ಶಿಗ್ಗಾವಿ 04 :ಒಬ್ಬ ಶ್ರೇಷ್ಠ ಕಲಾವಿದನಾಗಲು ಜಗತ್ತು ನಮ್ಮನ್ನು ಗುರುತಿಸಬೇಕಾದ್ರೆ ಅದರ ಹಿಂದೆ ಸಾಕಷ್ಟು ಪರಿಶ್ರಮ ಇರುತ್ತದೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೊಟ್ರೇಶ್ ಮಾಸ್ತರ ಬೆಳಗಲಿ ಹೇಳಿದರು.
ತಾಲೂಕಿನ ಬೆಳಗಲಿ ಗ್ರಾಮದ ಗ್ರಾಮದೇವಿ ದೇವಸ್ಥಾನದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಮಾನಪ್ಪ ಬಡಿಗೇರ ಪರಂಪರೆ ಇಂದಕಟ್ಟಿಗೆಯ ಮೂರ್ತಿತಯಾರು ಮಾಡುತ್ತ ಬಂದಿದ್ದಾರೆ ಇವರು ಮಾಡುವ ಮೂರ್ತಿಗಳು ರಾಜ್ಯದ ಅನೇಕ ಭಾಗಗಳಿಗೆ ಹೋಗಿವಿ. ಇವರುತ ಯಾರು ಮಾಡುವ ಮೂರ್ತಿಗಳಿಗೆ ಅಷ್ಟೊಂದು ಬೇಡಿಕೆ ಇದೆ ಹಾಗಾಗಿ ಇಂದು ಸರ್ಕಾರದ ಶಿಲ್ಪ ಕಲಾ ಅಕಾಡಾಮಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವದು ಹೆಮ್ಮೆಯ ವಿಚಾರ ಎಂದರು.
ಸಂಸ್ಥೆಯ ಅಧ್ಯಕ್ಷ ಫಕ್ಕೀರೇಶ ಮಾಸ್ತರ ಕೊಂಡಾಯಿ ಮಾತನಾಡಿ ಮಾನಪ್ಪ ಬಡಿಗೇರ್ ಅವರಿಗೆ ಸರ್ಕಾರ ಶಿಲ್ಪ ಕಲಾ ಅಕಾಡಮಿ ಪ್ರಸ್ತಿ ನೀಡಿರುವದು ನಮಗೂ ನಮ್ಮ ತಾಲೂಕಿಗೆ ಸಂತೋಷ್ ತಂದಿದೆ ಶಿಗ್ಗಾವಿ ತಾಲೂಕಿಗೆ ಮತ್ತೊಂದು ಪ್ರಶಸ್ತಿ ಹಿರಿಮೆಯನ್ನು ಹೆಚ್ಚಿಸಿದೆ ಎಂದರು. ಸಂಸ್ಥೆಯ ನಿರ್ದೇಶಕ ರಮೇಶ್ ಸಾತಣ್ಣವರ ಮಾತನಾಡಿ ಇವರು ತಯಾರು ಮಾಡುವ ಮೂರ್ತಿಗಳಲ್ಲಿ ಅದರಲ್ಲಿ ಯೂಗ್ರಾಮದೇವಿಯ ಮೂರ್ತಿಗಳಲ್ಲಿ ಬಹಳ ವಿಶೇಷತೆ ಇರುತ್ತದೆ ರಾಜ್ಯದ ಬೇರೆ ಬೇರೆ ಗ್ರಾಮದವರು ಬಂದು ಮೂರ್ತಿ ತಯಾರಿಸಿಕೊಂಡು ಹೋಗುತ್ತಾರೆ ಅಂತಹ ವಿಶಿಷ್ಟ ಕಲಾವಿದರು ಮಾನಪ್ಪ ಬಡಿಗೇರ ಅವರಿಗೆ ಸರ್ಕಾರ ಪ್ರಶಸ್ತಿ ನೀಡಿರುವದು ನಮಗೆಲ್ಲರಿಗೂ ಸಂತೋಷ್ ತಂದಿದೆ ಎಂದರು.
ನಂತರ ಪ್ರಶಸ್ತಿ ಪುರಸ್ಕೃತರಾದ ಮಾನಪ್ಪ ಬಡಿಗೇರ ದಂಪತಿಗಳನ್ನು ಕಲಾ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಬಸವರಾಜ್ ಶಿಗ್ಗಾವ, ಚಿನ್ನಪ್ಪ ಕುಂದಗೋಳ, ಬೈಲ್ಕೊಟ್ರ್ಪನವರ, ಮಲ್ಲಿಕಾರ್ಜುನಗೊಬ್ಬರಗುಂಪಿ, ಈಶ್ವರ್ ಹರಕುಣಿ, ಮಲ್ಲನಗೌಡ ಪಾಟೀಲ, ಎಲ್ಲಪ್ಪ ಹುಬ್ಬಳ್ಳಿ, ಗುರುಪಾದಪ್ಪ ಲಂಗೂಟಿ, ಬಸವರಾಜಕರಡಿ, ಮಹಾಂತೇಶ ಬಡಿಗೇರ, ಶಂಕರಅರ್ಕಸಾಲಿ, ಶಿವಾನಂದ ಹೊಸಮನಿ, ಹಾಗೂ ಬೆಳಗಲಿ ಗ್ರಾಮಸ್ಥರು ಇತರರು ಉಪಸ್ಥಿತರಿದ್ದರು. ಶಿಕ್ಷರಾದ ಎಸ್ ಕೆ ಹೂಗಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.