ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನ ಸಮಾರಂಭ

ಶಿಗ್ಗಾವಿ28 : 71ನೇ ಗಣರಾಜ್ಯೋತ್ಸವ ಕಾರ್ಯಕ್ರದ ಪ್ರಯುಕ್ತ  ತಾಲೂಕಿನ ಕಬನೂರ ಗ್ರಾಮದಲ್ಲಿ ದೇಶಪ್ರೇಮಿ ಯುವಕ ಸಂಘದ ಉಧ್ಘಾಟನಾ ಸಮಾರಂಭ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನ ಸಮಾರಂಭ ಜರುಗಿತು.

  ಯುವಕ ಸಂಘ ಉದ್ಘಾಟಿಸಿ ಮಾಜಿ ಜಿಪಂ ಸದಸ್ಯ ಬಿ.ಟಿ.ಇನಾಮತಿ ಮಾತನಾಡಿ, ದೇಶಭಿಮಾನದ ಕಿಚ್ಚು ಹಚ್ಚುವ ಕಾರ್ಯ ಪ್ರತಿಯೊಬ್ಬ ಭಾರತೀಯನು ಮಾಡಬೇಕಾಗಿದ್ದು, ದೇಶಕ್ಕಾಗಿ ಗಡಿ ಕಾಯುವ ಸೈನಿಕರನ್ನು ಗೌರವಿಸುವದು ನಮ್ಮ ಆದ್ಯ ಕರ್ತವ್ಯವಾಗಿದೆ, ದೇಶದ ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ ಅವರ ಸಾದನೆ ಅನನ್ಯವಾಗಿದ್ದು ಸಂವಿಧಾನರಹಿತ ದೇಶದ ಸ್ಥಿತಿಯನ್ನು ಉಹಿಸಿಕೊಳ್ಳಲು ಸಾದ್ಯವಿಲ್ಲ ಎಂದರು.

ಗ್ರಾಪಂ ಸದಸ್ಯ ಶಂಕ್ರಪ್ಪ ಶೆಟ್ಟೆಪ್ಪನವರ ಮಾತನಾಡಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ಸಂಘಸಂಸ್ಥೆಗಳ ಪಾತ್ರ ಮಹತ್ವದ್ದಾಗಿದ್ದು, ಯುವಕರು ಗ್ರಾಮೀಣ ಭಾಗದ ಶಿಕ್ಷಣ,ಆರೋಗ್ಯ, ಪರಿಸರ ಸಂರಕ್ಷಣೆ ಮುಂತಾದ ಕ್ಷೇತ್ರದ ಬಗ್ಗೆ ಆದ್ಯತೆ ನೀಡಿ ಶ್ರಮ ವಹಿಸುವ ಅಗತ್ಯತೆ ಇದೆ ಎಂದರು.

ದೇಶಭಕ್ತ ಯುವಕ ಸಂಘದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಸನ್ಮಾನಿಸಿ ಗೌರವಿಸಲಾಯಿತು, ಯೋದರಾದ ಶೇಕಪ್ಪ ಮಲ್ಲೂರ, ಶ್ರೀಶೈಲ ಸೂರಗೊಂಡ, ಉಳವಪ್ಪ ದುಂಡಪ್ಪನವರ, ಕರವೇ ಸ್ವಾಭಿಮಾನಿ ಬಣದ ತಾಲೂಕಾ ಕಾರ್ಯಾದ್ಯಕ್ಷ ಬರಮಪ್ಪ ದೊಡ್ಡಮನಿ, ನೂತನವಾಗಿ ವಿ.ಎಸ್.ಎಸ್.ಬ್ಯಾಂಕ್ ನಿದರ್ೇಶಕ ಮಂಡಳಿ, ಗ್ರಾಪಂ ಸದಸ್ಯರು, ಹಾಗೂ ಕಲಾವಿದರು ಸೇರಿದಂತೆ ವಿವಿದ ಕ್ಷೇತ್ರದಲ್ಲಿ ಸಾದನೆಗೈದ ಮಹನೀಯರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಶಿವಪ್ಪ ವಾಲಿಕಾರ, ಶೇಕಪ್ಪ ಗುಂಡಣ್ಣವರ, ರಾಮಣ್ಣ ಕುರಬರ, ಮಾಲತೇಶ ಕಾಳೆ, ಆಶೋಕ ಓಲೆಕಾರ, ಕೋಟೆಪ್ಪ ಕಮ್ಮಾರ,ಯಸೋದಾ ಪಾಟೀಲ, ರಮೇಶ ಈಟಿ , ಮೌಲಾಲಿ ನದಾಫ, ಬಾಶುಸಾಬ ಕಾಳಂಗಿ, ಕಲ್ಲಯ ಗೊಟಗೋಡಿಮಠ, ದೇಶಪ್ರೇಮಿ ಯುವಕಸಂಘದ ಪದಾಧಿಕಾಗಳಾದ, ಬಸವನಗೌಡ.ನಿ. ಪಾಟೀಲ, ಹರೀಶ ಮೇಟಿ, ಶರಣಪ್ಪ ವಿಜಾಪೂರ, ಕಲ್ಲನಗೌಡಾ ಇನಾಮತಿ, ಕುಬೇರಪ್ಪ ಗುಂಡಣ್ಣವರ, ಈರಣ್ಣ ಬಡ್ಡಿ, ಶಂಬು ಜಕ್ಕಣ್ಣವರ, ಕುಮಾರ ಹಿರೇಮಠ, ನೀಲಪ್ಪ ಗುಂಡಣ್ಣವರ, ರಮೇಶ ಕರೆಸಿರಿ, ಪ್ರವೀಣ ಓಲೆಕಾರ, ಹರೀಶ ಜಕ್ಕಣ್ಣವರ, ವಿನಾಯಕ ಕಮ್ಮಾರ, ದೇವೇಂದ್ರಪ್ಪ ಸುಣಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.