ಪ್ರಯಾಗ್‌ರಾಜ್ 19: ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದದಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಮೇಳದ ಸೆಕ್ಟರ್ 5 ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಟೆಂಟ್‌ನಲ್ಲಿ ಇರಿಸಲಾಗಿದ್ದ ಸಿಲಿಂಡರ್ ಸ್ಫೋಟಗೊಂಡ ನಂತರ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ 20-25 ಟೆಂಟ್‌ಗಳು ಸುಟ್ಟು ಭಸ್ಮವಾಗಿವೆ. ಸೆಕ್ಟರ್ 5 ರಲ್ಲಿ ಪ್ರಾರಂಭವಾದ ಬೆಂಕಿ ಕ್ರಮೇಣ 19 ಮತ್ತು 20 ಸೆಕ್ಟರ್‌ಗಳಿಗೂ ಹರಡಿದೆ. ಬಲವಾದ ಗಾಳಿಯ ಕಾರಣ, ಬೆಂಕಿ ವೇಗವಾಗಿ ಹರಡಿದ್ದು ಸುತ್ತಮುತ್ತಲಿನ ಡೇರೆಗಳನ್ನು ಸಹ ಆವರಿಸಿದೆ.
ಎಂದು ಹೇಳಲಾಗುತ್ತಿದೆ. ಬೆಂಕಿಯನ್ನು ನಿಯಂತ್ರಿಸಲು ಆರು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದೆ.
ಶಾಸ್ತ್ರಿ ಸೇತುವೆ ಮತ್ತು ರೈಲ್ವೆ ಸೇತುವೆಯ ನಡುವಿನ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ ಬೆಂಕಿ ಹರಡುತ್ತಲೇ ಇದ್ದು ಬೆಂಕಿಯನ್ನು ನಿಯಂತ್ರಿಸಲು ಪೊಲೀಸರು ಮತ್ತು ಎನ್‌ಡಿಆರ್‌ಎಫ್ ತಂಡಗಳು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ಥಳಾಂತರಿಸುತ್ತಿವೆ. ಟೆಂಟ್‌ನಲ್ಲಿ ಇರಿಸಲಾಗಿದ್ದ ಸಿಲಿಂಡರ್‌ಗಳು ಒಂದೊಂದಾಗಿ ಸ್ಫೋಟಗೊಳ್ಳುತ್ತಿರುವುದರಿಂದ ಬೆಂಕಿ ಹೆಚ್ಚು ತೀವ್ರವಾಗುತ್ತಿದೆ.
ಬೆಂಕಿ ಅವಘಡದ ನಂತರ, ಇಡೀ ಕುಂಭ ಮೇಳದಲ್ಲಿ ಅವ್ಯವಸ್ಥೆಯ ಸ್ಥಿತಿ ನಿರ್ಮಾಣವಾಯಿತು. ಬೆಂಕಿ ಅವಘಡದಲ್ಲಿ ಯಾವುದೇ ಸಾವುನೋವುಗಳ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.