ಹಾರೂಗೇರಿ 19: 2024-ನೇ ಸಾಲೀನ ಟ್ಯಾಲೆಂಟ್ ಸರ್ಚ್ ಪರೀಕ್ಷೆಯಲ್ಲಿ ಕುಡಚಿ ಮತಕ್ಷೇತ್ರದ ಅಳಗವಾಡಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಅಳಗವಾಡಿ ವಿದ್ಯಾರ್ಥಿ ಕುಮಾರ ವಿಕಾಸ ಮಾಂಗ ಪ್ರಶಸ್ತಿಗೆ ಭಾಜನರಾಗಿದ್ದು, ವಿದ್ಯಾರ್ಥಿಯನ್ನು ಸುವರ್ಣ ಸೌಧದ ಸೆಂಟ್ರಲ್ ಹಾಲ್ ನಲ್ಲಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಅವರು ಸನ್ಮಾನಿಸಿ ಗೌರವಿಸಿದರು.
ನಂತರ ಮಾತನಾಡಿ ಅವರು ಮಕ್ಕಳಲ್ಲಿ ಬಹುಮುಖ ಪ್ರತಿಭೆಗಳಿದ್ದು,. ಶಿಕ್ಷಕರು ಹಾಗೂ ಪಾಲಕರು ಮಕ್ಕಳ ಕಲಿಕಾ ಆಸಕ್ತಿಗೆ ಪ್ರೋತ್ಸಾಹ ನೀಡಬೇಕು. ಯಾವ ಕ್ಷೇತ್ರದಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಹಂಬಲವಿದೆಯೋ, ಆ ಕ್ಷೇತ್ರದಲ್ಲಿ ಮುಂದುವರೆಯಲು ಪ್ರೇರೆಪನೆ ನೀಡಬೇಕು. ಮಕ್ಕಳ ಭವಿಷ್ಯವನ್ನು ಉಜ್ವಲ ಮಾಡುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ಶಾಸಕ ತಮ್ಮಣ್ಣವರ ಹೇಳಿದರು. ಚಿಕ್ಕೋಡಿ ಡಯಟ್ ಉಪನ್ಯಾಸಕ ಕುಮಾರ ಮಾದರ, ಕುಡಚಿ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಹಾಲ್ಗುಣಿ, ಸಚೀನ ಹಳಕಲ್ಲ, ಭೀಮು ಚೌಗಲಾ, ವರ್ಧಮಾನ ಶಿರಹಟ್ಟಿ, ಕಲ್ಮೇಶ ಕಾಂಬಳೆ, ಪರಮಾನಂದ ಗಲಗಲಿ ಮತ್ತೀತರರು ಉಪಸ್ಥಿತರಿದ್ದರು.