿ ಬೈತುಲ್ ಮಾಮುರ್ ಮಸ್ಜಿದ್ ಜಮಾತ ವತಿಯಿಂದ ಪವಿತ್ರ ಹಜ್ಜ ಯಾತ್ರೆ ಕೈಗೊಂಡ ಮಹನಿಯರಿಗೆ ಜುಲೈ 01 ರಂದು ಸೋಮವಾರ ಪುಣ್ಯ ಸನ್ಮಾನ್ ಕಾರ್ಯಕ್ರಮ ಹಾಗೂ ಒಂದು ದಿನದ ತರಬೇತಿ ಕಾರ್ಯಕ್ರಮ ಹಮ್ಮಿಕ್ಕೊಳ್ಳಲಾಗಿತ್ತು. ಈ ಸಂಧರ್ಭದಲ್ಲಿ  ತರಬೇತಿಯನ್ನು ನೀಡಿ   ಅವರು ಮಾತನಾಡುತ್ತಾ ಐದು ಪ್ರಮುಖ ಆಚರಣೆಗಳಲ್ಲಿ ಹಜ್ಜ್ ಯಾತ್ರೆ ಕೈಗೊಳ್ಳುವುದು ಉಳ್ಳವರಿಗೆ ಕಡ್ಡಾಯವಾಗಿದೆ. ಸ್ಥಿತಿವಂತರಲ್ಲದವರಿಗೆ ಉಳ್ಳವರು  ಪುಣ್ಯ ಪ್ರಾಪ್ತಿ ಮಾಡಿಕ್ಕೊಳ್ಳುವ ಸಲುವಾಗಿ ಹಜ್ಜ್ ಯಾತ್ರೆಯನ್ನು ಮಾಡಿಸಬಹುದು ಎಂದರು. 

        ನಗರದಿಂದ, ಪುರುಷರು,ಮಹಿಳೆಯರು ಸೇರಿ ಹದಿನೇಳು ಜನ ಹಜ್ಜ ಯಾತ್ರೆ ಕೈಗೊಳ್ಳಲಿದ್ದು ಇದೆ ಸಮಯದಲ್ಲಿ ಎಲ್ಲರನ್ನೂ ಸನ್ಮಾನಿಸಿ ಗೌರವಿಸಲಾಯಿತು.  ಯಾತ್ರೆಗೆ ಶುಭ ಕೋರಿ ಸಾಮೂಹಿಕವಾಗಿ ಸೃಷ್ಟಿಕರ್ತನಲ್ಲಿ ದುವಾ (ಪ್ರಾರ್ಥನೆ) ಮಾಡಲಾಯಿತು. 

         ಈ ಕಾರ್ಯಕ್ರಮದಲ್ಲಿ ಹಜ್ಜ್ ಯಾತ್ರೆಗೆ ತೆರಳುವ ರಸೂಲ್ ಸಾಬ್. ಚಿಕ್ಕೊಡಿ, ರಾಜೇಸಾಬ್ ಐನಾಪುರ,ರಫಿಕ್ ಜಂಗಿ, ಇಲಾಯಿ ಝಾರೆ, ಐನೂದ್ದಿನ್ ಪಣಿಬಂಧ (ಬನಹಟ್ಟಿ), ದಾದಾಪೀರ್ ಪಣಿಬಂದ( ಬನಹಟ್ಟಿ),ಮೌಲಾಸಾಬ್ ಐನಾಪುರ ಹಾಗೂ ಮಹಿಳೆಯರು, ಸಮಾಜ ಗಣ್ಯರಾದ ಹಾಜಿ ಗಫೂರ್ ಸಾಬ್ ಯಕ್ಸಂಬಿ, ದಾವಲಸಾಬ್ ನಗಾಚರ್ಿ, ಅಬ್ದುಲ್ ಗಫೂರ್ ಆಲ್ಗೂರ್, ಮೇಹಬೂಬ್ ನಾಗನೂರ್,ಮೌಲಾಲಿ ಮೋಮಿನ್, ಮೌ.ಸಮೀರ್ ಬಿಸ್ತಿ, ನಜೀರ್ ಅತ್ತಾರ್, ಉಪಸ್ಥಿತರಿದ್ದರು.