ಅಥಣಿ 06: ನ್ಯಾಯವಾದಿ ಬಿ.ಆರ್,ರಾವ ಮೇಲೆ ದರ್ೌಜನ್ಯವೆಸಗಿದೆ ಪಿಎಸ್ಐ ಮೇಲೆ ಈಗಾಗಲೆ ಎಪ್ಐಆರ್ ದಾಖಲಿಸಲಾಗಿದೆ ಆದರೆ ಇಷ್ಟಕ್ಕೆ ನಮ್ಮ ಹೋರಾಟ ನಿಲ್ಲದು ಅವರನ್ನು ಕರ್ತವ್ಯದಿಂದ ವಜಾಗೊಳಿಸುವವರೆಗೂ ನಮ್ಮ ಹೋರಾಟ ಸಾಗುವುದು ಎಂದು ರಾಜ್ಯ ಘಟಕದ ವಕೀಲರ ಸಂಘದ ಸದಸ್ಯ ಕೆ.ಟಿ.ಕಿವಡಿ ಹೇಳಿದರು.
ದಿನವಿಡ ಪ್ರತಿಭಟನೆ ನಡೆಸಿದ ನಂತರ ನ್ಯಾಯಲಯದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ನಾವು ದಿನವಿಡಿ ನಮ್ಮ ಕುಟುಂಬವನ್ನ ಲೆಕ್ಕಿಸದೆ ನಮ್ಮ ಸುರಕ್ಷತೆಯನ್ನ ಲೆಕ್ಕಿಸದೆ ಸಮಾಜದ ಅತಿ ಬಡವ ಮನಷ್ಯನಿಗೂ ಸಹ ನ್ಯಾಯ ಕೊಡಿಸುವುದಕ್ಕೊಸ್ಕರ ದುಡಿಯುತ್ತೇವೆ ಆದರೆ ನಮ್ಮ ಮೇಲೆ ಈ ತರಜದ ದರ್ೌಜನ್ಯವಾದರೆ ನಾವು ಯಾರ ಬಳಿ ಹೋಗಬೇಕು ಅದಕ್ಕಾಗಿ ನ್ಯಾಯವಾದಿಗಳ ಸುರಕ್ಷತೆ ಕಾಯ್ದೆಯನ್ನ ಜಾರಿಗೊಳಿಸಲು ನಾವು ಮುಂದಿನ ದಿನದಲ್ಲಿ ಹೋರಾಡುತ್ತೇವೆ ಎಂದು ಹೇಳಿದರು .
ಈಗಾಗಲೆ ನ್ಯಾಯವಾದಿಗಳ ಮೇಳೆ ಎಸಗಿದ ದೌರ್ಜನ್ಯಕ್ಕೆ ನಮ್ಮ ರಾಜ್ಯ ವಕೀಲರ ಸಂಘಕ್ಕೆ ದೂರು ನೀಡಲಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪ ವಿಭಾಗದ ಎಲ್ಲಾ ನ್ಯಾಯಲಯದ ನ್ಯಾಯವಾದಿಗಳು ಈ ಪ್ರಕರಣಕ್ಕೆ ಸಂಭಂದಿಸಿದಂತೆ ನಮಗೆ ಸಹಕಾರ ನೀಡಿ ಕೊರ್ಟ ಕಲಾಪದಿಂದ ದೂರ ಉಳಿದಿದ್ದಾರೆ ಮುಂದೆ ರಾಜ್ಯದ ಎಲ್ಲಾ ನ್ಯಾಯವಾದಿಗಳ ಸಹಕಾರ ಸಿಗುತ್ತದೆ ನಿರೀಕ್ಷೆಯಿದೆ ಎಂದು ಅವರು ಹೇಳಿದರು
ಅಥಣಿ ವಕೀಲರ ಸಂಘದ ಅದ್ಯಕ್ಷ ಕೆ.ಎ.ವಣಜೋಳ ಮಾತನಾಡಿ ನಾವು ಪೋಲಿಸ ವರಿಷ್ಠಾದಿಕಾರಿಗಳಿಗೆ ಸೋಮವಾರದವರೆಗೂ ಕಾಲಾವಕಾಶ ನೀಡಿದ್ದೇವೆ ಅಷ್ಟರಲ್ಲಿ ಪಿಎಸ್ಐ ಯು.ಎಸ್.ಅವಟಿಯವರನ್ನ ಕರ್ತವ್ಯದಿಂದ ವಜಾಗೋಳಿಸದಿದ್ದರೆ ನಾವು ನಮ್ಮ ಹೊರಾಟವನ್ನ ಸೋಮವಾರದಿಂದ ಮತ್ತೆ ಶುರು ಮಾಡುತ್ತೇವೆ ಎಂದು ತಿಳಿಸಿದರು .
ನ್ಯಾಯವಾದಿಗಳಾದ ಬಿ.ಆರ್.ರಾವ, ಸುನೀಲ ವಾಘಮೋರೆ, ದಯಾನಂದ ವಾಘಮೋರೆ, ಮಿತೇಶ ಪಟ್ಟಣ, ಎಮ್.ಎಲ್.ಈಟಿ ನೂರಾರು ನ್ಯಾಯವಾದಿಗಳು ಭಾಗಿಯಾಗಿದ್ದರು .