ಹಾರೂಗೇರಿಯಲ್ಲಿ ಪ್ರಥಮ ಚಿಗುರು ವಾರ್ಷಿಕ ಸ್ನೇಹ ಸಮ್ಮೆಳನ

ಲೋಕದರ್ಶನ ವರದಿ

ಹಾರೂಗೇರಿ 14: ಬದುಕುವುದಾದರೆ ಶ್ರೇಷ್ಠವಾದ ಬದುಕನ್ನ ಬದುಕು, ಜಗತ್ತು ಸಾಧಕನ ಸ್ವತ್ತು ಸಾಧಿಸುವುದಾದರೆ ಶ್ರೇಷ್ಠವಾದುದನ್ನ ಚಲದಂಕ ಮಲ್ಲನಂತೆ ಸಾಧಿಸು, ಜ್ಞಾನ ಯಾರಿಂದಾದರು ಬಂದರು ಅದನ್ನ ಸ್ವೀಕರಿಸು ಓದುವುದು ಒಂದೇ ಅಲ್ಲ ಅದರಿಂದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೋಲಿಸ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣವರ ಹೇಳಿದರು.

ಅವರು ಸ್ಥಳೀಯ ಹಾರೂಗೇರಿ ಪಟ್ಟಣ ಸಮೀಪದ ಹಾರೂಗೇರಿ ಕ್ರಾಸ್ದಲ್ಲಿ ಶ್ರೀ ಮಲ್ಲಿಕಾರ್ಜುನ ಫೌಂಡೇಶನ್ ಶೇಗುಣಸಿ ಎಸ್.ಎಂ.ನಾರಗೊಂಡ ಇಂಟರನ್ಯಾಶನಲ್ ಸ್ಕೂಲ್, ಸಹ ಶಿಕ್ಷಣ ಆಂಗ್ಲ ಮಾಧ್ಯಮ ಶಾಲೆ ಇವುಗಳ ಸಹಯೋಗದಲ್ಲಿ ಪ್ರಥಮ ಚಿಗುರು ವಾರ್ಷಿಕ ಸ್ನೇಹ ಸಮ್ಮೆಳನ 2020 ಸಮಾರಂಭದ ಮುಖ್ಯ ಹಾಗೂ ವಿಶೇಷ ಅತಿಥಿಗಳಾಗಿ ಆಗಮಿಸಿ ಸಸಿಗೆ ನೀರುಣಿಸಿ ಮಾತನಾಡಿದರು. ಪ್ರತಿಯೊಬ್ಬರು ಸ್ವಾಭಿಮಾನವನ್ನು ಬೆಳೆಸಿಕೊಳ್ಳಬೇಕು, ವಿದ್ಯೆಗೆ ಕೀಳರಿಮೆ ಇರಬಾರದು, ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿ ಈ ಜಗತ್ತಿನಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಆತ್ಮ ವಿಶ್ವಾಸ ಮತ್ತು ಶ್ರೇದ್ಧೆಯಿಂದ ತಮ್ಮ ಪಾಲಿನ ಕೆಲಸ ಮಾಡಬೇಕು. ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಚಿಕ್ಕೋಡಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಚಿದಾನಂದ ಸವದಿ ಮಾತನಾಡಿ ಪಟ್ಟಣದಲ್ಲಿ ದೊರೆಯುವ ಗುಣಮಟ್ಟದ ಶಿಕ್ಷಣ ಗ್ರಾಮೀಣ ಭಾಗದಲ್ಲಿ ದೊರೆಯುವಂತಾಗಲಿ  ಈ ಶಿಕ್ಷಣ ಸಂಸ್ಥೆ ಮುಂದಿನ ದಿನಗಳಲ್ಲಿ ಬಾನೇತ್ತರದಕ್ಕೆ ಬೆಳೆಯುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ವಿವೇಕ ನಾರಗೊಂಡ ಅಧ್ಯಕ್ಷರು, ಎಸ್.ಎಂ.ಎನ್.ಇ ಸ್ಕೂಲ್ ಸ್ವಾಗತಿಸಿದರು, ಪ್ರಾಸ್ತಾವಿಕವಾಗಿ ಮಾತನಾಡಿ ವರ್ಷದ ಪ್ರಥಮ ಚಿಗುರು ಕಾರ್ಯಕ್ರಮಕ್ಕೆ ರವಿ ಚನ್ನಣ್ಣವರ ಅಧಿಕಾರಿಗಳು ಬಂದಿದ್ದು ತುಂಬಾ ಸಂತೋಷದ ಸಂಗತಿಯಾಗಿದ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ ಈ ಭಾಗದ ಮಕ್ಕಳ ಕನಸುಗಳನ್ನು ಸಾಕಾರಗೊಳಿಸಲು ನಮ್ಮ ಸಂಸ್ಥೆ ಸದಾ ಸಿದ್ಧ ಎಂದರು. ವಿರಕ್ತಮಠ ಶೇಗುಣಸಿಯ ಮಹಾಂತ ದೇವರು ಆಶೀರ್ವಚನ  ನೀಡಿದರು. ಇದೇ ಸಂದರ್ಭದಲ್ಲಿ ಶ್ರೀಶೈಲ ನಾರಗೊಂಡ ಸಂಸ್ಥಾಪಕ ಅಧ್ಯಕ್ಷರು, ಎಸ್.ಎಂ.ಎನ್.ಇ ಸ್ಕೂಲ್, ಅಶೋಕ ಮಿರ್ಜೆ ವಾಣಿಜ್ಯ ತೆರಿಗೆ ಅಧಿಕಾರಿ, ಎಂ.ಎನ್.ಹಂಚಾಟೆ ಉಪನಿರ್ದೇಶಕರು, ಸಾ.ಶಿ.ಇ ಚಿಕ್ಕೋಡಿ,  ಎಸ್.ಎ.ಭಜಂತ್ರಿ ಬಿ.ಇ.ಓ ರಾಯಬಾಗ, ಗಿರೀಶ ನಾರಗೊಂಡ, ಡಿ.ಸಿ.ಸದಲಗಿ, ಬಸನಗೌಡ ಆಸಂಗಿ, ರಾಮಣ್ಣ ಗಸ್ತಿ, ಅಶೋಕ ಅವಕ್ಕನವರ, ಡಾ. ಮೃತ್ಯುಂಜಯ ನಾರಗೊಂಡ, ವಿಶ್ವನಾಥ ನಾರಗೊಂಡ, ತಮ್ಮನಪ್ಪ ತೇಲಿ, ಶಿವರಾಯ ಯಲಡಗಿ, ಮಹಾಂತೇಶ ಜಲಗೇರಿ, ಬೀಮು ಬದ್ನಿಕಾಯಿ, ಶಿವಗೊಂಡ ಧರ್ಮಟ್ಟಿ, ಜಿನಪ್ಪ ಅಸ್ಕಿ, ಈರಣಗೌಡ ಪಾಟೀಲ, ತವನಪ್ಪ ಬದನಿಕಾಯಿ, ಎನ್.ಎಸ್.ಚೌಗಲಾ, ಬಾಬು ಹಳ್ಳೂರ, ಅಮೀತ ಗಾವಡೆ, ಸದಾಶಿವ ಠಕ್ಕಣ್ಣವರ, ಚಿದಾನಂದ ನಾರಗೊಂಡ, ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಇದ್ದರು. ಮಹಾಂತೇಶ ಮುಗಳಖೋಡ ನಿರೂಪಿಸಿದರು, ವಂದಿಸಿದರು.