ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜ್ವರ ಚಿಕಿತ್ಸಾಲಯ ಆರಂಭ: ಜಿಲ್ಲಾಧಿಕಾರಿ
ಮಂಗಳೂರು, ಏಪ್ರಿಲ್ 9 ,ಜ್ಷರ, ಕೆಮ್ಮು, ಗಂಟಲು ಕೆರೆತ ಅಥವಾ ಉಸಿರಾಟದ ತೊಂದರೆಯಂತಹ ಕೊರೋನಾ ವೈರಸ್‌ರೋಗ ಲಕ್ಷಣಗಳನ್ನು ಹೊಂದಿರುವ ಯಾವುದೇ ಶಂಕಿತ ವ್ಯಕ್ತಿ ಮೊದಲು ತಪಾಸಣೆಆಗಿ ಜಿಲ್ಲೆಯಾದ್ಯಂತ ಜ್ವರ ಚಿಕಿತ್ಸಾಲಯಗಳನ್ನು ಆರಂಭಿಸಲಾಗಿದೆ.ಸಾರ್ವಜನಿಕರು ಈ ಕೇಂದ್ರಗಳಿಗೆ ಭೇಟಿ ನೀಡಿ, ತಮ್ಮ ವೈದ್ಯಕೀಯ ತಪಾಸಣೆ ನಡೆಸಬಹುದಾಗಿದೆ. ಎ.ಜೆ ಮೆಡಿಕಲ್‌ಕಾಲೇಜು, ಕುಂಟಿಕಾನ, ಫಾದರ್ ಮುಲ್ಲರ್‌ಆಸ್ಪತ್ರೆ, ಕಂಕನಾಡಿ, ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ, ಮಂಗಳೂರು, ಯೆನೆಪೊಯ ಆಸ್ಪತ್ರೆ, ದೇರಳಕಟ್ಟೆ, ಶ್ರೀನಿವಾಸ್ ಮೆಡಿಕಲ್‌ಕಾಲೇಜು, ಮುಕ್ಕ ಸುರತ್ಕಲ್, ಕೆ.ಎಸ್. ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆ, ಕೆ.ವಿ.ಜಿಆಸ್ಪತ್ರೆ, ಸುಳ್ಯ,ಕಣಚೂರು ಆಸ್ಪತ್ರೆ, ಮುಖ್ಯರಸ್ತೆ, ಮುಡಿಪು, ವೆನ್ಲಾಕ್‌ಆಸ್ಪತ್ರೆ, ಹಂಪನಕಟ್ಟೆ ಮಂಗಳೂರು,ತಾಲೂಕು ಸರ್ಕಾರಿಆಸ್ಪತ್ರೆ, ಬೆಳ್ತಂಗಡಿ, ಸರ್ಕಾರಿ ಆಸ್ಪತ್ರೆ, ಪುತ್ತೂರು, ತಾಲೂಕು ಆಸ್ಪತ್ರೆ ಬಂಟ್ವಾಳ, ಸಮುದಾಯ ಆಸ್ಪತ್ರೆ, ಸುಳ್ಯ ಮುಂತಾದ ಆಸ್ಪತ್ರೆಗಳಿಗೆ ಸಾರ್ವಜನಿಕರು ಭೇಟಿ ನೀಡಬಹುದು.ಕ್ವಾರೇಂಟೈನ್ ಮೇಲ್ವಿಚಾರಣೆ ಕೇಂದ್ರಗಳು: ಯಾವುದೇ ರೋಗ ಲಕ್ಷಣ ಇಲ್ಲದಿದ್ದರೂ, ಕೋವಿಡ್ 19 ಸಂಪರ್ಕ ಸಾಧ್ಯತೆ ಇರುವವರನ್ನು ನಿಗಾವಣೆಯಲ್ಲಿಡಲು ಕ್ವಾರೆಂಟೈನ್ ಮೇಲ್ವಿಚಾರಣಾ ಕೇಂದ್ರಗಳನ್ನು ತೆರೆಯಲಾಗಿದೆ. ಇ.ಎಸ್.ಐ ಆಸ್ಪತ್ರೆ, ಮಂಗಳೂರು, ಇಂಡಿಯಾನ ಆಸ್ಪತ್ರೆ, ಪಂಪುವೆಲ್, ಎನ್.ಐ.ಟಿ.ಕೆ ಹಾಸ್ಟೆಲ್ ಸುರತ್ಕಲ್, ಯೆನೆಪೊಯ ಹಾಸ್ಟೆಲ್ ದೇರಳಕಟ್ಟೆ ಪ್ರತ್ಯೇಕ ಮೇಲ್ವಿಚಾರಣೆ ಕೇಂದ್ರಗಳು : ಶಂಕಿತ ಕೊರೋನಾ ರೋಗಿಗಳನ್ನು ಪ್ರತ್ಯೇಕವಾಗಿಡಲು ಜಿಲ್ಲೆಯ 13 ಆಸ್ಪತ್ರೆಗಳಲ್ಲಿ ಪ್ರತ್ಯೇಕ ನಿಗಾವಣೆ ಕೇಂದ್ರಗಳನ್ನುತೆರೆಯಲಾಗಿದೆ. ಎ.ಜೆ ಮೆಡಿಕಲ್‌ಕಾಲೇಜು, ಆಸ್ಪತ್ರೆ, ಮಂಗಳೂರು, ಫಾದರ್ ಮುಲ್ಲರ್‌ಆಸ್ಪತ್ರೆ, ಕಂಕನಾಡಿ,ಕೆ.ಎಂ.ಸಿ. ಆಸ್ಪತ್ರೆಅತ್ತಾವರ, ಯೆನೆಪೋಯಆಸ್ಪತ್ರೆ, ದೇರಳಕಟ್ಟೆ, ಶ್ರೀನಿವಾಸ್ ಮೆಡಿಕಲ್ ಕಾಲೇಜು ಆಸ್ಪತ್ರೆ, ಮುಕ್ಕ, ಸುರತ್ಕಲ್, ಕೆ.ಎಸ್. ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆ, ಕೆ.ವಿ.ಜಿಆಸ್ಪತ್ರೆ, ಸುಳ್ಯ, ಕಣಚೂರು ಆಸ್ಪತ್ರೆ, ವೆನ್ಲಾಕ್ ಆಸ್ಪತ್ರೆ, ,ತಾಲೂಕು ಸರ್ಕಾರಿ ಆಸ್ಪತ್ರೆ, ಬೆಳ್ತಂಗಡಿ, ಸರ್ಕಾರಿ ಆಸ್ಪತ್ರೆ, ಪುತ್ತೂರು, ತಾಲೂಕುಆಸ್ಪತ್ರೆ ಬಂಟ್ವಾಳ, ಸಮುದಾಯ ಆಸ್ಪತ್ರೆ, ಆಸ್ಪತ್ರೆ ಸುಳ್ಯ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯು ಕೋವಿಡ್ ದೃಢಪಟ್ಟು, ತುರ್ತುಚಿಕಿತ್ಸೆ ಹಾಗೂ ಗಂಭೀರಾವಸ್ಥೆಯಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡಲಿದೆ. ರಾಜ್ಯಕೋವಿಡ್ 19 ತುರ್ತು ಕ್ರಿಯಾಯೋಜನೆಯಂತೆ ಈ ಎಲ್ಲಾ ಸೌಲಭ್ಯಗಳ ಬಗ್ಗೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅಧಿಸೂಚನೆ ಹೊರಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು 