ಬೆಳಗಾವಿ 16: ಜನವರಿ 11 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವೀಕ್ಷಣಾಲಯ ಆವರಣದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬನು ಅಂದಾಜು 1 ವರ್ಷ 5 ತಿಂಗಳು ಗಂಡು ಮಗುವನ್ನು ಆವರಣದಲ್ಲಿ ಆಟ ಆಡುತ್ತಿದ್ದ ಬಾಲಕಿ ಒಬ್ಬಳಿಗೆ ತನ್ನ ಮಗುವನ್ನು ಎತ್ತಿಕೊ ನಾನು ಮರಳಿ ಬರುತ್ತೇನೆ ಎಂದು ಹೇಳಿ ಹೋದವನು ಇಲ್ಲಿಯವರೆಗೂ ಬಂದಿರುವುದಿಲ್ಲ.
ಮಗುವಿನ ಜೈವಿಕ ಪಾಲಕರು ಯಾರಾದರು ಇದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿವಾಜಿ ನಗರ, ವೀಕ್ಷಣಾಲಯ ಆವರಣ, ಬೆಳಗಾವಿ ದೂರವಾಣಿ-0831-2474111 ಗೆ ಸಂಪಕರ್ಿಸಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.