ಮಹಾರಾಷ್ಟ್ರದಲ್ಲಿ ಜುಲೈ 15 ರಿಂದ ವೈದ್ಯಕೀಯ ಕೋರ್ಸ್ ಅಂತಿಮ ಪರೀಕ್ಷೆ

ಮುಂಬೈ, ಜೂನ್ 7,ಮಹಾರಾಷ್ಟ್ರ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ (ಎಮ್ ಯು ಎಚ್ ಎಸ್)ದ ಅಂತಿಮ ವರ್ಷದ ಪರೀಕ್ಷಗಳು ಜುಲೈ 15 ರಿಂದ 27 ರವರೆಗೆ ನಡೆಯಲಿದೆ.ಪರೀಕ್ಷಾ ವೇಳಾಪಟ್ಟಿಯನ್ನು ಜಾಲತಾಣದಲ್ಲಿ ಪ್ರಕಟಿಸಲಾಗಿದೆ ಎಂದು ಪರೀಕ್ಷಾ ನಿಯಂತ್ರಕ ಡಾ. ಅಜಿತ್ ಪಾಠಕ್ ಮಾಹಿತಿ ನೀಡಿದ್ದಾರೆ.ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶ್ವವಿದ್ಯಾಲಯದ ವ್ಯಾಪ್ತಿಯ ವಿವಿಧ ಕಾಲೇಜುಗಳಲ್ಲಿ ಹಂತಹಂತವಾಗಿ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.