ಬೆಂಕಿ ಅವಘಡ; 6 ಮಂದಿ ದುರ್ಮರಣ

ನವದೆಹಲಿ, ಆಗಸ್ಟ್ 6    ಆಗ್ನೇಯ ದೆಹಲಿಯ ಜಾಮಿಯಾ ನಗರ ಪ್ರದೇಶದ ವಸತಿ ಕಟ್ಟಡವೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಆರು ಜನ ಸಾವನ್ನಪ್ಪಿರುವ ಧಾರುಣ ಘಟನೆ ಮಂಗಳವಾರ ವರದಿಯಾಗಿದೆ. 

ಬೆಂಕಿ ಅವಘಡದಲ್ಲಿ ಹತ್ತು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಒಂದು ಮಗು ಸೇರಿದಂತೆ ಏಳು ಮಂದಿ ಐಸಿಯುನಲ್ಲಿದ್ದಾರೆ.  

 ಒಟ್ಟು ಎಂಟು ಅಗ್ನಿಶಾಮಕ ವಾಹನಗಳು ಮೂರು ಗಂಟೆಗಳ ಕಾಲ ಕಾಯರ್ಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ.  

ಕಟ್ಟಡದಲ್ಲಿ ಎಲೆಕ್ಟ್ರಿಕ್ ಮೀಟರ್ ಬೋಡರ್್ನಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಕಟ್ಟಡದೆಲ್ಲಡೆ ಬೆಂಕಿ ಆವರಿಸಿದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.