ಧಾರವಾಡ 14: ಕರ್ನಾಟಕ ಸರ್ಕಾರವು ಕೊಡಮಡುವ ರಾಷ್ಟ್ರೀಯ ಬಸವ ಪ್ರಶಸ್ತಿಗೆ ಭಾಜನರಾದ ಡಾ. ಎಸ್ ಆರ್ ಗುಂಜಾಳ ಅವರನ್ನು ಅವರ ನಿವಾಸದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಘಟಕದ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು.
ಡಾ. ಲಿಂಗರಾಜ ಅಂಗಡಿ, ಮಹಾಂತೇಶ ನರೇಗಲ್, ಪ್ರೊ. ಕೆ ಎಸ್ ಕೌಜಲಗಿ, ಶಾಂತವೀರ ಬೆಟಗೇರಿ, ಡಾ. ಶರಣಮ್ಮ ಗೊರೇಬಾಳ, ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ, ಬಸವಣ್ಣೆಪ್ಪ ಗೆದ್ದಕೇರೀ ಮುಂತಾದವರು ಉಪಸ್ಥಿತರಿದ್ದು ಸನ್ಮಾನ ಮಾಡಿ ಅಭಿನಂದನ ಪರ ಮಾತುಗಳನ್ನು ಹೇಳಿದರು ಎಂದು ಡಾ. ಲಿಂಗರಾಜ ಅಂಗಡಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.