ಬಾಗಲಕೋಟೆ25: ಮರ್ಯಾದಿಗಾಗಿ, ಆರೋಗ್ಯಕ್ಕಾಗಿ ಹಾಗೂ ರೋಗ ರುಜಿನಗಳಿಂದ ಮುಕ್ತರಾಗಲು ಸ್ತ್ರೀಯರು ಅವಶ್ಯವಾಗಿ ಶೌಚಾಲಯ ನಿಮರ್ಿಸಿಕೊಳ್ಳಲು ಒತ್ತಾಯಿಸಬೇಕೆಂದು ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಹೇಳಿದರು.
ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಂತು ಹುಳು, ದಡಾರ, ಬೇದಿ, ಮಲೇರಿಯಾದಂತಹ ರೋಗಗಳಿಂದ ಮುಕ್ತವಾಗಬೇಕಾದರೆ ಸ್ವಚ್ಛತೆಗಾಗಿ ಶೌಚಾಲಯ ನಿಮರ್ಿಸಿಕೊಂಡಾಗ ಮಾತ್ರ ಸಾಧ್ಯವಾಗಲಿದೆ ಎಂದರು.
ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವ ಜಂತು ಹುಳು ನಿಮರ್ೂಲನೆಗಾಗಿ ಶಾಲಾ-ಕಾಲೇಜುಗಳಲ್ಲಿ ಉಚಿತವಾಗಿ ನೀಡು ಮಾತ್ರೆಗಳನ್ನು ನುಂಗಿಸಲಾಗುತ್ತಿದ್ದು, ಇದುವರೆಗೆ ಜಿಲ್ಲೆಯಲ್ಲಿ 7.05 ಲಕ್ಷ ಮಕ್ಕಳಿಗೆ ಮಾತ್ರೆ ವಿತರಿಸಲಾಗಿದ್ದು, ಈ ಮಾತ್ರೆ ಪಡೆಯದೇ ಇರುವ ಮಕ್ಕಳಿಗೆ ನಿವಾರಣಾ ದಿನವಾದ ಸಪ್ಟಂಬರ 30 ರಂದು ತಪ್ಪದೇ ಮಾತ್ರೆ ವಿತರಿಸುವ ಕೆಲಸವಾಗುವುದರ ಜೊತೆಗೆ ಪ್ರತಿಯೊಬ್ಬ ಮಕ್ಕಳು ಜಂತು ಹುಳು ನಿವಾರಣಾ ಮಾತ್ರೆಯನ್ನು ಬಳಸಿಕೊಂಡು ಆರೋಗ್ಯವಂತರನ್ನಾಗಿ ಮಾಡಲು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅವರು ಪ್ರತಿವರ್ಷ ಜಂತು ಹುಳು ನಿಮರ್ೂಲಣೆಗಾಗಿ ವರ್ಷದಲ್ಲಿ 2 ಬಾರಿ ಉಚಿತ ಮಾತ್ರೆಗಳನ್ನು ವಿತರಿಸಲಾಗುತ್ತಿದ್ದು, ಈ ಬಾರಿ ಜಿಲ್ಲೆ ಪ್ರವಾಹಕ್ಕೊಳಗಾಗಿದ್ದರಿಂದ ಮಾತ್ರೆ ವಿತರಿಸುವಲ್ಲಿ ವಿಳಂಬವಾಗಿದೆ. ಎಲ್ಲ ರೋಗಗಳಿಗೆ ಮೂಲ ಕಾರಣವಾಗಿರುವುದು ಬಯಲು ಶೌಚದಿಂದಾಗಿ ಅನೇಕ ಅವಗಡಗಳು ಸಂಭವಿಸುತ್ತವೆ. ಉತ್ತರ ಕನರ್ಾಟಕದ ಭಾಗದಲ್ಲಿ ಬಾಲ್ಯವಿವಾಹ, ಅನಕ್ಷರತೆ, ಬಡತನ, ಮೂಡನಂಬಿಕೆಗಳಿಂದ ಮುಕ್ತವಾಗಬೇಕಾದರೆ ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡುವದರ ಜೊತೆಗೆ ಶೌಚಾಲಯಕ್ಕೂ ಆದ್ಯತೆ ನೀಡಬೇಕು ಎಂದರು.
ದೇವಸ್ಥಾನಕ್ಕೆ ಕೊಟ್ಟ ಮಹತ್ವವನ್ನು ಆರೋಗ್ಯ ನೀಡುವ ದೇವಸ್ತಾನವಾಗಿರುವ ಶೌಚಾಲಯಕ್ಕೂ ಕೊಡಬೇಕು. ಶೌಚಾಲಯ ನಿಮರ್ಿಸಿಕೊಳ್ಳಲು ಜಾಗೃತಿ ಕಾರ್ಯ ಮಾಡಲಾಗುತ್ತಿದ್ದು, ಜನರ ಪಾಲ್ಗೊಳ್ಳುವಿಕೆ ಇಲ್ಲದೇ ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಿಲ್ಲ. ಮೊದಲು ವರ್ಷಕ್ಕೆ ಒಂದು ಲಸಿಕೆ ಮಾತ್ರ ಬರುತ್ತಿದ್ದು, ಈಗ ನಾನಾ ತರಹದ ಲಸಿಕೆಗಳು ಬರುತ್ತಿವೆ. ಇದಕ್ಕೆ ಕಾರಣ ಪರಿಸರ ಮಾಲಿನ್ಯವಾಗಿದ್ದು, ನಿಸರ್ಗದಿಂದ ಸಿಗಬಹುದಾದ ಸಂಪನ್ಮೂಲಗಳನ್ನು ಮಿತವಾಗಿ ಬಳಸುವ ಮೂಲಕ ಮುಂದಿನ ಪೀಳಿಗೆಗೆ ಮೀಸಲಿಡುವ ಕೆಲಸವಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಹಾಗೂ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಮಕ್ಕಳೊಂದಿಗೆ ಜಂತುಹುಳು ನಿವಾರಣಾ ಮಾತ್ರೆಗಳನ್ನು ಸೇವಿಸಿದರು. ಅಲ್ಲದೇ ಶೌಚಾಲಯ ನಿಮರ್ಾಣಕ್ಕೆ ಮಕ್ಕಳಲ್ಲಿ ಹಾಗೂ ಜನರಲ್ಲಿ ಇದ್ದ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿಗಳು ಮನಸ್ಸಿದ್ದಲ್ಲಿ ಮಾರ್ಗಉಂಟು ಎಂಬ ಮಾತಿನ ಮೂಲಕ ಮಕ್ಕಳಲ್ಲಿದ್ದ ಗೊಂದಲಗಳನ್ನು ನಿವಾರಿಸಿದರು.
ಕಾರ್ಯಕ್ರಮದಲ್ಲಿ ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಗರಿಮಾ ಪನ್ವಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಎನ್.ಬಿ.ಗೊರವರ, ಆರೋಗ್ಯ ಇಲಾಖೆಯ ಜಿಲ್ಲಾ ಕಾರ್ಯಕ್ರಮಾಧಿಕಾರಿ ಬಿ.ಸಿ.ಹುಬ್ಬಳ್ಳಿ, ಜಿಲ್ಲಾ ಸಮಿಕ್ಷಣಾಧಿಕಾರಿ ಡಾ.ವಿಜಯ ಕಂಠಿ, ಮಹಿಳಾ ಕಾಲೇಜಿನ ಉಪಪ್ರಾಚಾರ್ಯ ಮಲ್ಲಿಕಾಜರ್ುನ ಸೇರಿದಂತೆ ಇತರರು ಉಪಸ್ಥಿತರಿದ್ದರು.