ಉತ್ಸವ' ಕಲೆ, ಸಂಸ್ಕೃತಿ ಬೀಡು: ಜಿಲ್ಲಾಧಿಕಾರಿ

ಲೋಕದರ್ಶನ ವರದಿ

ಶಿಗ್ಗಾವಿ೧೫: ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಎಂಬ ಮಾತಿನ ಅರ್ಥವನ್ನು ಉತ್ಸವ ರಾಕ್ ಗಾರ್ಡನ್ ಮನವರಿಕೆ ಮಾಡಿ ಕೊಟ್ಟಿತಲ್ಲದೆ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು. ಇದು ಕಲೆ, ಸಂಸ್ಕೃತಿ ಬೀಡು ಎಂದು ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ವಾಜಪೇಯಿ ಹೇಳಿದರು.

ಭಾನುವಾರ ತಮ್ಮ ಕುಟುಂಬದೊಂದಿಗೆ ಗಾರ್ಡನ್ಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಲ್ಲಿನ ಪ್ರತಿಯೊಂದು ಶಿಲ್ಪಗಳು ವಿಶಿಷ್ಟ ಸಂದೇಶ ನೀಡುತ್ತವೆ. ಗ್ರಾಮೀಣ ಸಾಮ್ರಾಜ್ಯದ ಸೊಬಗು ಎಲ್ಲರ ಮನಸ್ಸಿಗೆ ಮುದ ನೀಡುತ್ತದೆ ಎಂದು ನುಡಿದರು.

ಇಂದಿನ ಪೀಳಿಗೆಗೆ ಹಾಗೂ ನಮ್ಮ ಮಕ್ಕಳಿಗೆ ಗ್ರಾಮೀಣ ಬದುಕಿನ ಪರಿಚಯ ಮಾಡಿಸಬೇಕೆಂದರೆೆ ರಾಕ್ ಗಾರ್ಡನ್ ಸೂಕ್ತವಾದ ಸ್ಥಳ. ನಮ್ಮ ಕಲೆ, ಸಂಸ್ಕೃತಿ ಎಂದಿಗೂ ಮಾಸದು ಎಂಬುದಕ್ಕೆ ರಾಕ್ ಗಾರ್ಡನ್ ಸಾಕ್ಷಿ ಎಂದು ಕೃಷ್ಣ ಬಾಜಪೇಯಿ ತಿಳಿಸಿದರು.

ಜಿಲ್ಲಾಧಿಕಾರಿಯವರ ಪತ್ನಿ ಅರಣ್ಯ ಇಲಾಖೆಯ ಬೆಂಗಳೂರು ನಗರ ವಿಭಾಗದ ಐಎಫ್ಎಸ್ ಅಧಿಕಾರಿ ದೀಪಿಕಾ ಬಾಜಪೇಯಿ ಮಾತನಾಡಿ, ರಾಕ್ ಗಾರ್ಡನ್ನ ಅನುಭವ ಎಂದಿಗೂ ಮರೆಯಲಾಗದಂತದ್ದು. ಇಲ್ಲಿಗೆ ಬಂದವರು ಮತ್ತೊಮ್ಮೆ ಭೇಟಿ ನೀಡಬೇಕೆಂಬ ಹಂಬಲದೊಂದಿಗೆ ತಮ್ಮ ಮನೆಗಳಿಗೆ ಹಿಂತಿರುಗುತ್ತಾರೆ ಎಂದು ಹೇಳಿದರು.

ಮಾಡನರ್್ ಆಟರ್್ ಗ್ಯಾಲರಿಯಂತೂ 'ನಾನು ಸಹ ಕಲಾವಿದ' ಆಗಬೇಕಿತ್ತು ಎಂಬಷ್ಟರ ಮಟ್ಟಿಗೆ ಪ್ರವಾಸಿಗರನ್ನು ಆಕಷರ್ಿಸುತ್ತದೆ. ನಾನು ಮತ್ತೊಮ್ಮೆ ಭೇಟಿ ನೀಡುವದಂತೂ ನಿಶ್ಚಿತ ಎಂದು ಹೇಳಿದರು.

ಗಾರ್ಡನ್ನ ಮೆನೇಜರ್ ಅಶೋಕ ಬಾಳಿ, ಗಂಗಾಧರ ಕೆಂಚಣ್ಣವರ, ಆನಂದಗೌಡ ಪಾಟೀಲ, ಪ್ರಭು ಪಟ್ಟಣಶೆಟ್ಟಿ, ನಜೀರ ಮತ್ತಿತರು ಜಿಲ್ಲಾಧಿಕಾರಿಗಳೊಂದಿಗಿದ್ದರು. ಕೃಷ್ಣ ಬಾಜಪೇಯಿ ಅವರನ್ನು ಉತ್ಸವ ರಾಕ್ ಗಾರ್ಡನ್ ಹಾಗೂ ಉತ್ಸವ ರಾಕ್ ಗಾರ್ಡನ್ ಸಮಿತಿಯಿಂದ ಸನ್ಮಾನಿಸಲಾಯಿತು.