ಲೋಕದರ್ಶನ ವರದಿ
ಕುಮಟಾ 10: ಬೋಟ್ ಮೂಲಕ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿ ವಾಪಸ್ ಆಗದೇ ನಾಪತ್ತೆಯಾದ 7 ವೀನುಗಾರರು ಜೀವಂತವಾಗಿರುತ್ತಾರೆ ಎಂಬ ಅಚಲ ವಿಶ್ವಾಸ ನಮ್ಮದಾಗಿದೆ. ಮೀನುಗಾರರು ಸುರಕ್ಷಿತವಾಗಿ ಬರುವ ವಿಶ್ವಾಸವನ್ನು ಹೊಂದಿದ್ದೇನೆ. ಅಲ್ಲದೇ ನಾಪತ್ತೆಯಾದ ಮೀನುಗಾರರ ಪತ್ತೆಗೆ ಅವಿರತ ಪ್ರಯತ್ನಗಳ ನಡೆದಿದ್ದಲ್ಲದೇ ಇಸ್ರೊ ನೆರವು ಕೋರಲಾಗಿದ್ದು, ಶೀಘ್ರವೇ ನಿರೀಕ್ಷಿತ ಫಲಶೃತಿಗೆ ಎದುರು ನೋಡುತ್ತಿದ್ದೇವೆ ಎಂದು ಪಶು ಸಂಗೋಪನೆ ಮತ್ತು ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.
ಮಲ್ಪೆಯ ಸುವರ್ಣ ತ್ರಿಭುಜ ಬೋಟ್ನಲ್ಲಿ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ 7 ಜನರಲ್ಲಿ ಕುಮಟಾದ ಹೊಲನಗದ್ದೆಯ ಲಕ್ಷ್ಮಣ ನಾರಾಯಣ ಹರಿಕಂತ್ರ ಹಾಗೂ ಮಾದನಗೇರಿಯ ಸತೀಶ ಈಶ್ವರ ಹರಿಕಂತ್ರ ಅವರ ಮನೆಗೆ ಭೇಟಿ ನೀಡಿ ಮೀನುಗಾರಿಕೆಗೆ ತೆರಳಿರುವ ಅವರ ಮನೆಯವರು ಮರಳಿ ಬರಲಿದ್ದಾರೆ ಎಂದು ಕುಟುಂಬದವರಿಗೆ ಧೈರ್ಯತುಂಬಿದರು.
ನಂತರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಮೀನುಗಾರರು ಮುಗ್ದ ಸ್ವಭಾವ ಹೊಂದಿದವರಲ್ಲದೇ ದೇವರನ್ನು ನಂಬಿ ಜೀವ ಅಂಗೈಯಲ್ಲಿಟ್ಟು ಮೀನುಗಾರಿಕೆಗೆ ಸಮುದ್ರದಲ್ಲಿ ಇಳಿಯುತ್ತಾರೆ. ಹೀಗಾಗಿ ಮಲ್ಪೆಯ ಸುವರ್ಣ ತ್ರಿಭುಜ ಬೋಟ್ನಲ್ಲಿ ಮೀನುಗಾರಿಕೆಗೆ ತೆರಳಿದ್ದ 7 ಮೀನುಗಾರರು ಸುರಕ್ಷಿತವಾಗಿ ಬರುವ ವಿಶ್ವಾಸವನ್ನು ಹೊಂದಿದ್ದೇನೆ. ಡಿಸೆಂಬರ್ 13 ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿರುವ ಏಳು ಮೀನುಗಾರರಿದ್ದ ಮಲ್ಪೆಯ ಸುವರ್ಣ ತ್ರಿಭುಜ ಬೋಟ್ 15ರ ರಾತ್ರಿ ಒಂದು ಗಂಟೆವರೆಗೆ ಸಂಪರ್ಕದಲ್ಲಿದ್ದು, ನಂತರ ಸಂಪರ್ಕಕ್ಕೆ ಸಿಗುಲಿಲ್ಲ. ಅಲ್ಲದೇ ಡಿ 13 ರಂದು ಮೀನುಗಾರಿಕೆಗೆ ತೆರಳಿದ್ದ ಬೋಟ್ ನಾಪತ್ತೆಯಾಗಿದ್ದು, ತಕ್ಷಣ ದೂರು ದಾಖಲು ಆಗಿರಲಿಲ್ಲ. ಡಿ 22 ರಂದು ದೂರು ದಾಖಲಾದ ತಕ್ಷಣ ಸಕರ್ಾರ ಶೋಧನಾ ಕಾರ್ಯಕ್ಕೆ ಕ್ರಮ ಕೈಗೊಂಡಿದೆ. ಮೀನುಗಾರರ ಪತ್ತೆಗೆ ನಿರಂತರ ಪ್ರಯತ್ನಗಳ ನಡೆಯುತ್ತಿದ್ದು, ಈ ಸಂಬಂಧ ಉಪಗ್ರಹ ಮೂಲಕ ಪತ್ತೆಗೆ ಇಸ್ರೋಗೂ ಮನವಿ ಮಾಡಲಾಗಿದೆ. ಅಂದಿನಿಂದ ನಿರಂತರವಾಗಿ ರಾಜ್ಯ ಸಕರ್ಾರ ಕರಾವಳಿ ಕೋಸ್ಟ್ ಗಾಡರ್್ ಮತ್ತು ಪೊಲೀಸರು ಶೋಧನ ಕಾರ್ಯ ನಡೆಸುತ್ತಿದ್ದಾರೆ. ಶೋಧನೆಯ ಎಲ್ಲಾ ಸೂಕ್ಷಮ ಸಂಗತಿಗಳನ್ನು ಗಣನಿಗೆ ತೆಗದುಕೊಳ್ಳಲಾಗುತ್ತಿದೆ. ಮಹಾರಾಷ್ಟ್ರ ಕರಾವಳಿ ಗಡಿಯಲ್ಲಿ ಅಲ್ಲಿಯ ಸಕರ್ಾರದ ಸಹಾಯವನ್ನು ಕೋರಿದ್ದೇವೆ. ಇಲ್ಲಿಯವರೆಗಿನ ಶೋಧನ ಕಾರ್ಯದಲ್ಲಿ ಯಾವ ಸೂಕ್ಷಮ ಸುಳಿವು ದೊರೆಯಲಿಲ್ಲ. ಹೀಗಾಗಿ ಯಾವುದೇ ನಿಧರ್ಾರಕ್ಕೆ ಬರುವುದು ಪ್ರಸಕ್ತ ಸನ್ನಿವೇಶದಲ್ಲಿ ಕಷ್ಟ ಎಂದರು
ಮೀನುಗಾರರ ಪತ್ತೆಗಾಗಿ ನೆರೆ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೂ ಪತ್ರ ಬರೆದು ಮನವಿ ಮಾಡಲಾಗಿದೆ. ಆದರೆ ಈವರೆಗೆ ಯಾವುದೇ ಪ್ರತಿಫಲ ಸಿಕ್ಕಿಲ್ಲ. ರಾಜ್ಯ ಸಕರ್ಾರದಿಂದ ಸ್ಥಳೀಯ ಮೀನುಗಾರರ ಸಹಕಾರ ಪಡೆದು ಎಲ್ಲ ಬಂದರುಗಳೂ ಸೇರಿದಂತೆ ಶಂಕಾಸ್ಪದ ಸ್ಥಳಗಳಲ್ಲಿ ಪತ್ತೆ ಕಾರ್ಯ ನಡೆಸಲಾಗಿದೆ. ಸಮುದ್ರದಲ್ಲೂ ಕೂಡ ಹೆಲಿಕಾಪ್ಟರ್ ಮತ್ತು ತಟ ರಕ್ಷಣಾ ಪಡೆಗಳ ಮೂಲಕ ಪತ್ತೆಗೆ ಪ್ರಯತ್ನಿಸಲಾಗಿದೆ. ಈಗಾಗಲೆ ಸಕರ್ಾರದಿಂದ ಕೇಂದ್ರ ಸಕರ್ಾರಕ್ಕೆ ನೌಕಾದಳವನ್ನು ಬಳಸಿಕೊಳ್ಳಲು ಕೋರಲಾಗಿದೆ ಅಲ್ಲದೆ ಗೂಗಲ್ ಸೇರಿದಂತೆ ಉಪಗ್ರಹ ಸಂಸ್ಥೆಗಳ ನೆರವು ಪಡೆಯಲಾಗಿದೆ. ಗುಜರಾತ್ ಗಡಿದಾಟಿ ಪಾಕಿಸ್ತಾನ ಗಡಿ ಪ್ರವೇಶಿಸು ಸಾಧ್ಯತೆ ಕಡಿಮೆ. ಬೋಟ್ ನಲ್ಲಿ ಅಷ್ಟು ಪ್ರಮಾಣದ ಇಂಧನ ಇರಲಿಲ್ಲ ಎಂದು ಹೇಳಲಾಗಿದೆ. ಈ ಹಿಂದಿನ ಕೆಲವು ಪ್ರಕರಣಗಳ ಆಧಾರದಂತೆ ಬೇರೆ ರಾಜ್ಯದ ಮೀನುಗಾರರು ನಮ್ಮ ಮೀನುಗಾರರನ್ನು ಅಪಹರಿಸಿರುವ ಸಂಶಯ ಇದೆ. ಈ ವಿಚಾರದಲ್ಲೂ ನೆರೆ ರಾಜ್ಯಗಳ ಸಕರ್ಾರದೊಂದಿಗೆ ನಿರಂತರ ಸಂಪರ್ಕ ಮಾಡಲಾಡಲಾಗುತ್ತಿದೆ. ಸೆಟ್ಲೈಟ್ ಮೂಲಕ ಶೋಧನೆ ನಡೆಸಲು ಇಸ್ರೊ ಮತ್ತು ಇನ್ನಿತರ ಭಾಹ್ಯಾಕಾಶ ಸಂಸ್ಥೆಗಳಿಗೆ ಪತ್ರಬರೆಯಲಾಗಿದೆ.
ಹೀಗಾಗಿ ಇನ್ನಸ್ಟು ತೀವ್ರವಾದ ಶೋಧನೆಯನ್ನು ನಡೆಸಲು ಕೇಂದ್ರ ಸಕರ್ಾರಕ್ಕೆ ಪತ್ರ ಬರೆಯಲಾಗಿದೆ. ಮಹಾರಾಷ್ಟ್ರ ಗಡಿಯಲ್ಲಿ ಬೋಟ್ ಹಿಡಿದಿಟ್ಟು ಬಣ್ಣ ಬದಲಾಯಿಸುವ ದೂರು ಕೇಳಿಬಂದಿರುವುದರಿಂದ ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮೀನುಗಾರಿಕೆಯ ಎಲ್ಲಾ ಬೋಟ್ಗಳನ್ನು ಪರಿಶೀಲನೆ ಮಾಡಲಾಗಿದೆ. ಅಲ್ಲದೇ ಬೋಟ್ನ ಕ್ರಮ ಸಂಖ್ಯೆಗಳನ್ನು ದಾಖಲಿಸಿಕೊಂಡಿದ್ದೇವೆ. ಹಾಗಾಗಿ ವೀನುಗಾರರು ಜೀವಂತವಾಗಿರುತ್ತಾರೆ ಎಂಬ ಅಚಲ ವಿಶ್ವಾಸವಿದ್ದು, ಅವರ ಪತ್ತೆಗೆ ಅವಿರತ ಪ್ರಯತ್ನಗಳ ನಡೆದಿರುವುದರಿಂದ ಶೀಘ್ರವೇ ನಿರೀಕ್ಷಿತ ಫಲಶೃತಿಗೆ ಎದುರು ನೋಡುತ್ತಿದ್ದೇವೆ ಎಂದು ಸಚಿವರು ಹೇಳಿದರು.ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ, ಜಿಲ್ಲಾಧಿಕಾರಿ ಎಸ್ ಎಸ್ ನಕುಲ್, ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಲಾ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ರತ್ನಾಕರ ನಾಯ್ಕ, ಜಿಪಂ ಸದಸ್ಯರಾದ ಪ್ರದೀಪ ನಾಯಕ, ತಾಪಂ ಸದಸ್ಯ ಈಶ್ವರ ನಾಯ್ಕ, ಹೊಲನಗದ್ದೆ ಗ್ರಾಪಂ ಅಧ್ಯಕ್ಷ ರಾಘವೇಂದ್ರ ಪಟಗಾರ, ಸದಸ್ಯರಾದ ರಾಮ ಮಡಿವಾಳ, ರಮ್ಯಾ ಶೇಟ್, ಜೆಡಿಎಸ್ ತಾಲೂಕಾಧ್ಯಕ್ಷ ಮಂಜುನಾಥ ಪಟಗಾರ, ಗಜು ನಾಯ್ಕ ಅಳ್ವೆಕೋಡಿ, ತುಕಾರಾಮ ನಾಯ್ಕ, ನೀಲಪ್ಪ ಗೌಡ, ದತ್ತು ಪಟಗಾರ, ಜಿ ಎನ್ ನಾಯ್ಕ ಹಾಗೂ ಮೀನುಗಾರಿಕಾ ಇಳಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹೊಲನಗದ್ದೆ ನಿವಾಸಿ ಮೀನುಗಾರ ಲಕ್ಷ್ಮಣ ಹರಿಕಾಂತ್ರ ಅವರು ಕಳೆದ ಒಂದು ತಿಂಗಳ ಹಿಂದೆ ಮೀನುಗಾರಿಕೆಗೆ ತೆರಳಿದ್ದು ಇನ್ನುವರೆಗೂ ಮನೆಗೆ ವಾಪಾಸ್ಸ್ ಆಗದೆ ಇರುವುದರಿಂದ ಆತನ ಪತ್ನಿ ಹಾಗೂ 4 ಮಕ್ಕಳು ಅವರು ಬರುವ ದಾರಿಯನ್ನು ಎದುರುನೊಡುತ್ತಾ ಕಣ್ಣಿರಿಟ್ಟು ಕಾಲ ಕಳೆಯುವಂತಾಗಿದೆ. ಸರಕಾರ ಆದಷ್ಟು ಬೇಗ ತನಿಖೆಯನ್ನು ಆರಂಭಿಸಿ ನಾಪತ್ತೆಯಾದ 7 ಮೀನುಗಾರರು ಸುರಕ್ಷಿತವಾಗಿ ವಾಪಸ್ಸಾಗಲಿ ಎನ್ನುವುದು ಎಲ್ಲರ ಆಶಯವಾಗಿದೆ