ಶಿಕ್ಷಕ ಬಸವರಾಜ ಸುಣಗಾರಗೆ ನಾಡ ಹಬ್ಬದಲ್ಲಿ ಸನ್ಮಾನ

ಬೆಳಗಾವಿ ದಿ 16:- ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಇತ್ತೀಚೆಗೆ ಜರುಗಿದ ಇತಿಹಾಸ ಪ್ರಸಿದ್ಧ, 97 ನೆಯ ವರ್ಷದ ನಾಡಹಬ್ಬದ ಸಮಾರೋಪ ಸಮಾರಂಭದಲ್ಲಿ ತಾಲೂಕಿನ ಮಾಸ್ತ ಮರಡಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯ ಹಿರಿಯ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಬಸವರಾಜ ಫಕೀರ​‍್ಪ ಸುಣಗಾರ ರವರನ್ನು ಅವರ ಸಾಹಿತ್ಯ, ಸಾಮಾಜಿಕ, ಶೈಕ್ಷಣಿಕ ಸೇವೆಗಾಗಿ ಸನ್ಮಾನಿಸಲಾಯಿತು   

ಸಮಾರೋಪ ಸಮಾರಂಭದಲ್ಲಿ ನಾಡಹಬ್ಬದ ಉತ್ಸವ ಸಮಿತಿ ಅಧ್ಯಕ್ಷರಾದ ಡಾ, ಎಚ್,ಬಿ,ರಾಜಶೇಖರರವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಯಿತು, ಈ ಸಮಯದಲ್ಲಿ ನಿವೃತ್ತ ಪ್ರಾಚಾರ್ಯರು, ಜಾನಪದ ತಜ್ಞರಾದ ಬಸವರಾಜ ಜಗಜಂಪಿ, ಸಾಹಿತಿಗಳು, ನಿವೃತ್ತ ಪ್ರಾಚಾರ್ಯರಾದ ಡಾ, ಎಚ್ ಆಯ್ ತಿಮ್ಮಾಪುರ, ನಾಡ ಹಬ್ಬದ ಪ್ರಧಾನಕಾರ್ಯದರ್ಶಿ ಗಳಾದ ಡಾ, ಸಿ ಕೆ ಜೋರಾಪುರ, ಸಾಹಿತಿಗಳಾದ ಶೀರೀಷ್ ಜೋಶಿ, ಬಸವರಾಜ ಗಾರ್ಗಿ, ಮಧುಕರ ಗುಂಡೇನಟ್ಟಿ, ಇತರೆ ಕ್ಷೇತ್ರಗಳ ಪ್ರಮುಖರಾದ ನೀಲಗಂಗಾ ಚರಂತಿಮಠ, ಪ್ರಿಯಾ ಪುರಾಣಿಕ, ವಿದ್ಯಾವತಿ ಭಜಂತ್ರಿ, ನಿರ್ಮಲಾ ಪ್ರಕಾಶ, ವಿ ಕೆ ಪಾಟೀಲ, ಆರ್ ಪಿ ಪಾಟೀಲ, ಸೋಮಲಿಂಗ ಮಾವಿನಕಟ್ಟಿ, ಗುರುಗೌಡ ಪಾಟೀಲ ರವರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು   

ಬಸವರಾಜ ಸುಣಗಾರ ರವರು ಕಳೆದ 36 ವರ್ಷಗಳಿಂದ ಶಾಲಾ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ, ಪದೋನ್ನತಿ ಮುಖ್ಯ್ಯೊಪಾದ್ಯಾಯರಾಗಿ, ಸದ್ಯ ಹಿರಿಯ ಮುಖ್ಯ್ಯೊಪಾದ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ತಾಲೂಕಿನ ಹಿರೇಬಾಗೇವಾಡಿ, ವಿಜಯನಗರ, ನಿಂಗ್ಯಾನಟ್ಟಿ, ಈ ಶಾಲೆಗಳಲ್ಲಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಕಾರ್ಯ ಮಾಡಿರುವರು. ಈ ಶಾಲೆಗಳಲ್ಲಿ ಜನತೆಯ ಪಾಲಕರ ಸಹಾಯ ಸಹಕಾರ, ಪ್ರೋತ್ಸಾಹದಿಂದ, ಹಾಗೂ ಎಸ್ ಡಿ ಎಮ್ ಸಿ ಸಹಕಾರ ದೊಂದಿಗೆ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡಿರುವರು,  

ಇವರ ಶೈಕ್ಷಣಿಕ ಕಾರ್ಯಗಳ ಬಗ್ಗೆ ಚಂದನ ದೂರದರ್ಶನದ ಬೆಳಗು ಕಾರ್ಯಕ್ರಮದ ನೇರ ಪ್ರಸಾರದಲ್ಲಿ ಸಂದರ್ಶನ ಪ್ರಸಾರ ವಾಗಿದೆ, ನಾಡಿನ ಹಾಗೂ ಜಿಲ್ಲೆಯ ಹಲವಾರು ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪಡೆದಿರುವರು, ನಾಗನೂರಿನ ರುದ್ರಾಕ್ಷಿಮಠದ ಪೂಜ್ಯ ಡಾ, ಸಿದ್ದರಾಮ ಮಹಾಸ್ವಾಮಿಗಳು ಇವರ ಕುಟುಂಬಕ್ಕೆ ಸನ್ಮಾನ ಮಾಡಿ ಆರ್ಶಿವಾದ ಮಾಡಿರುವರು, ಮುಕ್ತಿಮಠದ ಪೂಜ್ಯ ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸೇವಾ ರತ್ನ ಪ್ರಶಸ್ತಿ ನೀಡಿ ಹರಸಿರುವರು, ಚಿಕ್ಕ ಮುನವಳ್ಳಿಯ ಶ್ರೀ ಶ್ಯಾಠಲೇಶ್ವರ ಮಠದ ಪೂಜ್ಯ ಶ್ರೀ ಶಂಭುಲಿಂಗ ಮಹಾಸ್ವಾಮಿಗಳು ಸೇವಾ ಪ್ರಶಸ್ತಿ ನೀಡಿರುವರರು, ಬಾಗಲಕೋಟದ ಪೂಜ್ಯ ರಾಮಾರೂಢ ಮಠದ ಶ್ರೀಗಳು ಬೆಳಗಾವಿಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಬಂದಾಗ ಇವರ ಕುಟುಂಬವನ್ನು ಸನ್ಮಾನಿಸಿ, ಶುಭ ಕೋರಿರುವರು, ನಿಜಶರಣ ಅಂಬಿಗರ ಚೌಡಯ್ಯ ನವರ ಗುರುಪೀಠದ ಜಗದ್ಗುರು ಶ್ರೀ ಶಾಂತ ಭೀಷ್ಮ ಚೌಡಯ್ಯ ನವರು ಮನೆಗೆ ಆಗಮಿಸಿ ಹರಸಿರುವರು ಜೊತೆಗೆ ನಾಡಿನ ಹಲವು ಶ್ರೀಗಳ ಕೃಪೆಗೆ ಪಾತ್ರರಾಗಿರುವರು, ನಾಡಿನ ಬಹುತೇಕ ಧಾರ್ಮಿಕ ಕೇಂದ್ರಗಳ ಹಾಗೂ ಹುಬ್ಬಳ್ಳಿಯ ಪರಮ ಪೂಜ್ಯ ಶ್ರೀ ಸಿದ್ಧಾರೂಢರ  ಆರಾಧಕರಾಗಿರುವರು,  

ಹಲವು ದಿನಪತ್ರಿಕೆಗಳಲ್ಲಿ ಇವರ ಜೀವನ ಸಾಧನೆ ಕುರಿತು ಲೇಖನ ಪ್ರಕಟವಾಗಿವೆ, ಜಿಲ್ಲೆಯ ಹಿರಿಯ ಸಾಹಿತಿಗಳಾದ ಶ್ರೀ ಶಿವಯೋಗಿ ಕುಸಗಲ್ಲ ರವರು ತಮ್ಮ ಮನದಾಳ ಪುಸ್ತಕದಲ್ಲಿ ಇವರ ಸಾಧನೆ ಕುರಿತು ವ್ಯಕ್ತಿಪರಿಚಯ ಮಾಡಿ  ಮೆಚ್ಚುಗೆ ವ್ಯಕ್ತ ಪಡಿಸಿ ಇವರ ಕಾರ್ಯಗಳಿಗೆ ಶ್ಲಾಘನೆ ಮಾಡಿರುವರು, ಸಾಹಿತಿ ಮಾಹಿತಿ ಕೋಶ -8 ರಲ್ಲಿ ಇವರ ಪರಿಚಯ ಪ್ರಕಟವಾಗಿದೆ   

ಗಂಗಾಮತಸ್ಥ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷರಾಗಿರುವರು ಜೊತೆಗೆ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾಗಿಯೂ ಕಾರ್ಯ ಮಾಡುತ್ತಿರುವರು, ತಮ್ಮ ಸಮುದಾಯದ ಸಭೆ ಸಮಾರಂಭಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಮುದಾಯದ ಜಾಗೃತಿಗಾಗಿ ಇತರೆ ಮುಖಂಡರೊಂದಿಗೆ ಶ್ರಮಿಸುತ್ತಿರುವರು,  

ಕಳೆದ 36 ವರ್ಷಗಳಿಂದ ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯ, ಸಂಘಟನೆ ಸೇವೆ ಗಾಗಿ ಸನ್ಮಾನಿತರಾಗಿರುವ ಬಸವರಾಜ ಸುಣಗಾರ ರವರಿಗೆ  ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾಹಿತಿಗಳು, ಸಾಹಿತ್ಯಾಭಿಮಾನಿಗಳು ಸಂತೋಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ