ಲೋಕದರ್ಶನ ವರದಿ
ಬೆಳಗಾವಿ 08: ಜೈನ ಹೆರಿಟೇಜ ಶಾಲೆಯಲ್ಲಿ ಚಿಂತಕರು, ಮಹೇಶ ಪೌಂಡೇಶನದ ಮಕ್ಕಳು ಹಾಗೂ ಅನಾಥಾಶ್ರಮದ ಮಕ್ಕಳಿಗೆ 2019 ಜುಲೈ 7 ರಂದು ಚಲನ ಪ್ರದರ್ಶನವನ್ನು ಏರ್ಪಡಿಸಿದ್ದರು. "ಜಂಗಲ ಬುಕ್ ಎಂಬ ಚಲನ ಚಿತ್ರವು ಪ್ರದರ್ಶನವನ್ನು ಏರ್ಪಡಿಸಿದ್ದರು. ಈ ಚಲನ ಚಿತ್ರವನ್ನು 75 ವಿದ್ಯಾಥರ್ಿಗಳು ವೀಕ್ಷಿಸಿ, ಅದರಲ್ಲಿನ ಹಲವಾರು ಬಗೆಯ ಸರ್ಪಗಳನ್ನು ಕಂಡು ಆನಂದಿಸಿದರು. ಅನಾಥಾಶ್ರಮದ ಮಕ್ಕಳಿಗೆ ಖುಷಿಯ ಅವಕಾಶವನ್ನು ಒದಗಿಸುವ ದೃಷ್ಟಿಯಿಂದ ಥಿಂಕಟ್ಯಾಂಕ್ ಈ ಪ್ರದರ್ಶನವನ್ನು ಏರ್ಪಡಿಸಿತು. ಮಕ್ಕಳ ಮುಖದಲ್ಲಿ ನಗೆ ಹಾಗೂ ಸಂತೋಷಗಳನ್ನು ಈ ಚಲನಚಿತ್ರ ತೋರಿಸುವಲ್ಲಿ ಸಫಲವಾಯಿತು.
ಚಲನಚಿತ್ರ ಪ್ರದರ್ಶನಕ್ಕಿಂತ ಪೂರ್ವದಲ್ಲಿ, ಜೈನ ಹರಿಟೇಜ್ ಶಾಲೆಯವರು ಥಿಂಕಟ್ಯಾಂಕಿನ ಉದ್ಘಾಟನೆಯನ್ನು ಮಾಡಿದರು. ಪ್ರೇಕ್ಷಕರ ಗ್ರಹದಲ್ಲಿ ಈ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಮಹೇಶ ಪೌಂಡೇಶನದ ಸಂಸ್ಥಾಪಕ ಮಹೇಶ ಜಾಧವ ಇವರು ಮುಖ್ಯ ಅತಿಥಿಯಾಗಿ ಉಪಸ್ಥಿತರಾಗಿದ್ದರು ಹಾಗೂ ದಿ. ಹಿಂದೂ ಪತ್ರಿಕೆಯ ಸಂಪಾದಕ ರೀಷಿಕೇಶ ಬಿ.ದೇಸಾಯಿ ಗೌರವ ಅತಿಥಿಯಾಗಿ ಆಗಮಿಸಿ ದೀಪ ಬೆಳಗಿಸುವದರ ಮೂಲಕ ಕಾರ್ಯಕ್ರಮದ ಚಾಲನೆ ನಡೆಯಿಸಿಕೊಟ್ಟರು.
ಪ್ರಾಂಶುಪಾಲರು ಥಿಂಕಟ್ಯಾಂಕಿನ ಗುರಿ ಹಾಗೂ ಧ್ಯೇಯೋದ್ದೇಶಗಳ ಕುರಿತು ಮಾತನಾಡಿದರು. ಮಹೇಶ ಜಾಧವ ಸಂತೋಷ ಹಂಚಿಕೊಳ್ಳುವದರ ಕುರಿತು ಒತ್ತಿ ಹೇಳಿದರು. ಗೌರವ ಅತಿಥಿ ರೀಷಿಕೇಶ ಬಿ ದೇಸಾಯಿ ವಿದ್ಯಾಥರ್ಿಗಳನ್ನು ಪ್ರೇರೆಪಿಸಿ, ಸಕರಾತ್ಮಕತೆಯನ್ನು ಬೆಳೆಯಿಸಿಕೊಂಡು ಬರಕಲೆಯನ್ನು ಕರಗತ ಮಾಡಿಕೊಳ್ಳಬೇಕೆಂದು ಹೇಳಿದರು.
ಜೆ.ಎಚ್.ಎಸ್.ದ ನಿದರ್ೇಶಕಿ ಶ್ರೀಮತಿ ಶೃದ್ಧಾ ಖಟವಟೆ ಅತಿಥಿಗಳನ್ನು ಸತ್ಕರಿಸುತ್ತಾ, ಈ ಕಾರ್ಯಕ್ರಮಕ್ಕೆ ಆಗಮಿಸಿದ ಥಿಂಕಟ್ಯಾಂಕದ ಬಗ್ಗೆ ವಿದ್ಯಾಥರ್ಿಗಳನ್ನು ಪ್ರೋತ್ಹಾಹಿಸಿದರು ಹಾಗೂ ಇವರು ಭಾಗಿಯಾದುದಕ್ಕೆ ಧನ್ಯವಾದ ಹೇಳಿದರು. ಥಿಂಕಟ್ಯಾಂಕಿನ ಸಲಹೆಗಾತರ್ಿ ನಂದಿನಿ, ಚಿಂತರುಗಳಲ್ಲಿ ಒಬ್ಬರಾಗಿ ಆಗಮಿಸಿ, ಇಂತಹ ಕಾರ್ಯಕ್ರಮಗಳು ಭವಿಷ್ಯತ್ತಿನಲ್ಲಿಯೂ ಸಮಾಜದ ಭಾಗ್ಯವಂಚಿತ ಸಮೂಹಗಳಲ್ಲಿ ಸಂತೋಷ ಹೆಚ್ಚಿಸುವ ದೃಷ್ಟಿಯಿಂದ ಹೆಚ್ಚೆಚ್ಚು ಇಂತಹ ಕಾರ್ಯಕ್ರಮಗಳನ್ನು ನಡೆಯಿಸುವಂತೆ ಕೇಳಿಕೊಂಡರು.