ವಿಜ್ಞಾನ ಕ್ವೀಝ್ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ

First place in science quiz competition

ವಿಜ್ಞಾನ ಕ್ವೀಝ್ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ 

ವಿಜಯಪುರ 13: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಭಾರತದ ಸರ್ವಶ್ರೇಷ್ಠ ವಿಜ್ಞಾನಿ ಸರ್‌. ಸಿ.ವ್ಹಿ. ರಾಮನ್ ಅವರ ಜನ್ಮ ದಿನ ಪ್ರಯುಕ್ತ ಆಯೋಜಿಸಿದ್ದ “ಕ್ವೀಝ್‌” ಕಾರ್ಯಕ್ರಮದಲ್ಲಿ ಬಿ.ಕಾಂ-4 ನೇಯ ಸೆಮೆಸ್ಟರ್ ತಂಡ (ಶ್ರೀಶೈಲ್ ಪಟ್ಟಣಶೆಟ್ಟಿ, ರಾಜಕುಮಾರ ಕನಮಸ ಮತ್ತು ಶಿವಪ್ಪ ಕೊಳಮಲಿ) ಇವರು ಪ್ರಥಮ ಸ್ಥಾನ ಪಡೆದು ಕಾಲೇಜಿನ ಕೀರ್ತಿ  ಹೆಚ್ಚಿಸಿದ್ದಾರೆ,  ಈ ಕ್ವೀಝ್ ಕಾರ್ಯಕ್ರಮದಲ್ಲಿ ಒಟ್ಟು 10 ತಂಡಗಳು ಭಾಗವಹಿಸಿದ್ದವು. ಈ ಕ್ವೀಝ್ ಕಾರ್ಯಕ್ರಮವನ್ನು ಪ್ರೊ. ಎಸ್‌.ಡಿ.ತೊಂಟಾಪೂರ ನಡೆಸಿಕೊಟ್ಟರು. ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಂಶುಪಾಲ ಡಾ. ಎ.ಐ.ಹಂಜಗಿ, ಐ.ಕ್ಯೂ.ಎ.ಸಿ. ಸಂಚಾಲಕ ಪ್ರೊ. ಆರ್‌.ಎಸ್‌.ಕುರಿ, ಕ್ವೀಝ್ ಸಂಚಾಲಕ ಪ್ರೊ. ಎಸ್‌.ಡಿ.ತೋಂಟಾಪೂರ, ವಾಣಿಜ್ಯಶಾಸ್ತ್ರ ಮುಖ್ಯಸ್ಥ ಪ್ರೊ. ಎಂ.ಎಸ್‌.ಖೊದ್ನಾಪೂರ, ಡಾ. ಐ.ಎಸ್‌.ಶಿವಶರಣರ, ಪ್ರೊ. ಆರ್‌.ಐ.ಜೋಗೂರ, ಪ್ರೊ. ವ್ಹಿ.ಆರ್‌.ಕಬಾಡೆ, ಪ್ರೊ. ವಿನೋದ ಹುಲ್ಲೂರ, ಪ್ರೊ. ಕೇಶವಮೂರ್ತಿ, ಪ್ರೊ. ಅಶ್ವೀನಿ ರಾಮಪೂರ ಹಾಗೂ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.