ಬಾಗಲಕೋಟೆ 15: ಕರ್ನಾಟಕದ ಹಾಲುಮತ ಸಮಾಜದ ಕುರಿಗಾಹಿಗಳಿಗೆ ಆತ್ಮ ರಕ್ಷಣೆಗೆ ಪ್ರತೇಕವಾದ ವಿಶೇಷ ಬಂದೂಕು ತರಬೇತಿಯನ್ನು ಬಾಗಲಕೋಟೆ ಜಿಲ್ಲಾ ಪೋಲಿಸ್ ಘಟಕ ಎಪ್ರಿಲ್ 07 ರಿಂದ 13 ರವರೆಗೆ ತರಬೇತಿಯನ್ನು ಆಯೋಜಿಸಿದ್ದು, ತರಬೇತಿಯನ್ನು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಅತಿ ಶೀಘ್ರದಲ್ಲಿ ಆಯೋಜಿಸಬೇಕು ಎಂದು ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ಮತ್ತು “ಶ್ರೇಷ್ಠ ಪಶುಪಾಲಕ” ರಾಜ್ಯ ಮತ್ತು ರಾಷ್ರ್ಟ ಪ್ರಶಸ್ತಿ ಪುರಸ್ಕೃತ ಮಾರುತಿ ಮರ್ಡಿ ಮೌರ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ರಾಜ್ಯದ ಕುರಿಗಾಹಿಗಳ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ ಇದಕ್ಕೆ ಕಡಿವಾಣ ಹಾಕುವುದಕ್ಕಾಗಿ ರಾಜ್ಯ ಸರ್ಕಾರ ಕುರಿಗಾಹಿ ಹಿತರಕ್ಷಣಾ ಕಾಯ್ದೆ ಜಾರಿಗೆ ತರಬೇಕು. ಅನೇಕ ಸಲ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಮಂತ್ರಿಯವರಿಗೆ ಮನವಿಯನ್ನು ಮಾಡಿದ್ದೇವೆ. ಇಲ್ಲಿಯವರೆಗೆ ಯಾವೂದೇ ಕೆಲಸ ಕಾರ್ಯಗಳಾಗಿಲ್ಲ ಇನ್ನಾದರೂ ಸಂಚಾರಿ ಕುರಿಗಾಹಿಗಳು ಜಿಲ್ಲೆಯಿಂದ ಜಿಲ್ಲೆಗೆ ಕುರಿ ಮೇಯಿಸಲು ಊರೂರು ಅಲೆಯುವ ಕುರಿಗಾರರ ರಕ್ಷಣೆ ಮಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಬಂದೂಕನ್ನು ಜಿಲ್ಲೆಯಿಂದ ಜಿಲ್ಲೆಗೆ ತೆಗೆದುಕೊಂಡು ಹೋಗುವಂತೆ ಮತ್ತು ಕಾಡಿನಂಚಿನಲ್ಲಿರುವ ಕುರಿಗಾಹಿಗಳಿಗೆ ಅಪಾಯಕಾರಿ ಕಾಡು ಪ್ರಾಣಿಗಳಿಂದ ಮತ್ತು ಕುರಿಗಳ್ಳರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಗುಂಡು ಹಾರಿಸುವ ಅಧಿಕಾರವನ್ನು ನೀಡಬೇಕು. ಬಂದೂಕು ಅರ್ಜಿ ನೀಡುವ ಸಂದರ್ಭದಲ್ಲಿ ಅತಿ ಕಡಿಮೆ ದಾಖಲಾತಿಗಳನ್ನು ಪರಿಸ್ಕರಿಸಿ ಅನುಮೋದನೆ ನೀಡುವುದು. ರಾಜ್ಯಾದ್ಯಂತ ಬಂದೂಕು ಲೈಸೆನ್ಸ್ ವ್ಯಾಪ್ತಿಯನ್ನು ಹೆಚ್ಚಿಸುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡುವುದು. ವಿವಿದ ಚುನಾವಣೆಗಳಲ್ಲಿ ಕಾಲ ಕಾಲಕ್ಕೆ ಕುರಿಗಾಹಿಗಳ ಆಯುಧವನ್ನು ಸಂಬಂದ ಪಟ್ಟ ಪೋಲಿಸ್ ಠಾಣೆಗೆ ಜಮಾ ಮಾಡದಂತೆ ಕ್ರಮವಹಿಸುವುದು.
ಎಲ್ಲ ಪೋಲಿಸ್ ಠಾಣೆಗಳಲ್ಲಿ ಸಮಾಧಾನದಿಂದ ವರ್ತಿಸಿ ಆಯುಧ ಲೈಸನ್ಸ್ ಪಡೆಯುವ ಮಾಹಿಯನ್ನು ನೀಡಿ ಅನೂಕೂಲ ಮಾಡುವಂತೆ ಮೌರ್ಯ ಸರ್ಕಾರಕ್ಕೆ ವಿನಂತಿಯನ್ನು ಮಾಡಿದ್ದಾರೆ. ಬಂದೂಕು ತರಬೇತಿಗೆ ಕುರಿಗಾರರು ನಿಗದಿತ ನಮೂನೆಯ ಪಾರ್ಮಗಳನ್ನು ಡಿಎಸ್ಪಿ ,ಡಿಎಆರ್ ನವನಗರ ,ಬಾಗಲಕೋಟ ಕಛೇರಿಯಲ್ಲಿ ಪಡೆದುಕೊಂಡು ಪಾರ್ಮನ್ನು ಸಂಪೂರ್ಣವಾಗಿ ತುಂಬಿ ಅರ್ಜಿಯನ್ನು ಎಪ್ರಿಲ್ 05 ರ ಒಳಗಾಗಿ ಸಲ್ಲಿಸಬೇಕು ಎಂದು ತಿಳಿಸಿದರು.