ಕಲಿಕಾ ಹಬ್ಬವು ಮಕ್ಕಳಲ್ಲಿ ಹೊಸ ಉತ್ಸಾಹ ಮೂಡಿಸುತ್ತದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡುಗಡ್ಡಿ ಹೇಳಿದರು
ತಾಂಬಾ 19 : ಕಲಿಕೆಯು ನಿರಂತರತೆಯ ಗುಣ ಹೊಂದಿದು ಇದು ಕೌಶಲ್ಯ ಜ್ಞಾನ ಒದಗಿಸಿ ಮಕ್ಕಳ ಉತ್ತಮ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಕಲಿಕಾ ಹಬ್ಬವು ಮಕ್ಕಳಲ್ಲಿ ಹೊಸ ಉತ್ಸಾಹ ಮೂಡಿಸುತ್ತದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡುಗಡ್ಡಿ ಹೇಳಿದರು. ಹಿರೇಮಸಳಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇಂಡಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಹಿರೇರೂಗಿ ಉರ್ದು ಕ್ಲಸ್ಟರ್ ಮಟ್ಟದ ಎಫ್ ಎಲ್ ಎನ್ ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿದ ಕಲಿಕಾ ಹಬ್ಬದಿಂದ ಮಕ್ಕಳಲ್ಲಿ ಶೈಕ್ಷಣಿಕ ಬಲವರ್ಧನೆ ಹಾಗೂ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ ಹೆಚ್ಚಿಸುತ್ತದೆ. ಮಕ್ಕಳ ಪ್ರತಿಭೆಯನ್ನು ಗುರ್ತಿಸಲು ಈ ಕಲಿಕಾ ಹಬ್ಬ ಒಂದು ಸೂಕ್ತ ವೇದಿಕೆಯಾಗಿದೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕಾಧ್ಯಕ್ಷ ವೈ ಟಿ ಪಾಟೀಲ ಮಾತನಾಡಿ ಮಕ್ಕಳು ಶಿಕ್ಷಕರು ಪಾಲಕರು ಈ ಕಲಿಕಾ ಹಬ್ಬದಲ್ಲಿ ಭಾಗವಹಿಸಬೇಕು. ಮಕ್ಕಳಿಗೆ ಪ್ರಶ್ನೆ ಮಾಡುವ ಹಾಗೂ ಶೈಕ್ಷಣಿಕ ಮನೋಭಾವ ಬೆಳೆಸುವ ಜತೆಗೆ ಮಕ್ಕಳಲ್ಲಿ ಭಾವೈಕ್ಯತೆ ಮೂಡಿಸುವ ಉದ್ದೇಶದಿಂದ ಕಲಿಕಾ ಹಬ್ಬ ಸಹಕಾರಿಯಾಗಿದೆ ಎಂದು ಹೇಳಿದರು. ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ಕಲಿಕಾ ಹಬ್ಬದಲ್ಲಿ ಗಟ್ಟಿ ಓದು ಕಥೆ ಹೇಳುವುದು ಕೈಬರಹ ಸಂತೋಷದಾಯಕ ಗಣಿತದಂತಹ ಸೃಜನಾತ್ಮಕ ಚಟುವಟಿಕೆಯನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಅನುಭವ ಯುಕ್ತ ಕಲಿಕೆಗೆ ಒತ್ತು ನೀಡಲಾಗಿದೆ ಎಂದು ಹೇಳಿದರು. ವಿಭಾಗೀಯ ಉಪಾಧ್ಯಕ್ಷ ಎಸ್ ವ್ಹಿ ಹರಳಯ್ಯ ಜಿಓಸಿಸಿ ಬ್ಯಾಂಕ್ ನಿರ್ದೇಶಕ ಅಲ್ಲಾಭಕ್ಷ ವಾಲೀಕಾರ ಜಿಪಿಟಿ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಶಂಕರ ಕೋಳೆಕರ ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕ ಸಂಘದ ಖಜಾಂಚಿ ಆನಂದ ಕೆಂಭಾವಿ ಶಿಕ್ಷಣ ಸಂಯೋಜಕ ನವಾಜ್ ಖಾನ್ ಪಠಾಣ, ಎಸ್ ಡಿ ಎಂ ಸಿ ಅಧ್ಯಕ್ಷ ಬಶೀರ್ ಮುಲ್ಲಾ, ಅಂಜುಮನ್ ಕಮೀಟಿ ಅಧ್ಯಕ್ಷ ಆರಿಫ್ ಅತ್ತಾರ ಹಿರೇರೂಗಿ ಉರ್ದು ಕ್ಲಸ್ಟರ್ ಸಿ ಆರ್ ಪಿ ಬಾದಶಾ ಚಪ್ಪರಬಂದ ಇಂಡಿ ಸಿ ಆರ್ ಪಿ ಪರ್ವೇಜ್ ಪಟೇಲ್ ಇಂಗಳಗಿ ಸಿ ಆರ್ ಪಿ ಭಾಷಾ ಕುಮಸಗಿ ಸಾತಲಗಾಂವ ಸಿ ಆರ್ ಪಿ ಆಯ್ ಎ ಸಿಕ್ಕಲಗಾರ ಮುಖ್ಯ ಶಿಕ್ಷಕ ಎ ಎಂ ಹೊಸೂರ ಸೇರಿದಂತೆ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಶಿಕ್ಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು. ಕಲಿಕಾ ಹಬ್ಬದ ಚಟುವಟಿಕೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು