ಲೋಕದರ್ಶನ ವರದಿ
ಕಾಗವಾಡ 18: ಯುವಕರು ಸಮಾಜದ, ಜನ್ಮ ನೀಡಿದ ತಂದೆ-ತಾಯಿ ಇವರ ಋಣ ತೀರಿಸಲು ತಮಗೆ ಲಭ್ಯವಾದ ಅವಕಾಶದ ಸದುಪಯೋಗ ಪಡೆದುಕೊಂಡು ಅತ್ಯುತ್ತಮ ಶಿಕ್ಷಣ ಬಳಿಕ ಉನ್ನತ ಸ್ಥಾನದಲ್ಲಿ ಸೇವೆ ಸಲ್ಲಿಸಲು ಪ್ರಯತ್ನಿಸಬೇಕು. ಕಾಗವಾಡ ಪಿಎಸ್ಐ ಹನಮಂತ ಶಿರಹಟ್ಟಿ ಮತ್ತು ಜುಗೂಳದ ರವೀಂದ್ರ ಪಾಟೀಲ ಇವರ ಆದರ್ಶ ಮುಂದಿಟ್ಟು ಪ್ರಯತ್ನಿಸಬೇಕು. ಅಂದರೆ ಮಾತ್ರಜೀವನ ಸಾರ್ಥಕವಾಗುತ್ತದೆಯೆಂದು ಹಿರಿಯ ವೈದ್ಯರೂ, ದಿ ಶೇಡಬಾಳ ಅರ್ಬನ್ಬ್ಯಾಂಕ್ ನಿದರ್ೇಶಕ ಡಾ.ಬಿ.ಬಿ.ಪಾಟೀಲ ಹೇಳಿದರು.
ದಿ.17ರಂದು ಶೇಡಬಾಳದ ಅರ್ಬನ್ಕೋ-ಆಪ್ ಬ್ಯಾಂಕ್ ಸಭಾ ಭವನದಲ್ಲಿ ಸಾಧನೆೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇತ್ತಿಚಿಗೆ ರಾಜ್ಯಸಕರ್ಾರ ಕೆ.ಎ.ಎಸ್. ಪರೀಕ್ಷೆ ತೆಗೆದುಕೊಂಡಿದ್ದರು. ಇದರಲ್ಲಿ ಕಾಗವಾಡ ಪಿಎಸ್ಐ ಹನಮಂತ ಶಿರಹಟ್ಟಿ ಇವರು ಉತ್ತಿರ್ಣರಾಗಿ ತಹಸೀಲ್ದಾರ ಹುದ್ದೆಗೆ ಆಯ್ಕೆಯಾಗಿದ್ದಾರೆ. ಇದರಂತೆ ಜುಗೂಳ ಗ್ರಾಮದರವೀಂದ್ರ ಪರಸಗೌಡಾ ಪಾಟೀಲ ಇವರು ಸಹಕಾರ ನಿಬಂಧಕ ಹುದ್ದೆಗೆ ನೇಮಕಗೊಂಡಿದ್ದಾರೆ. ಈ ಇಬ್ಬರನ್ನು ಸನ್ಮಾನಿಸುವ ಸಮಾರಂಭ ನೆರವೇರಿತು.
ಸನ್ಮಾನ ಸಮಾರಂಭದಲ್ಲಿ ಬ್ಯಾಂಕಿನ ಅಧ್ಯಕ್ಷಡಾ. ವಿಜಯಕುಮಾರ ಲೋಕುರ, ಸಂಚಾಲಕರಾದ ಶೀತಲ ಪಾಟೀಲ, ಭರತೇಶ್ವರ ಪಾಟೀಲ, ರಾಜು ನಾಂದ್ರೆ, ಅಪ್ಪಾಸಾಹೇಬ ಚೌಗುಲೆ, ಐ.ಬಿ.ಪಾಟೀಲ, ಎಸ್.ಎ.ಮುಕುಂದ, ಬಿ.ಬಿ.ಕಾಂಬಳೆ, ಸೇರಿದಂತೆ ಅನೇಕರು ಇದ್ದರು.