ಬೆಳಗಾವಿ 11: "ಪ್ರತಿ ವಿದ್ಯಾಥರ್ಿಯ ಜೀವನದಲ್ಲಿ ಎಸ್.ಎಸ್.ಎಲ್.ಸಿ. ಪ್ರಮುಖ ಘಟ್ಟವಾಗಿದ್ದು ಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ನಮ್ಮ ಜಿಲ್ಲೆಯ ವಿದ್ಯಾಥರ್ಿಗಳು ಹೆಚ್ಚಿನ ಅಂಕ ಪಡೆದು ಜಿಲ್ಲೆಗೆ ರಾಜ್ಯದಲ್ಲೇ ಉತ್ತಮ ಫಲಿತಾಂಶ ನೀಡುವಂತಾಗಲು ಇಲಾಖೆ ಎಲ್ಲ ವಿಷಯಗಳ ಶಿಕ್ಷಕರ ಕಾಯರ್ಾಗಾರಗಳನ್ನು ನಿರಂತರವಾಗಿ ನಡೆಸುತ್ತಿದೆ. ಆ ನಿಟ್ಟಿನಲ್ಲಿ ಪ್ರಥಮ ಭಾಷೆ ಕನ್ನಡ ವಿಷಯದ ಕಾಯರ್ಾಗಾರದಲ್ಲಿ ಶಿಕ್ಷಕರು ತಮ್ಮ ಜ್ಞಾನ ವೃದ್ಧಿಸಿಕೊಂಡು ತನ್ಮೂಲಕ ವಿದ್ಯಾಥರ್ಿಗಳಿಗೆ ಉತ್ತಮ ರೀತಿಯಲ್ಲಿ ಬೋಧನೆ ಮಾಡಿ ನೂರಕ್ಕೆ ನೂರರಷ್ಟು ಅಂಕ ಗಳಿಸುವಂತಾಗಲಿ" ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಉಪನಿದರ್ೇಶಕ ಎ.ಬಿ. ಪುಂಡಲಿಕ ಅವರು ಕರೆ ನೀಡಿದರು.
ಕನರ್ಾಟಕ ಸರಕಾರ, ಜಿಲ್ಲಾ ಪಂಚಾಯತ-ಬೆಳಗಾವಿ, ಉಪನಿದರ್ೇಶಕರ ಕಾಯರ್ಾಲಯ-ಬೆಳಗಾವಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯ ಬೆಳಗಾವಿ ನಗರ ಹಾಗೂ ಸಮತಾ ಪ್ರೌಢ ಶಾಲೆ, ಕಣಬರಗಿ-ಬೆಳಗಾವಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಹೊರವಲಯದ ಕಣಬರಗಿಯ ರವಿಶಂಕರ ವಿದ್ಯಾವರ್ಧಕ ಸಂಸ್ಥೆಯ ಸಮತಾ ಶಾಲೆಯಲ್ಲಿ ಜರುಗಿದ 2018-19ನೇ ಸಾಲಿನ ಬೆಳಗಾವಿ ನಗರ ವಲಯದ 'ಪ್ರಥಮ ಭಾಷೆ-ಕನ್ನಡ' ವಿಷಯ ಶಿಕ್ಷಕರ ಕಾಯರ್ಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಸಾಹಿತ್ಯದಲ್ಲಿ ಹಿಂದಿಯ ನಂತರ ಕನ್ನಡಕ್ಕೆ ಪ್ರಮುಖ ಸ್ಥಾನವಿದೆ. ಅಂಥ ಕನ್ನಡ ಸಾಹಿತ್ಯ ಪರಂಪರೆಯನ್ನು ಮುಂದುವರೆಸಲು ಇಂದಿನ ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಮೂಡಿಸುವಲ್ಲಿ ಕನ್ನಡ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಶಿಕ್ಷಕರು ನಮ್ಮ ಕನ್ನಡದ ಭವಿಷ್ಯದ ಸಾಹಿತಿಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕಾಯರ್ೋನ್ಮುಖರಾಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಡಿ. ಬಡಿಗೇರ ಅವರು ಮಾತನಾಡಿ, ಮಕ್ಕಳ ಮನಸ್ಸನ್ನು ಅರಳಿಸಿ ಅವರಲ್ಲಿ ವಿಷಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಲು ಮಾತೃಭಾಷೆ ಪ್ರಮುಖವಾಗಿದೆ. ಕನ್ನಡದ ಮೂಲಕವೇ ಉಳಿದೆಲ್ಲ ಭಾಷೆಗಳನ್ನು ಕಲಿಯಬೇಕಾಗಿರುವುದರಿಂದ ಉತ್ತಮ ಫಲಿತಾಂಶದಲ್ಲಿ ಕನ್ನಡ ವಿಷಯ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಇಂಥ ಕಾಯರ್ಾಗಾರಗಳು ವಿಷಯ ಶಿಕ್ಷಕರಿಗೆ ನವ ಚೈತನ್ಯ ತುಂಬುವಂತಾಗಲಿ ಎಂದರು.
ಹೆಸರಾಂತ ಹಾಸ್ಯಕಲಾವಿದ, ಬೆಳಗಾವಿಯ ಸರಕಾರಿ ಬಿ.ಎಡ್. ಕಾಲೇಜಿನ ಉಪನ್ಯಾಸಕ ರವಿ ಭಜಂತ್ರಿಯವರು 'ಪಾಠ ಬೋಧನೆಯಲ್ಲಿ ಕೌಶಲ್ಯದ ಬಗ್ಗೆ ಮಾತನಾಡಿ, "ಮೋಬೈಲ್ನ ಸ್ಕ್ರೀನ್ಗಳಿಗೆ ಟಚ್ಚಾಗಿರುವ ಮಕ್ಕಳ ಮನಸ್ಸು ಟಚ್ ಮಾಡಲು ಬೊಧಕರು ಹರಸಾಹಸ ಮಾಡಬೇಕಾಗಿದೆ. ಮೊಬೈಲ್ ಮನಸ್ಸು ಕೆರಳಿಸಿದರೆ, ಪುಸ್ತಕ ಮನಸ್ಸು ಅರಳಿಸಬಲ್ಲುದು. ಹೀಗಾಗಿ ಇಂದಿನ ಮಕ್ಕಳಿಗೆ ಹಾಸ್ಯ, ಹಾಡುಗಳ ಮೂಲಕ ಪಾಠ ಬೋಧನೆ ಮಾಡಿದರೆ ಅವರ ಮನಸ್ಸು ಗೆಲ್ಲಬಹುದು. ಕನ್ನಡ ಶಿಕ್ಷಕರು ತಮ್ಮ ಕೀಳರಿಮೆಯಿಂದ ಹೊರಬಂದು ಸಾಹಿತ್ಯ ಓದುವ ಮೂಲಕ ತಲೆ ಎತ್ತಿ ನಿಂತು ವೃತ್ತಿ ಘನತೆ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಹಿರೇಬಾಗೇವಾಡಿಯ ಕನರ್ಾಟಕ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಶಂಕರ ದಂಡಿನ ಅವರು ವಿಷಯ ಶಿಕ್ಷಕರೊಂದಿಗೆ ಸಮಾಲೋಚನೆ, ಚಚರ್ೆ, ವಿಶ್ಲéೇಷಣೆಗಳ ಮೂಲಕ ಎಸ್.ಎಸ್.ಎಲ್.ಸಿ. ಕನ್ನಡ ವಿಷಯದಲ್ಲಿ ಶಿಕ್ಷಕರಿಗೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ನೀಡಿದರು.
ಸಂಪನ್ಮೂಲಾಧಿಕಾರಿ ರಾಜಶೇಖರ ಚಳಗೇರಿ, ಎಂ.ಜಿ. ಪಾಟೀಲ ಮಾತನಾಡಿದರು. ಶಾಲೆಯ ಕಾರ್ಯದಶರ್ಿ ರೇಣುಕಾ ಮಜಲಟ್ಟಿ, ಕಣಬರಗಿಯ ಮಹೇಶ ಫೌಂಡೇಶನ್ನ ನಿದರ್ೇಶಕ ಗಿರೀಶ ನಾಗನೂರ, ಸಲಹಾ ಸಮಿತಿ ಸದಸ್ಯ ಶರತಕುಮಾರ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಸಮತಾ ಶಾಲೆಯ ಅಧ್ಯಕ್ಷ ಶಂಕರ ಬಾಗೇವಾಡಿ ಅವರು ಮಾತನಾಡಿ, ಇಂಥ ಕಾಯರ್ಾಗಾರಗಳಿಂದ ಶಿಕ್ಷಕರು ಸ್ಫೂತರ್ಿಗೊಂಡು ಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕಳೆದ ವರ್ಷಕ್ಕಿಂತ ಉತ್ತಮ ಫಲಿತಾಂಶ ತರುವಂತಾಗಲಿ ಎಂದರು.
ಶಾಲೆಯ ವಿದ್ಯಾಥರ್ಿಗಳು ಹಾಡಿದ ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಹಿಂದಿ ಶಿಕ್ಷಕ ಮಲಿಕಜಾನ ಗದಗಿನ ಸ್ವಾಗತಿಸಿದರು. ಶಾಲೆಯ ಕನ್ನಡ ಶಿಕ್ಷಕಿ ಅಪಣರ್ಾ ಎಸ್. ಗೌಡರ ನಿರ್ವಹಿಸಿದರು. ವಿಜ್ಞಾನ ಶಿಕ್ಷಕಿ ಆರ್. ಎಸ್. ಹುಲಮನಿ ವಂದಿಸಿದರು.