ಪರ್ತ್, ಡಿ 16 ನ್ಯೂಜಿಲೆಂಡ್
ತಂಡದ ಬಲಗೈ ವೇಗಿ ಲೂಕಿ ಫರ್ಗೂಸನ್ ಅವರು ಗಾಯದಿಂದಾಗಿ ಪ್ರಸ್ತುತ ನಡೆಯುತ್ತಿರುವ ಮೂರು ಪಂದ್ಯಗಳ
ಟೆಸ್ಟ್ ಸರಣಿಯಿಂದ ಹೊರ ನಡೆದಿದ್ದಾರೆ. ಕಳೆದ ಗುರುವಾರ ಪರ್ತ್ ನಲ್ಲಿ ಲೂಕಿ ಫರ್ಗೂಸನ್ ಅವರು ಅಂತಾರಾಷ್ಟ್ರೀಯ
ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಮೊದಲನೇ ದಿನ ಕೇವಲ 11 ಓವರ್ ಬೌಲಿಂಗ್ ಮಾಡಿದ್ದರು.
ಈ ವೇಳೆ ಅವರು ಗಾಯಕ್ಕೆ ಒಳಗಾದರು. ತಕ್ಷಣ ಅಂಗಳ ತೊರೆದ ಅವರು ಅಂಗಳಕ್ಕ ಮರಳಲೇ ಇಲ್ಲ. ಅಂತಿಮವಾಗಿ
ಇನ್ನೂ ಒಂದು ದಿನ ಬಾಕಿ ಇರುವಾಗಲೇ ಆಸ್ಟ್ರೇಲಿಯಾ 296 ರನ್ ಗಳಿಂದ ಗೆಲುವಿನ ನಗೆ ಬೀರಿತು.ಚೊಚ್ಚಲ
ಪಂದ್ಯದಲ್ಲಿ ಲೂಕಿ ಫರ್ಗೂಸನ್ 11 ಓವರ್ ಗಳಿಂದ 47 ರನ್ ನೀಡಿದ್ದರು. ಆದರೆ, ಒಂದೂ ವಿಕೆಟ್ ಪಡೆದಿರಲಿಲ್ಲ."ಈಗಾಗಲೇ
ಫರ್ಗೂಸನ್ ತವರಿಗೆ ಮರಳಿದ್ದಾರೆ. ಅವರು ಚಿಕಿತ್ಸೆ ಪಡೆದ ಬಳಿಕ ನಾಲ್ಕು ಅಥವಾ ಐದು ವಾರಗಳ ವಿಶ್ರಾಂತಿ
ಅಗತ್ಯವಿದೆ, " ನ್ಯೂಜಿಲೆಂಡ್ ಕ್ರಿಕೆಟ್ ಸೋಮವಾರ ಸ್ಪಷ್ಟಪಡಿಸಿದೆ.ಟೆಸ್ಟ್ ಸರಣಿಯ ಇನ್ನುಳಿದ
ಎರಡು ಪಂದ್ಯಗಳಿಗೆ ಬದಲಿ ಆಟಗಾರನನ್ನು ಶೀಘ್ರವೇ ಕಳುಹಿಸಲಾಗುವುದು ಎಂದು ತಿಳಿಸಿದೆ.ಆಸೀಸ್ ಹಾಗೂ
ಕಿವೀಸ್ ನಡುವಿನ ಎರಡನೇ ಪಂದ್ಯ ಡಿ. 26 ರಿಂದ ಮೆಲ್ಬೋರ್ನ್ ಕ್ರಿಕೆಟ್ ಅಂಗಳದಲ್ಲಿ ಆರಂಭವಾಗಲಿದೆ.
ಸ್ನಾಯು ಸೆಳೆತಕ್ಕೆ ಒಳಗಾಗಿರುವ ಜೋಶ್ ಹೇಜಲ್‌ವುಡ್ ಅವರನ್ನು ಆಸ್ಟ್ರೇಲಿಯಾ ಕಳೆದುಕೊಂಡಿದೆ.