ಯುಪಿಯಲ್ಲಿ ಕರೊನ ಸೋಂಕಿಗೆ ಮೊದಲ ಪತ್ರಕರ್ತ ಬಲಿ ...!!

ಆಗ್ರಾ , ಮೇ 8,  ದೇಶದಲ್ಲಿ ಕರೊನ ಸೋಂಕಿಗೆ ಪತ್ರಕರ್ತರೊಬ್ಬರು ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಕೊರೊನಾ ಸೋಂಕಿಗೆ  ಇದೆ ಮೊದಲ ಬಾರಿಗೆ ಪತ್ರಕರ್ತರೊಬ್ಬರು ಮಾರಕ ಮಹಾಮಾರಿಗೆ  ಬಲಿಯಾಗಿದ್ದಾರೆ.  ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಭು ಎನ್.ಸಿಂಗ್, ಕೊರೊನಾ ವೈರಸ್ ನಿಂದಾಗಿ ಆಗ್ರಾದ ಎಸ್.ಎನ್. ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ರಕರ್ತರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ .ಪತ್ರಕರ್ತನ ಜೊತೆಗೆ ಮತ್ತೊಬ್ಬ  ವ್ಯಕ್ತಿ ಸಹ  ಕೊರೊನಾ ಸೊಂಕಿನಿಂದ ಮೃತಪಟ್ಟಿದ್ದಾರೆ.  ಈ ಮೂಲಕ ಆಗ್ರಾದಲ್ಲಿ ಕೊರೊನಾ ಸೋಂಕಿಗೆ  ಸಾವನ್ನಪ್ಪಿದವರ ಸಂಖ್ಯೆ 20 ಕ್ಕೆ ಏರಿಕೆಯಾಗಿದೆ.