ಸಾಲದ ಸದ್ವಿನಿಯೋಗ ಮಾಡಿಕೊಂಡು ಆರ್ಥಿಕವಾಗಿ ಸದೃಢವಾಗಿ: ಗಾಣಿಗೇರ

ಲೋಕದರ್ಶನ ವರದಿ

ಮೋಳೆ 20: ಆರ್ಥಿಕವಾಗಿ ಹಿಂದುಳಿದ ವಿದ್ಯಾವಂತ ಯುವಕರು, ಶಿಕ್ಷಣ ಪಡೆದು ನೌಕರಿ ಸಿಗಲಾರದೆ ಅಲೆದಾಡುತ್ತಿರುವವರು ಸ್ವಯಂ ಉದ್ಯೋಗ ಮಾಡಲು ಮುಂದಾದರೆ ಬ್ಯಾಂಕುಗಳು ಹಲವಾರು ಕಾಗದ ಪತ್ರಗಳಿಗಾಗಿ ಅಲೆದಾಡಿಸುತ್ತಾರೆ. ಆದರೆ ಈ ಸಂಸ್ಥೆಯವರು ಲಭ್ಯವಿದ್ದ ಕಾಗದ ಪತ್ರಗಳನ್ನು ಪಡೆದು ಸಾಲ ನೀಡಿ  ಸಾಲ ಕೊಡುವ ಮೂಲಕ ಈ ಸಂಸ್ಥೆ ನಿರುದ್ಯೋಗಿಗಳಿಗೆ ಆಶಾಕಿರಣವಾಗಿದೆ ಎಂದು ಪಟ್ಟಣ ಪಂಚಾಯತ್ ಉಪಾದ್ಯಕ್ಷ ರವೀಂದ್ರ ಗಾಣಿಗೇರ ಹೇಳಿದರು.

 ಅವರು ಐನಾಪುರ ಪಟ್ಟಣದಲ್ಲಿ ಕಲ್ಪವೃಕ್ಷ ಪೈನಾನ್ಸ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ರೈತರಿಗೆ, ಚಿಕ್ಕ ಪುಟ್ಟ ವ್ಯಾಪಾರಿಗಳಿಗೆ, ವ್ಯಾಪಾರ ಮಾಡಲು ಹಾಗೂ ನಿರುದ್ಯೋಗಿ ಯುವಕರಿಗೆ ವಹಾನ ಖರೀದಿಗೆ ಈ ಸಂಸ್ಥೆ  ಸುಲಭ ಮಾರ್ಗದಲ್ಲಿ ಸಾಲ ನೀಡುತ್ತಿದ್ದು, ರೈತರು, ವ್ಯಾಪಾರಸ್ಥರು, ಯುವಕರು ಇದರ ಸದುಪಯೋಗ ಪಡಿಸಿಕೊಂಡು ವೇಳೆಗೆ ಸರಿಯಾಗಿ ಸಾಲ ಪಡೆದು ಅವಧಿಗೂ ಮುನ್ನ ಮರು ಪಾವತಿ ಮಾಡಿದರೆ ಸಂಸ್ಥೆಗೂ ಲಾಭ, ಗ್ರಾಹಕರಿಗೂ ಅನುಕೂಲವಾಗಲಿದೆ ಎಂದರು.

  ಅತಿಥಿಗಳಾಗಿ ಪಟ್ಟಣ ಪಂಚಾಯತ್ ಸದಸ್ಯ ಶಿವಗೌಡ ಪಾರಶೆಟ್ಟಿ,ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಭಾಷ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಕುಮಾರ ಅಪರಾಜ, ಮುಖಂಡರಾದ ರಾಜೇಂದ್ರ ಪೋತದಾರ, ಗೋಪಾಲ ಮಾನಗಾಂವೆ, ಶಿವಪುತ್ರ ಪಾವಲಿ ಸಂಸ್ಥೆಯ ಅಧ್ಯಕ್ಷ ಆದಿನಾಥ ದಾನೊಳ್ಳಿ ಉಪಸ್ಥಿತರಿದ್ದು ಮಾತನಾಡಿದರು.

  ಈ ವೇಳೆ ಅಧ್ಯಕ್ಷ ಆದಿನಾಥ ದಾನೊಳ್ಳಿ, ಉಪಾಧ್ಯಕ್ಷ ಪ್ರವೀಣ ಕುಲಕರ್ಣಿ, ಸಂಜಯ ಕುಚನೂರೆ, ಸುನೀಲ ಪಾಟೀಲ, ಸತೀಶ ಗಾಣಿಗೇರ, ಮಹಾವೀರ ಶಿರಗಾಂವೆ, ಮೋಹನ ಗಾಣಿಗೇರ, ಸಂಜಯ ಬಿರಡಿ,ಸಂತೋಷ ಪಾಟೀಲ, ಪ್ರಕಾಶ ಸತ್ತಿ, ಬಾಹುಬಲಿ ಕುಸನಾಳೆ, ಯಶವಂತ ಪಾಟೀಲ ಉಪಸ್ಥಿತರಿದ್ದರು.