ಒಳ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ : ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ

ಕಾರವಾರ 16: ಒಳ ಮೀಸಲಾತಿ ಅನುಷ್ಠಾನಕ್ಕೆ   ಆಗ್ರಹಿಸಿ ಉತ್ತರ ಕನ್ನಡ ಜಿಲ್ಲೆಯ  ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ಕಾರವಾರದಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಯಿತು. ಅಂಬೇಡ್ಕರ್ ಸರ್ಕಲ್ ದಿಂದ ಜಿಲ್ಲಾಧಿಕಾರಿ ಕಚೇರಿತನಕ ಮೆರವಣಿಗೆಯಲ್ಲಿ ಬಂದ ಹೋರಾಟ ಸಮಿತಿ ಸದಸ್ಯರು ಹಾಗೂ ದಲಿತ ಕುಟುಂಬದವರು ಜಿಲ್ಲಾಧಿಕಾರಿ ಕಚೇರಿ ಹೊರಗೆ ಸಾಂಕೇತಿಕ ಧರಣಿ ನಡೆಸಿದರು. ಒಳ ಮೀಸಲಾತಿ ಹೋರಾಟ ಸಮಿತಿಯ ಸಂಚಾಲಕ  ಬಸವರಾಜ ಮಾತನಾಡಿ ಇದೇ ಆಗಸ್ಟ್‌ ಒಂದರಂದು ಸರ್ವೋಚ್ಚ ನ್ಯಾಯಾಲಯದ ಏಳು ನ್ಯಾಯಮೂರ್ತಿಗಳ ಪೂರ್ಣ ಪೀಠವು ಎಸ್‌ಸಿ, ಎಸ್‌ಟಿ. ಮೀಸಲಾತಿಯಲ್ಲಿ ಒಳಮೀಸಲಾತಿ ನೀಡುವುದು ರಾಜ್ಯ ಸರಕಾರಕ್ಕೆ ಹಕ್ಕಿದೆ ಎಂದು ಪೀಠವು ತೀರ​‍್ು ನೀಡಿದೆ.ಸುಪ್ರೀಂ ತಿರ​‍್ಿನಂತೆ ಒಳಮೀಸಲಾತಿ ಜಾರಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು  ಆಗ್ರಹಿಸಿದರು. ಮೀಸಲಾತಿಯ ಯಶಸ್ಸು ಇರುವುದೇ ಅದನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವದರಲ್ಲಿ, ಮೀಸಲಾತಿಯನ್ನು ಪರಿಣಾಮಕಾರಿಗೊಳಿಸುವ ಹಲವು ಸಾಧ್ಯತೆಗಳಲ್ಲಿ ಒಳಮೀಸಲಾತಿಯು ಒಂದು.  

ಒಳಮೀಸಲಾತಿಗಾಗಿ ಕರ್ನಾಟಕದಲ್ಲಿ ಮೂರು ದಶಕಗಳ ನಿರಂತರ ಹೋರಾಟ ನಡೆದಿದೆ. ಒಳಮೀಸಲಾತಿ ಹೋರಾಟದ ಬಗ್ಗೆ ಪ್ರಸ್ತುತ ಸರಕಾರವು ಕೇವಲ ಸಹಾನುಭೂತಿ ತೋರಿಸುತ್ತದೆ ನಿಜ. ಸಹಾನಭೂತಿ ಕ್ರಿಯಾತ್ಮಕ ರೂಪ ಪಡೆಯದಿದ್ದರೆ ಅಪ್ರಯೋಜಕ ಎಂದು ಅವರು ನುಡಿದರು.  ಸರ್ವೋಚ್ಚ ನ್ಯಾಯಾಲಯದ ಪೂರ್ಣ ಪೀಠವು ಆಗಸ್ಟ್‌ ಒಂದರಂದು ತೀರ​‍್ು ನೀಡಿ, ಸಂವಿಧಾನ ಪರಿಚ್ಚೆದ 341ನೇ ತಿದ್ದುಪಡಿಯ ಅವಶ್ಯಕತೆ ಇರುವದಿಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿದೆ ಎಂದರು.ಒಳಮೀಸಲಾತಿ ವರ್ಗಿಕರಣದಿಂದ ಎಲ್ಲ ಜಾತಿಗಳಿಗೆ ಸಮಾನ ಅವಕಾಶ ಲಭಿಸುತ್ತದೆ. ಹಾಗಾಗಿ ಹೋರಾಟಗಳನ್ನೂ ಮನಗಂಡಿದ್ದ ಸರ್ಕಾರವೂ ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನ ನಡೆಸಿ ವರದಿ ನೀಡುವಂತೆ 2005 ರಲ್ಲಿ ರಚಿಸಿದ ನ್ಯಾಯಮೂರ್ತಿ ಎ ಜೆ ಸದಾಶಿವ ಏಕ್ ಸದಸ್ಯ ಆಯೋಗವು ರಾಜ್ಯದಲ್ಲಿ 101 ಎಸ್‌ಸಿ ಜಾತಿ ಸಮುದಾಯಗಳ ಕೌಟುಂಬಿಕ ಸಮೀಕ್ಷೆ ನಡೆಸಿ ಸಮಗ್ರ ಅಧ್ಯಯನದ ವರದಿಯನ್ನು 2012 ರಲ್ಲಿ ಸರಕಾರಕ್ಕೆ ಸಲ್ಲಿಸಿದ್ದಾರೆ ಅದರ ದತ್ತಾಂಶಗಳು ಸರಕಾರದ ಬಳಿ ಇದೆ ಎಂದರು. ಪರಿಶಿಷ್ಟ ಜಾತಿ , ವರ್ಗಗಳ ಜನಸಂಖ್ಯೆಯು ರಾಜ್ಯದಲ್ಲಿ ಅತಿ ಹೆಚ್ಚಿರುವದನ್ನು ಮನಗಂಡಿರುವ ಉಚ್ಚ ನ್ಯಾಯಾಲಯದ ಸೂಚನೆಯಂತೆ 2019 ರಲ್ಲಿ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ರಚಿಸಿ ಸಮಗ್ರ ವರದಿ ನೀಡಲು ಸರಕಾರದ ನಿರ್ದೇಶನದಂತೆ, ಅನುಸೂಚಿತ ಜಾತಿ , ಪಂಗಡಗಳ ಜನಸಂಖ್ಯೆ ಹೋಲಿಸಿದಲ್ಲಿ ಜನಸಂಖ್ಯೆ ಪ್ರಮಾಣದಲ್ಲಿರಬೇಕಾದ ಮೀಸಲಾತಿಯನ್ನು ಶೇ. 15 ರಿಂದ ಶೇ .17 ರಷ್ಟು ಏರಿಕೆ ಮಾಡಲು ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ .3 ರಿಂದ ಶೇ 7 ಕ್ಕೆ ಹೆಚ್ಚಿಸಲು ವರದಿ ನೀಡಿದೆ ಅದರಂತೆ. ನ್ಯಾಯಮೂರ್ತಿ ಸದಾಶಿವ ಆಯೋಗದ ಮೂಲ ಆಶಯವನ್ನು ಉಳಿಸಿಕೊಂಡು 2011 ರ ಜನಗಣತಿಯ ಸಂಖ್ಯಾಧಾರಗಳು ಮತ್ತು ವಿಸ್ತರಿಸಲಾದ ಶೇ .17 ರ ಮೀಸಲಾತಿಯನ್ನು ಬಳಸಿಕೊಂಡು ವರ್ಗಿಕರಣ ಸೂತ್ರ ರೂಪಿಸಲಾಗಿದೆ.  

2011 ರ ಜನಗಣತಿಯ ವರದಿಯಂತೆ ಕರ್ನಾಟಕದಲ್ಲಿ ಎಸ್ಸಿ 101 ಜಾತಿಗಳಿದ್ದು ಒಟ್ಟು ಜನಸಂಖ್ಯೆ 1,04,74,992 ಇದೆ.ಈಗಿರುವ ಶೇ 17 ರ ಮೀಸಲಾತಿಯನ್ನು ವರ್ಗಿಕರಿಸಿದರೆ ತಲಾ 6 ಲಕ್ಷ ಜನಸಂಖ್ಯೆಗೆ ಶೇ .1 ರಷ್ಟು ಮೀಸಲಾತಿ ದೊರಕುತ್ತದೆ ಎಂದರು.  

ಪ್ರಮುಖ ಬೇಡಿಕೆಗಳು : ಕೋರ್ಟ್‌ ತೀರ್ಪು ನೀಡಿದಂತೆ ಒಳಮೀಸಲಾತಿ ಜಾರಿಗೊಳಿಸಬೇಕು . 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ 6 ನೇ ಗ್ಯಾರಂಟಿಯಾದ  ಒಳಮೀಸಲಾತಿ ಕಲ್ಪಿಸಿಕೊಡಬೇಕು.ಒಳಮೀಸಲಾತಿ ಜಾರಿಯಾಗುವವರೆಗೆ ಬ್ಯಾಕಲಾಗ್ ಹುದ್ದೆಗಳನ್ನು ಮತ್ತೆ ಇತರೆ ನೇಮಕಾತಿಗಳನ್ನು ರದ್ದು ಪಡಿಸಬೇಕು.ಜಾತಿ ಜನಗಣತಿ ವರದಿ ಮುನ್ನೆಲೆಗೆ ತಂದು ಸುಪ್ರೀಂ ಕೋರ್ಟ್‌ ತೀರ​‍್ಿನ ವಿರುದ್ದ ಗೊಂದಲ ಸೃಷ್ಠಿಸುವ ಜಾತಿ ಜನಗಣತಿ ವರದಿಯನ್ನು ಕೈಬಿಟ್ಟು ,ಮೊದಲು ಒಳಮೀಸಲಾತಿ ಜಾರಿಗೊಳಿಸಲು ಪ್ರತಿಭಟನಾಕಾರರು ಆಗ್ರಹಿಸಿದರು.