ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ಸತೀಶ್ ಶುಗರ್ಸ್‌ ಆವಾರ್ಡ್ಸ್‌ ಸಹಕಾರಿ: ಸಂಪಾದನಾ ಸ್ವಾಮೀಜಿ

First Satish Sugar Awards organized in Chikkodi

ಚಿಕ್ಕೋಡಿಯಲ್ಲಿ ಆಯೋಜನೆಗೊಂಡ ಮೊದಲ ಸತೀಶ ಶುಗರ್ಸ ಅವಾರ್ಡ್ಸ 

ಚಿಕ್ಕೋಡಿ 15: ಮೊದಲ ಬಾರಿಗೆ ಚಿಕ್ಕೋಡಿಯಲ್ಲಿ ಸತೀಶ್ ಶುಗರ್ಸ್‌  ಆವಾರ್ಡ್ಸ್‌  ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಈ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಚಿವ ಸತೀಶ್ ಜಾರಕಿಹೊಳಿಯವರು ಅನುವು ಮಾಡಿದ್ದಾರೆ ಎಂದು ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಹೇಳಿದರು. 

ಇಲ್ಲಿನ ಆರ್‌.ಡಿ. ಹೈಸ್ಕೂಲ್ ಮೈದಾನದಲ್ಲಿ ನಡೆದ ಮೊದಲನೇ ಸತೀಶ್ ಶುಗರ್ಸ್‌  ಆವಾರ್ಡ್ಸ್‌   ಗ್ರ್ಯಾಂಡ ಫಿನಾಲೆ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಈ ಸತೀಶ್ ಶುಗರ್ಸ್‌  ಆವಾರ್ಡ್ಸ್‌  ಕಾರ್ಯಕ್ರಮ ಇನ್ನಷ್ಟು ದೊಡ್ಡದಾಗಿ ನಡೆಯಲಿದೆ. ಟಿವಿಯಲ್ಲಿ ನಡೆಯುವ ಕಾರ್ಯಕ್ರಮಕ್ಕಿಂತ ಉತ್ತಮವಾಗಿ ಇಲ್ಲಿನ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ ಎಂದು ಬಣ್ಣಿಸಿದರು. 

ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮಾತನಾಡಿ, ಗ್ರಾಮೀಣ ಪ್ರತಿಭೆಗಳಿಗೆ ಸತೀಶ್ ಶುಗರ್ಸ್‌  ಆವಾರ್ಡ್ಸ್‌  ಕಾರ್ಯಕ್ರಮ ಪ್ರಮುಖ ವೇದಿಕೆಯಾಗಿದೆ ಎಂದರು. 

ವೇದಿಕೆ ಮೇಲೆ ಡಿಡಿಪಿಐ ಆರ್‌.ಎಸ್‌. ಸಿತಾರಾಮ, ಕೆಪಿಸಿಸಿ ಯುವ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ಪುರಸಭೆ ಅಧ್ಯಕ್ಷೆ ವೀಣಾ ಕವಟಗಿಮಠ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ, ಮುಖಂಡರಾದ ಶಿವನಗೌಡ ಪಾಟೀಲ, ಕಿರಣ ರಜಪೂತ, ರಿಯಾಜ ಚೌಗಲೆ, ಪ್ರದೀಪ ಕಣಗಲಿ, ಪಿ.ಐ. ಕೋರೆ, ರಾಮಾ ಮಾನೆ, ವಿಜಯ ಮಾಂಜ್ರೇಕರ, ಪುರಸಭೆ ಉಪಾಧ್ಯಕ್ಷ ಇರ​‍್ಾನ ಬೇಪ್ಪಾರೆ, ರಾಜೇಂದ್ರ ವಡ್ಡರ,ಸುರೇಶ ಘರಬುಡೆ,ಗುಲಾಬಹುಸೇನ ಬಾಗವಾನ,ಶ್ಯಾಮ ರೇವಡೆ,ರಾಜು ಕೋಟಗಿ,ಶಂಕರಗೌಡ ಪಾಟೀಲ, ಸಂಜು ಕಾಂಬಳೆ, ಎಚ್‌.ಎಸ್‌. ನಸಲಾಪುರ, ವಕೀಲರ ಸಂಘದ ಅಧ್ಯಕ್ಷ ಕಲ್ಮೇಶ ಕಿವಡ, ಚಿಕ್ಕೋಡಿ ಜಿಲಾ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಎ. ಕುಂಬಾರ, ಈರಣ್ಣಾ ಪುಠಾಣಿ, ಸಂಜಯ ಕವಟಗಿಮಠ, ವಿಶ್ವನಾಥ ಕಾಮಗೌಡ, ರುದ್ರಾ​‍್ಪ ಸಂಗಪ್ಪಗೋಳ, ಅರ್ಜುನ ನಾಯಿಕವಾಡಿ, ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ, ತಹಶೀಲ್ದಾರ ಸಿ.ಎಸ್‌.ಕುಲಕರ್ಣಿ, ಡಿಡಿಪಿಯು ಪಿ.ಐ. ಭಂಡಾರಿ, ಬಿಇಓಗಳಾದ ಬಸವರಾಜಪ್ಪ, ಬಿ.ಎ. ಮೇಕನಮರಡಿ ಉಪಸ್ಥಿತರಿದ್ದರು. 

ಕನ್ನಡ ಸಾಂಸ್ಕ್ರತಿಕ ಅನಾವರಣ: ಮೊದಲನೆ ಸತೀಶ ಶುಗರ್ಸ ಅವಾರ್ಡ್ಸ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ನಾಡು,ನುಡಿ ಬಿಂಬಿಸುವ ಕಾರ್ಯಕ್ರಮಗಳು ಜನರ ಮೆಚ್ಚುಗೆ ಪಡೆದವು.ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವನ್ನು ಯುವ ಮುಖಂಡ ರಾಹುಲ್ ಜಾರಕಿಹೊಳಿ ವಿತರಣೆ ಮಾಡಿದರು.