ಬೇಡ ಜಂಗಮ ಸಮಾಜದಿಂದ ಪಿಎಸ್‌ಐ ಜ್ಯೋತಿ ಖೋತಗೆ ಸನ್ಮಾನ
Felicitation to PSI Jyoti Khota by Beda Jangam Samaj
ತಾಳಿಕೋಟಿ 25: ಪಟ್ಟಣದ ಪೊಲೀಸ್ ಠಾಣೆಗೆ ನೂತನ ಪಿಎಸ್‌ಐ ಆಗಿ ಆಗಮಿಸಿದ ಜ್ಯೋತಿ ಖೋತ ಇವರಿಗೆ ತಾಲೂಕ ಬೇಡ ಜಂಗಮ ಸಮಾಜದ ವತಿಯಿಂದ ತಾಲೂಕ ಗೌರವ ಅಧ್ಯಕ್ಷರು, ಜ್ಯೋತಿಷ್ಯ ರತ್ನ ಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳು ಮಾತನಾಡಿ ಪಟ್ಟಣ ಸೇರಿ ತಾಲೂಕಿನಲ್ಲಿ ಶಾಂತಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹುದ್ದೆಗೆ ನೀವು ವರ್ಗಾವಣೆಗೊಂಡು ಬಂದಿದ್ದೀರಿ ನಿಮ್ಮ ಈ ಸೇವಾ ಅವಧಿಯಲ್ಲಿ ಯಾವ ನಿರಪರಾಧಿಗೂ ತೊಂದರೆ ಆಗದಂತೆ ನೋಡಿಕೊಂಡು ಸರ್ವ ಸಮಾಜದ ಜನರ ಮಧ್ಯೆ ಸಾಮರಸ್ಯವನ್ನು ಬೆಳೆಸುವ ಪ್ರಯತ್ನವನ್ನು ತಾವು ಮಾಡಬೇಕು.
ಇದಕ್ಕೆ ನಮ್ಮ ಸಮಾಜವು ಸಂಪೂರ್ಣವಾಗಿ ನಿಮಗೆ ಸಹಕಾರ ನೀಡುತ್ತದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಪಿಎಸ್‌ಐ ಜ್ಯೋತಿ ಖೋತ ಅವರು ಗುರುಗಳ ನೇತೃತ್ವದಲ್ಲಿ ತಾವುಗಳು ಸಮಾಜದ ವತಿಯಿಂದ ನನಗೆ ನೀಡಿದ ಈ ಸನ್ಮಾನ ನನ್ನ ಪಾಲಿಗೆ ಆಶೀರ್ವಾದವಾಗಿದೆ ನಿಮ್ಮೆಲ್ಲರ ಈ ಸಲಹೆ ಸೂಚನೆಗಳನ್ನು ಪಾಲಿಸುತ್ತೇನೆ. ತಾಲೂಕಿನ ಶಾಂತಿ ಕಾನೂನು ಸುವ್ಯವಸ್ಥೆ ಕೆಡದಂತೆ ನೋಡಿಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ, ನಿಮ್ಮ ಮಾರ್ಗದರ್ಶನ ಹಾಗೂ ಸಹಕಾರ ಸದಾ ಇರಲಿ ಎಂದರು.
ಈ ಸಮಯದಲ್ಲಿ ಬೇಡ ಜಂಗಮ ಸಮಾಜದ ತಾಲೂಕ ಅಧ್ಯಕ್ಷ ಶರಣಯ್ಯ ಹಿರೇಮಠ, ಉಪಾಧ್ಯಕ್ಷ ಶ್ರೀ ಗುರು ಹಿರೇಮಠ, ಕಾರ್ಯದರ್ಶಿಗಳಾದ ಈರಯ್ಯ ಹಿರೇಮಠ, ಗಜದಂಡಯ್ಯ ಹಿರೇಮಠ, ಕೋಶಾಧಿಕಾರಿ ಕಾಶಿನಾಥ ಹಿರೇಮಠ ಮಂಜುನಾಥಗೌಡ ಕವಡಿಮಟ್ಟಿ ಚಬನೂರ ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 