ಮರದ ಅಂಗಡಿಯಲ್ಲಿ ಬೆಂಕಿ ದುರಂತ: ಇಬ್ಬರಿಗೆ ಗಾಯ

ಜಮ್ಮು, ಫೆ12 :   ಮರದ ಗೋದಾಮಿನಲ್ಲಿ ಸಂಭವಿಸಿದ ಭಾರಿ  ಬೆಂಕಿ  ದುರಂತದಲ್ಲಿ   ಮೂರು ಅಂತಸ್ತಿನ ಕಟ್ಟಡ ಕುಸಿದಿದ್ದು, ಇಬ್ಬರು ಗಾಯಗೊಂಡಿದ್ದಾರೆ.ತಲಾಬ್ ಟಿಲ್ಲೊ ಪ್ರದೇಶದ ಗೋಲ್ ಪುಲಿಯ ಮರದ ಅಂಗಡಿಯಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ ಎಂದು ಇಲ್ಲಿನ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಧಿಕಾರಿಯೊಬ್ಬರು ಯುಎನ್‌ಐಗೆ ತಿಳಿಸಿದ್ದಾರೆ. ಮರದ ಕಾರಣ ಬೆಂಕಿ  ತೀವ್ರವಾಗಿ ಹಬ್ಬಿದೆ ಪರಿಣಾಮ ಮೂರು ಅಂತಸ್ತಿನ ಕಟ್ಟಡವೂ  ಕುಸಿದಿದೆ ಎಂದು ಅವರು ಹೇಳಿದರು.

ಪರಿಹಾರ ಕಾರ್ಯಾಚರಣೆ ಸಮಯದಲ್ಲಿ  ಇಬ್ಬರು ಅಗ್ನಿಶಾಮಕ ದಳದ ಸಿಬ್ಬಂದಿ  ಗಂಭೀರ ಗಾಯಗೊಂಡಿದ್ದಾರೆ ಕೆಲವರು ಕುಸಿದ ಕಟ್ಟಡದಲ್ಲಿ ಸಿಲುಕಿದ್ದಾರೆ. ಬೆಂಕಿ  ನಿವಾರಿಸಲು  10 ಅಗ್ನಿಶಾಮಕ ಯಂತ್ರಗಳನ್ನು ಬಳಕೆ ಮಾಡಲಾಗಿದೆ 

ಹೆಚ್ಚಿನ ವಿವರ ಕಾಯಲಾಗುತ್ತಿದೆ ಎಂದೂ  ಅವರು ಹೇಳಿದರು.