ಶುದ್ದ ಕುಡಿಯುವ ನೀರಿಗಾಗಿ ಪರದಾಟ

ಲೋಕದರ್ಶನ ವರದಿ

ಸಂಬರಗಿ 07:  ರಾಜ್ಯ ಸಕರ್ಾರ ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಕಟ್ಟಡದಿಂದ ಜನರಿಗೆ ಅನುಕೂಲವಾಗಿದೆ. ಆದರೆ ಅನಂತಪೂರ ಗ್ರಾ ಪಂ ವ್ಯಾಪ್ತಿಯಲ್ಲಿ ಶುದ್ದ ಕುಡಿಯುವ ನೀರನ್ನು ಉಚಿತವಾಗಿ ಪೂರೈಕೆ ಮಾಡುತ್ತಿದ್ದಾರೆ. ಶುದ್ದ ನೀರನ್ನು ಪಡೆದುಕೊಳ್ಳಲು ಸಾರ್ವಜನಿಕರು ಸಾಲಿನಲ್ಲಿ ಕೊಡಗಳನ್ನು ಇಟ್ಟು ನೀರು ಸಾಲಿನಲ್ಲಿ ತುಂಬಿಕೊಳ್ಳುತ್ತಿದ್ದಾರೆ. 

ಅನಂತಪೂರ ಗ್ರಾಮದ ಜನಸಂಖ್ಯೆ ಸುಮಾರಾಗಿ 20,000 ಇದ್ದು ಈ ಗ್ರಾಮಕ್ಕೆ ಶುದ್ದ ಕುಡಿಯುವ ನೀರಿನ ಘಟಕ ಕೇವಲ 2 ಮಾತ್ರ ಇದ್ದು ಅದರಲ್ಲಿ ಬಸ್ ನಿಲ್ದಾಣನಲ್ಲಿ 1 ಹಾಗೂ ಗ್ರಾಮದ ಮಧ್ಯದಲ್ಲಿ ಒಂದು ಇದ್ದು ಎರಡು ಶುದ್ದ ಕುಡಿಯುವ ನೀರಿನ ಘಟಕಗಳಿದ್ದರೂ ಗ್ರಾಮಕ್ಕೆ ನೀರು ಇನ್ನೂ ಕಡಿಮೆ ಬೀಳುತ್ತಿದೆ. ಗ್ರಾ ಪಂ ವತಿಯಿಂದ ಕುಡಿಯುವ ನೀರಿನ ಘಟಕದಲ್ಲಿ 1ರೂ ಗೆ 10ಲೀ ರಂತೆ ನೀರು ಸಿಗುತ್ತದೆ. ಆದರೆ ಬರಗಾಲವಿದ್ದು ಗ್ರಾಮಪಂಚಾಯತಿಯಿಂದ ಶುದ್ದ ನೀರನ್ನು ಉಚಿತವಾಗಿ ಪೂರೈಕೆ ಮಾಡುತ್ತಿದ್ದಾರೆ? ಶುದ್ದ ನೀರಿಗಾಗಿ ಜನಪರದಾಡುವ ಸ್ಥಿತಿ ಎದುರಾಗಿದೆ. ಗ್ರಾ ಪಂ ದಿಂದ ಈ ಮುಂಚಿತವಾಗಿ ಕಾಯಿನ ಬಾಕ್ಸ್ ಇದ್ದು ಅದರಲ್ಲಿ ಒಂದು ರೂ ನಾಣ್ಯ ಹಾಕಿ ಗ್ರಾಮಸ್ಥರು ನೀರು ಪಡೆದುಕೊಳ್ಳುತ್ತಿದ್ದರು. ಈಗ ಉಚಿತವಾಗಿ ನೀರು ಇದ್ದ ಕಾರಣ ದಿನನಿತ್ಯ ಜನರಿಗೆ ಸಾಲಿನಲ್ಲಿ ನಿಂತು ನೀರು ಪಡೆದುಕೊಳ್ಳುತ್ತಿದ್ದಾರೆ. ಜನರಿಗೆ ಶುದ್ದ ಕುಡಿಯುವ ನೀರು ಸಿಗುವದು ತುಂಬಾ ಕಷ್ಟವಾಗಿದೆ. ಅದರಲ್ಲಿ ವಿದ್ಯುತ್ ಸರಬರಾಜು ಸರಿಯಾಗಿಲ್ಲದ ಕಾರಣ ನೀರಿಗೆ ತೊಂದರೆಯಾಗುತ್ತಿದೆ. ಈ ಗ್ರಾಮಕ್ಕೆ ಇನ್ನೂ ಎರಡು ಶುದ್ದ ಕುಡಿಯುವ ನೀರಿನ ಘಟಕದ ಅವಶ್ಯಕತೆ ಇದೆ. ಶೀಘ್ರದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಿ ಇನ್ನೂ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ಅನುಕೂಲ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಕುರಿತು ಜಿ ಪಂ ಸದಸ್ಯರಾದ ಮಾದುರಿ ಬಾಬಾಸಾಹೇಬ(ದಾದಾ) ಶಿಂಧೆ ಇವರನ್ನು ಸಂಪಕರ್ಿಸಿದಾಗ ಈ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕದ ಅವಶ್ಯಕವಿದ್ದು ಈ ಕುರಿತು ತಾಲೂಕಾ ಹಾಗೂ ಜಿಲ್ಲಾ ಸಂಬಂಧಪಟ್ಟ ಇಲಾಖೆಗೆ ಗಮನಕ್ಕೆ ತಂದಿದ್ದೇವೆ. ಶೀಘ್ರದಲ್ಲಿ ಮಂಜೂರಾತಿ ಪಡೆದುಕೊಂಡು ಪ್ರಾರಂಭಿಸುತ್ತೇವೆಂದು ಅವರು ಹೇಳಿದರು.