ಶ್ರೀವಿದ್ಯಾನಿಕೇತನ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗೆ ಕ್ಷೇತ್ರ ಪ್ರವಾಸ
Field trip for a student of Sri Vidyaniketan Public School
ಗಂಗಾವತಿ 24: ತಾಲ್ಲೂಕಿನ ಶ್ರೀರಾಮನಗರದ ಶ್ರೀವಿದ್ಯಾನಿಕೇತನ ಪಬ್ಲಿಕ್ ಶಾಲೆಯು ಅನುಭವ ಜನ್ಯ ಕಲಿಕಾ ಪ್ರಕ್ರಿಯೆಯ ಭಾಗವಾಗಿ 6 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಕ್ಷೇತ್ರ ಪ್ರವಾಸವನ್ನು ಆಯೋಜಿಸಿತ್ತು.
6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳನ್ನು ಕಾರಟಗಿಯ ಕೇಸರಿ ಆಗ್ರೋ ಇಂಡಸ್ಟ್ರೀಸ್ (ರೈಸ್‌ಮಿಲ್) ಹಾಗೂ 9ನೇ ತರಗತಿ ವಿದ್ಯಾರ್ಥಿಗಳನ್ನು ವಿಜಯಲಕ್ಷ್ಮೀಆಗ್ರೋ ಇಂಡಸ್ಟ್ರೀಸ್ (ರೈಸ್‌ಮಿಲ್)ಗೆ ಕರೆದುಕೊಂಡು ಹೋಗಲಾಯಿತು.
ಭತ್ತವನ್ನು ಅಕ್ಕಿಯನ್ನಾಗಿ ರೂಪಿಸುವ ಸಂಪೂರ್ಣ ಪ್ರಕ್ರಿಯೆಯ ವಿವಿಧ ಹಂತಗಳು ಹಾಗೂ ವಿವಿಧ ಯಂತ್ರೋಪಕರಣಗಳ ಬಳಕೆ ಹಾಗೂ ಕಾರ್ಯ ನಿರ್ವಹಿಸುವ ವಿಧಾನ ಮತ್ತು ಸಿಬ್ಬಂದಿಗಳ ಕಾರ್ಯನಿರ್ವಹಣೆ, ಡಿಜಿಟಲ್ ತಂತ್ರಜ್ಞಾನ ಅಳವಡಿಕೆ ಮೊದಲಾದ ವಿಷಯಗಳ ಕುರಿತು ವಿದ್ಯಾರ್ಥಿಗಳು ತಿಳಿದುಕೊಂಡರು.
ಶಾಲೆಯ ಶೈಕ್ಷಣಿಕ ಮುಖ್ಯಸ್ಥರಾದ ಕೃಷ್ಣವೇಣಿಎಸ್, ಕ್ಯಾಂಪಸ್ ಮ್ಯಾನೇಜರ್‌ಶ್ರೀ ಜಿ ನಾಗೇಶ್ವರ್‌ರಾವ್ ಮತ್ತು ಮಂಜುನಾಥ ಅವರುಎಲ್ಲ ವಿದ್ಯಾರ್ಥಿಗಳಿಗೆ ರೈಸ್‌ಮಿಲ್‌ನ ಸಂಪೂರ್ಣ ಕಾರ್ಯಚಟುವಟಿಕೆಯ ಕುರಿತು ವಿವಿಧ ರೀತಿಯ ಮಾಹಿತಿ ಮತ್ತು ವಿವರಣೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕೇಸರಿ ಆಗ್ರೋ ಇಂಡಸ್ಟ್ರೀಸ್‌ನ ಮಾಲೀಕರಾದ ಮನ್ನೆ ಕೃಷ್ಣಮೂರ್ತಿ ಮತ್ತು ಕುಟುಂಬ ವರ್ಗ ಹಾಗೂ ಸಿಬ್ಬಂದಿಗಳು, ಅದೇ ರೀತಿ ವಿಜಯಲಕ್ಷ್ಮೀ ಆಗ್ರೋ ಇಂಡಸ್ಟ್ರೀಸ್‌ನ ಮಾಲೀಕರಾದ ಶ್ರೀ ಸಿ. ಹೆಚ್. ನಾಗೇಶ್ವರ್‌ರಾವ್ ಮತ್ತು ಕುಟುಂಬ ವರ್ಗ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಸಮರ್ಕ ಮಾಹಿತಿ ಹಾಗೂ ವಿವರಣೆಯನ್ನು ನೀಡಿದರು.ಶಾಲಾ ಶಿಕ್ಷಕ ಮತ್ತು ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 