ದುಬೈ, ಅ 24: ದಕ್ಷಿಣ ಆಫ್ರಿಕಾ ಪುರುಷರ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಮೊಟ್ಟ ಮೊದಲ ಬಾರಿ ಮಹಿಳಾ ತೀಪುಗಾರರಾಗಿ ಲಾರೆನ್ ಅಗೆನ್ಬಾಗ್ ಅವರು ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಜೋಹಾನ್ಸ್ ಬಗ್ರ್ನಲ್ಲಿ ಇಂದಿನಿಂದ ಶನಿವಾರದವರೆಗೂ ನಡೆಯುವ ಮೂರು ದಿನಗಳ ಸ್ಪರ್ಧೆಯ ಸೆಂಟ್ರಲ್ ಗಾಟೆಂಗ್ ಮತ್ತು ಬೊಲೆಂಡ್ ನಡುವಿನ ಪಂದ್ಯದಲ್ಲಿ 23ರ ಪ್ರಾಯದ ಯುವತಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೇಪ್ ಟೌನ್ನಲ್ಲಿ ಇದೇ ವರ್ಷದ ಆರಂಭದಲ್ಲಿ ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಪಂದ್ಯದಲ್ಲಿ ಮೊದಲ ಮಹಿಳಾ ಅಂಪೈರ್ ಆಗಿ ಲಾರೆನ್ ಕಾರ್ಯನಿರ್ವಹಿಸಿದ್ದರು.
ಕಳೆದ ತಿಂಗಳು ಲಾರೆನ್ ಅವರು ಟಿ-20 ವಿಶ್ವಕಪ್ ಅರ್ಹತಾ ಸುತ್ತಿನ ಫೈನಲ್ ಹಣಾಹಣಿಯಲ್ಲಿ ಐಸಿಸಿ ಮಹಿಳಾ ಪ್ಯಾನೆಲ್ ನಲ್ಲಿ ಕಾಣಿಸಿಕೊಂಡಿದ್ದರು.
ಪ್ರಸ್ತುತ ಲಾರೆನ್ ಅವರು ದಕ್ಷಿಣ ಆಫ್ರಿಕಾ ದಲ್ಲಿ ಅತ್ಯುತ್ತಮ ದರ್ಜೆಯ ಮಹಿಳಾ ಅಂಪೈರ್ ಆಗಿದ್ದಾರೆ. ಕ್ರಿಕೆಟ್ ಬಗ್ಗೆ ಅವರಲ್ಲಿನ ಆಸಕ್ತಿ ಹಾಗೂ ಕಾಳಜಿಯಿಂದಾಗ ಲಾರೆನ್ ವಿಶ್ವ ಮಟ್ಟದಲ್ಲಿ ಅಂಫೈರ್ ಆಗಿ ಗುರುತಿಸಿಕೊಂಡಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಹಂಗಾಮಿ ಅಧ್ಯಕ್ಷ ಕೊರಿ ವಾನ್ ಝೀಲ್ ಮಂಗಳವಾರ ತಿಳಿಸಿದ್ದಾರೆ.
ಲಾರೆನ್ ಅವರು ಇತರ ಮಹಿಳೆಯರಿಗೂ ಮಾದರಿಯಾಗಲಿದ್ದಾರೆಂಬುದು ನನಗೆ ಖಚಿತತೆ ಇದೆ ಎಂದು ಹೇಳಿದರು.