ಆಸ್ಟ್ರೇಲಿಯಾ ಹಾಗೂ ಫೀಜಿಯಲ್ಲಿ “ಸಿಂಬಾ” ಚಿತ್ರ ಮತ್ತೆ ತೆರೆಗೆ

ಮುಂಬೈ, ಜೂನ್ 29: ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಅಭಿನಯದ “ಸಿಂಬಾ” ಚಿತ್ರವನ್ನು ಆಸ್ಟ್ರೇಲಿಯಾ ಹಾಗೂ ಫೀಜಿಯಲ್ಲಿ ಮರು ಬಿಡುಗಡೆ ಮಾಡಲಿದೆ. ಕೊರೊನಾ ವೈರಸ್ ಮಹಾಮಾರಿಯಿಂದ ಹಲವು ದೇಶಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿತ್ತು. ಇದರ ಮಧ್ಯೆ ಕೆಲವು ದೇಶಗಳಲ್ಲಿ ಈಗ ಚಿತ್ರ ಮಂದಿರಗಳನ್ನು ಪುನಃ ತೆರೆಯಲು ಸಿದ್ಧತೆ ನಡೆದಿದೆ. ಇದೇ ವೇಳೆ ಹಳೆಯ ಚಿತ್ರಗಳು ತೆರೆಯ ಮೇಲೆ ಬರಲು ಸಜ್ಜಾಗಿವೆ.

ಈ ಸಾಲಿನಲ್ಲಿ ರಣವೀರ್ ಅವರ ಸಿಂಬಾ ಸಹ ಒಂದಾಗಿದೆ.ರಣವೀರ್ ಸಿಂಗ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. “ಆಸ್ಟ್ರೇಲಿಯಾ ಹಾಗೂ ಫೀಜಿಯಲ್ಲಿ ಸಿಂಬಾ ಮರು ಬಿಡುಗಡೆ ಆಗಲಿದೆ” ಎಂದು ಬರೆದು ಕೊಂಡಿದ್ದಾರೆ. ಇದೇ ವೇಳೆ ಚಿತ್ರದ ಪೋಸ್ಟರ್ ಹಾಕಿದ್ದಾರೆ. 2018ರಲ್ಲಿ ರೋಹಿತ್ ಶೆಟ್ಟಿ ನಿರ್ದೇಶನದ ಸಿಂಬಾ ಚಿತ್ರದಲ್ಲಿ ರಣವೀರ್ ಸಿಂಗ್ ಹಾಗೂ ಸಾರಾ ಅಲಿ ಖಾನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.