ಕುಡಿಯುವ ನೀರಿಗಾಗಿ ಪರದಾಟ: ಟ್ಯಾಂಕರ ಮೂಲಕ ನೀರು ಪೂರೈಕೆಗೆ ಮನವಿ

 ಲೋಕದರ್ಶನ ವರದಿ

ಇಂಡಿ 07: ತಾಲೂಕಿನ ಮಾವಿನಹಳ್ಳಿ ಗ್ರಾಮಕ್ಕೆ ಶುದ್ದ ಕುಡಿಯುವ ನೀರು ಪೂರೈಸಬೇಕೆಂದು ಗ್ರಾಮದ ಮಹಿಳೆಯರು ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಖಾಲಿ ಕೊಡ ಪ್ರದಶರ್ಿಸಿ ಪ್ರತಿಭಟನೆ ನಡೆಸಿ ಶಿರಸ್ತೆದಾರ ಪಿ.ಜಿ. ಗಲಗಲಿ ಇವರಿಗೆ ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಮಾವಿನಹಳ್ಳಿ ಗ್ರಾಮಕ್ಕೆ ಟ್ಯಾಂಕರ ಮೂಲಕ ನೀರು ಪೂರೈಕೆಯಲ್ಲಿ ಭಾರಿ ಗೋಲಮಾಲ ನಡೆದಿದೆ.

ಗ್ರಾಮದ ಪ್ರಮುಖ ರಾಜಕೀಯ ನಾಯಕರ ಟ್ಯಾಂಕರಗಳ ಮುಖಾಂತರ ನೀರು ಪೂರೈಸುತ್ತಿದ್ದು ಅವುಗಳ ಮೂಲಕ ಟ್ಯಾಂಕರ ನೀರು ಸರಬರಾಜು ಮಾಡುತ್ತಿರುವುದರಿಂದ ಎಲ್ಲರಿಗೂ ನೀರು ಸರಿಯಾಗಿ ವಿತರಣೆ ಆಗುತ್ತಿಲ್ಲ. ಅರ್ಧ ಟ್ಯಾಂಕರ ನೀರು ತುಂಬಿಕೊಂಡು ಪೂತರ್ಿ ಟ್ಯಾಂಕರ ಅಂತಾ ಹೇಳುತ್ತಾರೆ. ಅಲ್ಲದೇ ಕೆಲವು ಅಡವಿ ವಸ್ತಿಗಳಿಗೆ ನೀರು ಸಕಾಲಕ್ಕೆ ವಿತರಣೆ ಅಗುತ್ತಿಲ್ಲ.  ಇದರಲ್ಲಿ ಅಧಿಕಾರಿಗಳು ರಾಜಕಾರಣಿಗಳು ಶಾಮಿಲಾಗಿದ್ದು ಬಹುದಿನದಿಂದ ಕಂಡು ಬಂದಿದೆ. ಹೀಗೆ ಇದ್ದರೂ ಸ್ಥಳಿಯ ಅಧಿಕಾಗಳು ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ.

ಟ್ಯಾಂಕರ ನೀರು ಸರಬರಾಜು ಮಾಡುವವರಿಗೆ ಕಟ್ಟುನಿಟ್ಟಾಗಿ ಕ್ರಮ ಜರುಗಿಸಿ ಇದಕ್ಕೆ ಜಿಪಿಎಸ್ ಅಳವಡಿಸಬೇಕು. ಸರಿಯಾಗಿ ನೀರು ವಿತರಣೆ ಆಗದಿದ್ದರೆ ಮುಂದೆ ಉಗ್ರವಾದ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಲಾಳೇಸಾಬ ನದಾಫ, ರಾಜೆಸಾಬ ಅಹಿರಸಂಗ, ಜಗುಗೌಡ ಪಾಟೀಲ, ಹಲಗಾಬಾಯಿ ದಶವಂತ, ಯಮನವ್ವ ದಶವಂತ, ಬಂಗಾರೆವ್ವಾ  ದಶವಂತ, ಗುರುಬಾಯಿ, ಸುಶಿಲಾಬಾಯಿ ದಶವಂತ, ಸಜೀತಕುಮಾರ ಲಾಳಸಂಗಿ, ಯಲ್ಲವ ದಶವಂತ, ಅಂಬವ್ವ, ಸುನಂದಾ ದಶವಂತ ಸೇರಿದಂತೆ ಅನೇಕರು ಇದ್ದರು.