ಲೋಕದರ್ಶನ ವರದಿ
ರೋಣ 22: ರೋಣ ತಾಲ್ಲೂಕಿನ ಸುಕ್ಷೇತ್ರ ಇಟಗಿ ಗ್ರಾಮದಲ್ಲಿ ಮಹಾಶಿವರಾತ್ರಿಯ ನಿಮಿತ್ತ ಗ್ರಾಮದ ಶ್ರೀ ಭೀಮಾಂಬಿಕಾ ದೇವಿ ದೇವಾಲಯದ ಸಂಭಾಗಣದಲ್ಲಿ ಆಯೋಜಿಸಿದ ಮಹಾ ಶಿವರಾತ್ರಿಯ ಜಾಗರನೆಯ ಹಾಗೂ 440ನೇ ಶಿವಾನುಭವ ಗೋಷ್ಠಿ ಮತ್ತು ಕಳೆದ ವರ್ಷ 2019- 20ನೇ ಸಾಲಿನ ಶ್ರೀ ಗುರು ಮಹಾಂತೇಶ್ವರ ಪದವಿ ಪೂರ್ವ ಕಾಲೇಜು ಸೂಡಿಯಲ್ಲಿ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ತರಗತಿಯಲ್ಲಿ ಹೆಚ್ಚಿನ ಅಂಕಗಳನ್ನುಗಳಿಸಿ ಊರಿಗೆ ಹಾಗೂ ಯುವ ಪಿಲಿಗೆಗ್ಗೆ ಉತ್ತಮರಲ್ಲಿ ಉತ್ತಮರಾಗಿ ಎಂದು ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾಥರ್ಿಗಳಿಗೆ ಸ್ಪೂತರ್ಿ ನೀಡಿದರು. ಸನ್ಮಾನಿತ ವಿದ್ಯಾಥರ್ಿಗಳಾದ ಸೊಮೇಶ. ಭೀ. ಅವಾರಿ, ಭೀಮಪ್ಪ. ಬೊವಿ, ಅಕ್ಷತಾ ಕುರಿ, ಪ್ರವೀಣ್ ಉದ್ಧಾರ ಮತ್ತು ದೀಪಾ ಮೆಣಸಿನಕಾಯಿ ಎಂಬ ವಿದ್ಯಾಥರ್ಿಗಳು ಉತ್ತಮ ಅಂಕ ಪಡೆದು ಗ್ರಾಮಕ್ಕೆ ಕಿತರ್ಿ ತಂದಿದ್ದಾರೆ. ಕಾಲೇಜಿನ ಆಡಳಿತ ಮಂಡಳಿಯವರು ವಿದ್ಯಾಥರ್ಿಗಳಿಗೆ 500001 ರೂ. ನಗದು ಬಹುಮಾನ ಕೊಟ್ಟು ಗೌರವಿಸಲಾಯಿತು.
ಶ್ರೀ ಭೀಮಾಬಿಂಕಾ ದೇವಿ ಶಿವಾನುಭವ ಸಭ ಮಂಟದಲ್ಲಿ ಶುಕ್ರವಾರ ಸಂಜೆ ಮಹಾ ಶಿವರಾತ್ರಿಯ ಜಾಗನರ್ೆಯ ನಿಮಿತ್ಯವಾಗಿ ರಾತ್ರಿ 8 ಗಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಇಟಗಿ ಶಾಲಾ ಮಕ್ಕಳಿಂದ ರಸಮಂಜರಿ ಹಾಗೂ ವಿವಿಧ ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಗಂಗಾಧರ ಮಹಾಸ್ವಾಮಿಗಳು ಅಡವಿಸಿದ್ದೇಶ್ವರ ಸಂಸ್ಥಾನಮಠ ಕೋತ್ತಬಾಳ, ಶಿವಪ್ಪಜ್ಜ ಧರ್ಮರಮಠ, ಪರಶುರಾಮ ಎಸ್ ಅಡಗತ್ತಿ ಪ್ರಧಾನ ಗುರುಗಳು ಸ.ಹಿ.ಪ್ರಾಥಮಿಕ ಶಾಲೆ ಇಟಗಿ ಶರಣಪ್ಪ ಮಳಗಿ ಮಹಾಂತಪ್ಪ ಹೊರಪೇಟಿ ಅಂದಪ್ಪ ಜಡದೇಲಿ ಶ್ರೀ ಭೀಮಾಂಬಿಕಾ ದೇವಿ ಕ್ರೀಡಾ ಹಾಗೂ ಸಂಸ್ಕೃತಿಕ ಸಂಘ ಹಾಗೂ ಗ್ರಾಮದ ಗಣ್ಯರು, ಯುವಕರು ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.