ದೆಹಲಿಯಲ್ಲಿ ಮತ್ತೆ ಬೆಂಕಿ ದುರಂತ: ಮಗುವೊಂದು ಸೇರಿ 9 ಮಂದಿ ಸಾವು

ನವದೆಹಲಿ, ಡಿ 23, ನಗರದ ಕಿರಾರಿ ಪ್ರದೇಶದ ಬಟ್ಟೆ ಗೋದಾಮುವೊಂದರಲ್ಲಿ ಕಳೆದ ಮಧ್ಯರಾತ್ರಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಮಗುವೊಂದು ಸೇರಿ 9 ಮಂದಿ ಮೃತಪಟ್ಟಿದ್ದಾರೆ.ಬೆಂಕಿಯಿಂದ ಮೃತಪಟ್ಟವರ ಹತ್ತಿರದ ಸಂಬಂಧಿಗಳಿಗೆ ತಲಾ 10 ಲಕ್ಷ ರೂ, ಗಾಯಗೊಂಡವರಿಗೆ ತಲಾ ಒಂದು ಲಕ್ಷ ರೂ. ಪರಿಹಾರವನ್ನು ದೆಹಲಿ ಸರ್ಕಾರ ಪ್ರಕಟಿಸಿದೆ.   ಘಟನೆ ಕುರಿತಂತೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ದೆ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ.ಕಿರಾರಿಯಲ್ಲಿ ಬೆಂಕಿ ದುರಂತ ಸಂಭವಿಸಿದ ಕಟ್ಟಡವನ್ನು ಪರಿಶೀಲಿಸಿದ ನಂತರ ಅವರು ಮಾತನಾಡಿ, ಘಟನೆಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ‘ಪ್ರೇಮ್ ನಗರ ಕಿರಾರಿಯಲ್ಲಿರುವ ಬಟ್ಟೆ ಗೋದಾಮಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡ ಕುರಿತು ಮಧ್ಯರಾತ್ರಿ ಸುಮಾರು 12.30ಕ್ಕೆ ಕರೆ ಸ್ವೀಕರಿಸಿದ ತಕ್ಷಣ ಸುಮಾರು 10 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿವೆ." ಎಂದು ಅಗ್ನಿಶಾಮಕ  ಅಧಿಕಾರಿ ತಿಳಿಸಿದ್ದಾರೆ. ‘ಮೃತಪಟ್ಟ 9 ಜನರ ಪೈಕಿ ಮೂವರು ಉಸಿರುಗಟ್ಟಿ ಸಾವನ್ನಪ್ಟಿದ್ದಾರೆ.’ಎಂದು ಅಗ್ನಿಶಾಮಕ ಇಲಾಖೆ ಹೇಳಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಮೂರು ಸುಟ್ಟ ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಟ್ಟಡದಲ್ಲಿ ಗೋದಾಮು ನೆಲಮಹಡಿಯಲ್ಲಿದ್ದು, ಮೇಲಿನ ಮೂರು  ಮನೆಗಳು ಇವೆ ಎಂದು ಅವರು  ಹೇಳಿದ್ದಾರೆ.   ಈ ತಿಂಗಳ ಮೊದಲ ವಾರದಲ್ಲಿ ದೆಹಲಿಯಲ್ಲಿ ಕಾಗದ ಕಾರ್ಖಾನೆಯಿದ್ದ ಕಟ್ಟಡದಲ್ಲಿ ಬೆಂಕಿ ಅನಾಹುತ ಸಂಭವಿಸಿ 43 ಮಂದಿ ಮೃತಪಟ್ಟಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ.