ಟೇಕ್ವಾಂಡೋ ಸ್ಪಧರ್ೆಯಲ್ಲಿ ಪ್ರಥಮ

ಲೋಕದರ್ಶನ ವರದಿ

ರಾಯಬಾಗ 17: ಮುಧೋಳದ ಕಂಠಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಏಕ ವಲಯ ಟೇಕ್ವಾಂಡೋ ಸ್ಪಧರ್ೆಯಲ್ಲಿ ರಾಯಬಾಗ ಪಟ್ಟಣದ ಪ್ರಥಮ ದಜರ್ೆ ಕಾಲೇಜಿನ ವಿದ್ಯಾಥರ್ಿಗಳಾದ ಅನಿಲ ಕೊರವಿ, ಸ್ವರ್ಣಪದಕ (54 ಕೆ.ಜಿ.) ಶಾಂತಿನಾಥ ಕುಡಚೆ, ರಜತ ಪದಕ (58 ಕೆ.ಜಿ.) ಮಹಾಂತೇಶ ಲಬಾಗೆ, ಕಂಚಿನ ಪದಕ (63 ಕೆ.ಜಿ.) ಹಾಗೂ ಸುಧೀಂದ್ರ ಕುಲಕುಣರ್ಿ ಕಂಚಿನ ಪದಕ (80 ಕೆ.ಜಿ) ಪಡೆದು ಕಾಲೇಜಿಗೆ ಕೀತರ್ಿ ತಂದಿದ್ದಾರೆ. ಚಿನ್ನ ಗೆದ್ದ ಅನಿಲ ಕೊರವಿ ಇವರು ಹರಿಯಾಣದ ರೋಧಕನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. 

ಈ ಸಾಧನೆ ಮಾಡಿದ ಕಾಲೇಜಿನ ವಿದ್ಯಾಥರ್ಿಗಳನ್ನು ಪ್ರಾಚಾರ್ಯ ಎಲ್.ಬಿ.ಬನಶಂಕರಿ, ದೈಹಿಕ ನಿದರ್ೇಶಕ ಆನಂದ ಚಾಣಗಿ ಹಾಗೂ ಕಾಲೇಜಿ ಸಿಬ್ಬಂದಿ ಅಭಿನಂದಿಸಿದ್ದಾರೆ. ಈ ವಿದ್ಯಾಥರ್ಿಗಳು ರಾಯಬಾಗ ಟೇಕ್ವಾಂಡೊ ಸ್ಪೋಟ್ಸ್ ಅಸೋಷಿಯಶನ್ದಲ್ಲಿ ತರಬೇತಿ ಪಡೆಯುತ್ತಿದ್ದಾರೆ.