ಶಿಗ್ಗಾವಿ 30: ನೂತನ ಶಾಸಕ ಯಾಸೀರಖಾನ ಪಠಾಣ ಹುಲಗೂರಿನಲ್ಲಿ ಮಾಜಿ ಶಾಸಕ, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿಯವರನ್ನು ಸನ್ಮಾನಿಸಿ ಗೆಲವಿನ ಕಾರಣಕ್ಕೆ ಅಭಿನಂಸಿ, ಹೆಸ್ಕಾಂ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡುತ್ತಿರುವುದಕ್ಕೆ ಸುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಶಾಸಕ ಯಾಸೀರಖಾನ ಪಠಾಣ ಮಾತನಾಡಿ, ಶಿಗ್ಗಾವಿ ವಿಧಾನಸಭಾ ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ನನ್ನ ರಾಜಕೀಯ ಗುರುಗಳಾದ ಅಜ್ಜಂಪೀರ ಖಾದ್ರಿಯವರು ಹಗಲಿರುಳು ಎನ್ನದೆ ಸಕ್ರೀಯವಾಗಿ ಶ್ರಮಿಸಿದ್ದಾರೆ. ನನ್ನ ಗೆಲುವಿನಲ್ಲಿ ಬಹು ಮುಖ್ಯವಾದ ಪಾತ್ರ ಅವರದ್ದಾಗಿದೆ. ಕಾಂಗ್ರೆಸ್ ಪಕ್ಷದ ವರಿಷ್ಟರು ಅವರನ್ನು ಹೆಸ್ಕಾಂ ಅಧ್ಯಕ್ಷರನ್ನಾಗಿ ನೇಮಿಸಿ, ಕ್ಯಾಭಿನೇಟ ದರ್ಜೆಯ ಸ್ಥಾನಮಾನ ನೀಡಿರುವುದು ಮತ್ತಷ್ಟು ಸಂತೋಷವಾಗಿ. ಕ್ಷೇತ್ರದ ಎಲ್ಲಾ ವರ್ಗಗಳ ನಾಯಕರ ವಿಸ್ವಾಸದೊಂದಿಗೆ ಕ್ಷೇತ್ರದ ಅಭಿವೃದ್ದಿ ಮತ್ತು ಜನಪರ ಆಡಳಿತ ನೀಡಲು ಶ್ರಮಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಎಸ್.ಎಪ್. ಮಣಕಟ್ಟಿ, ಗುಡ್ಡಪ್ಪಾ ಜಲದಿ, ಅಡಿವೆಪ್ಪಾ ಮಾದಾಪುರ, ಮಂಜು ತಿಮ್ಮಾಪುರ, ಎಂ.ಜೆ. ಮುಲ್ಲಾ, ಜಾಫರ ಭಾಗ್ವಾನ, ಅಣ್ಣಾಪ್ಪಾ ನಡಟ್ಟಿ, ಬೀರೇಶ ಜಟ್ಟೆಪ್ಪನವರ, ರವಿ ಕೋಣಪ್ಪನವರ, ವಸಂತ ಭಾಗೂರ ಇತರರಿದ್ದರು.