ಲೋಕದರ್ಶನ ವರದಿ
ಶಿರಹಟ್ಟಿ: ಪಟ್ಟಣದ ಅಂಬೇಡ್ಕರ್ ಓಣಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಗೌರಿ ಹುಣ್ಣಿಮೆಯ ದಿನವಾದ ಮಂಗಳವಾರ ಶ್ರೀ ಮರಿಯಮ್ಮದೇವಿ ಹಾಗೂ ಸ್ವಾರೆಮ್ಮದೇವಿಯ 65ನೇ ವರ್ಷದ ಅಗ್ನಿ ಮಹೋತ್ಸವ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಿತ್ತು.
ಪಟ್ಟಣದಲ್ಲಿ ಮಂಗಳವಾರ ಮರಿಯಮ್ಮ ದೇವಿಯ ಅಗ್ನಿ ಪ್ರವೇಶದ ನಿಮಿತ್ಯ, ಬೆಳಗ್ಗೆಯಿಂದ ಹಳ್ಳದ ದುರುಗಮ್ಮನ ಗುಡಿಯಿಂದ ಬಜಾರ ರಸ್ತೆ ಮೂಲಕ ಎಲ್ಲ ಭಕ್ತರು ಡೊಳ್ಳು ಕುಣಿತದ ಮೂಲಕ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಾಗುತ್ತಾ, ದೇವಿಯ ಹಿಂದ ಎಲ್ಲಾ ಭಕ್ತರು ಉಧೋ ಉಧೋ ಎಂದು ಘೋಷಣೆ ಹಾಕುತ್ತಿರುವ ದೃಶ್ಯ ಸಮಾನ್ಯವಾಗಿತ್ತು. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಮರಿಯಮ್ಮ ದೇವಿ ಹಾಗೂ ಸ್ವಾರೆಮ್ಮದೇವಿಯ ಪಾಲಿಕೆಯೊಂದಿಗೆ, ಬೇಡಿಕೊಂಡ ಸರ್ವ ಭಕ್ತರು ಅಗ್ನಿ ಪ್ರವೇಶ ಮಾಡುವುದರ ಮೂಲಕ ದೇವಿಯ ಕೃಪೆಗೆ ಪಾತ್ರರಾದರು. ನಂತರ ವಿವಿಧ ಗ್ರಾಮಗಳಿಂದ ಬಂದಂತಹ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.